ವಾರ ಭವಿಷ್ಯ

Contributed byShridevi Ambekallu|Vijaya Karnataka
this weeks horoscope your stars and life rules
ಮೇಷ

ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಅಸಮರ್ಥರಾಗುವಿರಿ. ಕುಟುಂಬದಲ್ಲಿವೈಮನಸ್ಸು. ಪ್ರಯತ್ನಗಳೆಲ್ಲವೂ ವ್ಯರ್ಥ. ನೀವು ಕೂಡಿಟ್ಟ ಹಣದ ಬಗ್ಗೆ ಜಾಗರೂಕರಾಗಿರಿ. ಮನೆಯಲ್ಲಿಅನಾವಶ್ಯಕವಾಗಿ ವಾದ ಮಾಡಬೇಡಿ.
ಅದೃಷ್ಟ ಸಂಖ್ಯೆ 4

ವೃಷಭ

ದುಡುಕುತನ ಬಿಡುವುದು ಒಳ್ಳೆಯದು. ಪಿತ್ತ ಹೆಚ್ಚಾಗಿ ಜ್ವರ ಬರುವುದು. ಸಂಗಾತಿಗೂ ಈ ರೀತಿಯ ಸಮಸ್ಯೆಗಳು ಕಾಡುತ್ತವೆ. ಸರಕಾರಿ ಕೆಲಸ ಕಾರ್ಯಗಳು ಕೈಗೂಡುತ್ತವೆ. ಹಣಕಾಸಿನ ಸ್ಥಿತಿಗತಿ ಉತ್ತಮ. ಕಾರ್ಯಕ್ಷೇತ್ರದಲ್ಲಿಜಯ ನಿಮ್ಮದೇ.

ಅದೃಷ್ಟ ಸಂಖ್ಯೆ 1

ಮಿಥುನ

ವಿದ್ಯಾರ್ಥಿಗಳಿಗೆ ಓದಿನಲ್ಲಿತೊಂದರೆ ಉಂಟಾಗುವುದು. ಹೆಚ್ಚು ಖರ್ಚಾಗುತ್ತದೆ. ನಿಮ್ಮ ಪ್ರಯತ್ನವೆಲ್ಲವೂ ವಿಫಲವಾಗುವುದು. ಎಲ್ಲವೂ ನಿಮ್ಮ ವಿರುದ್ಧವಾಗಿ ನಡೆಯುತ್ತದೆ. ಆದರೂ ದೈವ ಬಲವಿರುವ ಕಾರಣ ಅಂತ್ಯದಲ್ಲಿನೆಮ್ಮದಿ ಕಾಣುವಿರಿ.

ಅದೃಷ್ಟ ಸಂಖ್ಯೆ 3

ಕಟಕ

ದುಸ್ವಪ್ನಗಳು ಬೀಳುವುದು. ಸಂಗಾತಿಯೊಂದಿಗೆ ವೈಮನಸ್ಸು. ಮಾನಸಿಕ ತೊಳಲಾಟ. ರಿಯಲ್ ಎಸ್ಟೇಟ್ ವ್ಯಾಪಾರಗಳಲ್ಲಿಲಾಭ. ವಾದ ವಿವಾದಗಳಲ್ಲಿಗೆಲ್ಲುವಿರಿ. ಸರಕಾರಿ ಕೆಲಸಗಳು ಕೈಗೂಡುವುದು. ಭೋಗ ವಸ್ತುಗಳನ್ನು ಕೊಳ್ಳುವಿರಿ.

ಅದೃಷ್ಟ ಸಂಖ್ಯೆ 9

ಸಿಂಹ

ಕುಟುಂಬದಿಂದ ದೂರವಿರಬೇಕಾಗಿ ಬರುತ್ತದೆ. ಪ್ರಯಾಣದಲ್ಲಿತೊಂದರೆ. ಧನ ಕನಕಗಳನ್ನು ಕಳೆದುಕೊಳ್ಳುವ ಭಯ. ಖರ್ಚು ಹೆಚ್ಚಾಗುತ್ತದೆ. ಬಂಧು ಬಾಂಧವರು ದೂರ ಮಾಡುತ್ತಾರೆ. ವಿದ್ಯಾರ್ಥಿಗಳಿಗೆ ಶುಭದಾಯಕ.

ಅದೃಷ್ಟ ಸಂಖ್ಯೆ 5

ಕನ್ಯಾ

ಹಣಕಾಸಿಗೆ ಕೊರತೆ ಇರುವುದಿಲ್ಲ. ಚಿಂತೆ ದೂರವಾಗುತ್ತದೆ. ಸ್ನೇಹಿತರಿಂದ ಅನುಕೂಲ. ಕೈ ಹಾಕಿದ ಕೆಲಸ ಕಾರ್ಯಗಳು ಜಯ. ಸರಕಾರಿ ಕೆಲಸ ಕಾರ್ಯಗಳಲ್ಲಿಜಯ ಕಾಣುವಿರಿ. ಮನೆಯಲ್ಲಿಶುಭಕಾರ್ಯಗಳು ನೆರವೇರುವುದು. ವಿದ್ಯಾರ್ಥಿಗಳಿಗೆ ಅನುಕೂಲ.

