ವಿಕ ಸುದ್ದಿಲೋಕ ಎಚ್ .ಡಿ.ಕೋಟೆತಾಲೂಕು ಉಪನ್ಯಾಸಕರ ಸಂಘ , ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಸಂಘದ ಜಿಲ್ಲಾಧ್ಯಕ್ಷ ಎಂ.ಎಂ. ಮಹದೇವ ಮತ್ತು ಪದಾಧಿಕಾರಿಗಳ ಸಮ್ಮುಖದಲ್ಲಿಆಯ್ಕೆ ನಡೆಯಿತು.
ಚನ್ನಪ್ಪ (ಅಧ್ಯಕ್ಷ), ಚಿಕ್ಕಣ್ಣ ಸಿ. (ಗೌರವಾಧ್ಯಕ್ಷ), ಶ್ರೀನಿವಾಸ್ (ಕಾರ್ಯಾಧ್ಯಕ್ಷ), ಗಣೇಶ್ (ಪ್ರಧಾನ ಕಾರ್ಯದರ್ಶಿ), ಯೋಗೇಶ್ ಬಾಬು ಸಿ. (ಖಜಾಂಚಿ), ಗುಣ (ಉಪಾಧ್ಯಕ್ಷರು), ಶಿವಣ್ಣ ಸಿ. (ಪ್ರಧಾನ ಸಂಘಟನಾ ಕಾರ್ಯದರ್ಶಿ), ಪುಟ್ಟಸ್ವಾಮಿ ಎಚ್ ಎಂ (ಕಾರ್ಯದರ್ಶಿ), ಮಹೇಶ್ ಡಿ. (ಜಂಟಿ ಕಾರ್ಯದರ್ಶಿ), ರಾಜೇಶ್ (ಸಂಚಾಲಕರು), ರವಿ (ಮಾಧ್ಯಮ ಸಲಹೆಗಾರರು), ಮಹೇಶ್ (ನಾಮ ನಿರ್ದೇಶಿತ ನಿರ್ದೇಶಕರು ) ಸಂಘದ ಸದಸ್ಯರಾಗಿ ಆಯ್ಕೆಯಾದರು.
ಜಿಲ್ಲಾಧ್ಯಕ್ಷ ಎಂ.ಎಂ. ಮಹದೇವ ಮಾತನಾಡಿ, ‘‘ತಾಲೂಕು ಮಟ್ಟದ ಉಪನ್ಯಾಸಕರ ಸಂಘಗಳು ಸಂಘಟನಾ ಶಕ್ತಿಯ ಮೂಲ ಬಿಂದುವಾಗಿದೆ. ನಮ್ಮ ಹಕ್ಕುಗಳನ್ನು ಪಡೆಯಲು, ಸಮಾಜದ ಒಳಿತಿಗಾಗಿ ಮತ್ತು ದೇಶದ ಪ್ರಗತಿಗಾಗಿ ಸಂಘಗಳು ಬೇಕಾಗಿದೆ. ಎಲ್ಲರೂ ಸಂಘಟಿತರಾಗಿ ಸದೃಢ ಸಮಾಜ ನಿರ್ಮಿಸೋಣ,’’ ಎಂದರು.
ಜಿಲ್ಲಾಸಂಘದ ಪ್ರಧಾನ ಸಂಘಟನಾ ಕಾರ್ಯದರ್ಶಿ ಡಾ.ಆಶಾ ಎಂ.ಆರ್ . ಮಾತನಾಡಿ, ‘‘ಯಾವುದೇ ಸಂಘಟನೆಯ ಯಶಸ್ಸು ನಿಂತಿರುವುದು ಸದಸ್ಯರ ಪ್ರಾಮಾಣಿಕತೆ, ನಂಬಿಕೆಯ ಮೇಲೆ. ನಾವೆಲ್ಲರೂ ಭೇದ ಭಾವ ಮರೆತು ಒಂದು ಗುರಿಯತ್ತ ಹೆಜ್ಜೆ ಇಟ್ಟರೆ ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು. ಸಂಘಟನೆಯ ಶಕ್ತಿಯೇ ನಾಡಿನ ಮತ್ತು ದೇಶದ ಶಕ್ತಿ,’’ ಎಂದರು.
ತಾಲೂಕಿನ ಎಲ್ಲಾಕಾಲೇಜಿನ ಉಪನ್ಯಾಸಕರು ಹಾಜರಿದ್ದರು.
ಪೋಟೋ ಇದೆ;ಋ್ಗಖ25ಏಈಓ3ಇ
ಎಚ್ .ಡಿ.ಕೋಟೆ ತಾಲೂಕಿನ ಉಪನ್ಯಾಸಕರ ಸಂಘಕ್ಕೆ ನೂತನವಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.