ಅದೃಷ್ಟ ಸಂಖ್ಯೆ 5

ತುಲಾ

ಕೋರ್ಟು ಕೇಸುಗಳಲ್ಲಿತೊಂದರೆ. ಅತ್ತೆ ಮಾವರೊಂದಿಗೆ ವೃಥಾ ಜಗಳ. ವ್ಯಾಪಾರದಲ್ಲಿಅಭಿವೃದ್ಧಿ. ಆರೋಗ್ಯ ಉತ್ತಮ. ಹಣಕಾಸಿನ ಕೊರತೆ ಇರುವುದಿಲ್ಲ. ಉದ್ಯೋಗದಲ್ಲಿಬಡ್ತಿ. ಭೋಗ ವಸ್ತುಗಳನ್ನು ಕೊಳ್ಳುವಿರಿ. ಕೃಷಿಕರಿಗೆ ಲಾಭ.

ಅದೃಷ್ಟ ಸಂಖ್ಯೆ 1

ವೃಶ್ಚಿಕ

ಸಂಗಾತಿಗೆ ಆರೋಗ್ಯದಲ್ಲಿಸಮಸ್ಯೆ ಉಂಟಾಗುತ್ತದೆ. ಕುಟುಂಬದಲ್ಲಿಸೌಖ್ಯವಿರುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರಗತಿ. ಮಕ್ಕಳಿಂದ ಸಂತೋಷ. ಆರ್ಥಿಕವಾಗಿ ಅಭಿವೃದ್ಧಿ. ತೀರ್ಥಯಾತ್ರೆಗೆ ಹೋಗುವಿರಿ. ಪ್ರಯಾಣದಿಂದ ಅನುಕೂಲ. ಮನೆಯಲ್ಲಿಶುಭಕಾರ್ಯ.

ಅದೃಷ್ಟ ಸಂಖ್ಯೆ 3

ಧನುಸ್ಸು

ಆರೋಗ್ಯದಲ್ಲಿಅಭಿವೃದ್ಧಿ. ಶತ್ರುಗಳು ದೂರ ಸರಿಯುವರು. ಸಾಲ ತೀರಿಸುವಿರಿ. ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭ. ಮನೆಯಲ್ಲಿಶುಭಕಾರ್ಯ. ನೆರವೇರುವುದು. ಅವಿವಾಹಿತರಿಗೆ ವಿವಾಹ ಯೋಗ. ಸಂತಾನಪೇಕ್ಷಿಗಳಿಗೆ ಮಕ್ಕಳ ಭಾಗ್ಯ.

ಅದೃಷ್ಟ ಸಂಖ್ಯೆ 9

ಮಕರ

ಕೂಡಿಟ್ಟ ಹಣ ನಷ್ಟವಾಗುವ ಸಂಭವ. ಕುಟುಂಬದವರೊಂದಿಗೆ ಹೊಂದಿಕೊಂಡಿರಿ. ಕಣ್ಣಿನ ಸಮಸ್ಯೆ ಉಂಟಾಗುವುದು. ಭೂಮಿಯಿಂದ ಲಾಭ. ಬಂಧು ಬಾಂಧವರ ಸಹಾಯ ಸಿಗುವುದು. ಮನೆಯಲ್ಲಿಶುಭ ಕಾರ್ಯ. ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿಪ್ರಗತಿ.

ಅದೃಷ್ಟ ಸಂಖ್ಯೆ 5

ಕುಂಭ

ಬೇರೆಯವರಿಂದ ಅವಮಾನಿತನಾಗುವೆನೆಂಬ ಭಯ ಕಾಡುವುದು. ಸಂಗಾತಿಯೊಂದಿಗೆ ಸದಾ ಜಗಳ. ವಾಹನ ಚಲಾಯಿಸುವಾಗ ಎಚ್ಚರವಿರಲಿ. ಸರಕಾರದಿಂದ ಸಹಾಯ ಸಿಗುವುದು. ಮನೆಗೆ ಹೊಸ ವಸ್ತುಗಳನ್ನು ತರುವಿರಿ. ಕೆಲಸದಲ್ಲಿಬಡ್ತಿ ದೊರೆಯುವುದು. ವ್ಯಾಪಾರದಲ್ಲಿಅಭಿವೃದ್ಧಿ.

ಅದೃಷ್ಟ ಸಂಖ್ಯೆ 1

ಮೀನ

ಸರಕಾರದಿಂದ ಸಹಾಯ. ವಾದ ವಿವಾದಗಳಲ್ಲಿಗೆಲ್ಲುವಿರಿ. ರಿಯಲ್ ಎಸ್ಟೇಟ್ ನಿಂದ ಲಾಭ. ವಿದ್ಯಾರ್ಥಿಗಳಿಗೆ ಪ್ರಗತಿ. ತಾಯಿಯಿಂದ ಸುಖ. ಆಕಸ್ಮಿಕ ಧನ ಲಾಭ. ಹೊಸ ವಾಹನ ಖರೀದಿಸುವಿರಿ. ಮನೆಯಲ್ಲಿಶುಭಕಾರ್ಯ.

ಅದೃಷ್ಟ ಸಂಖ್ಯೆ 9

ಡಾ.ಅನಸೂಯ ಎಸ್ .ರಾಜೀವ್