ಉಡುಪಿ ಕಾಣಿಯೂರು ಶ್ರೀಗಳ ಸಂದೇಶ

Contributed byShridevi Ambekallu|Vijaya Karnataka
the blessing of the guru essential for a good life
ಬಾಳಿನ ಏಳ್ಗೆಗೆ ಗುರುವಿನ ಅನುಗ್ರಹ

----
*ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು

ಕಾಣಿಯೂರು ಮಠ, ಉಡುಪಿ

-=---

ದೇವತೆಗಳ ಗುರುಗಳಾದ ಬೃಹಸ್ಪತಿ ಮಹರ್ಷಿಗಳು ಸ್ವರ್ಗಾಧಿಪತಿ ಇಂದ್ರನ ಆಸ್ಥಾನಕ್ಕೆ ಅದೊಂದು ದಿನ ಬಂದಾಗ ಎದ್ದು ನಿಂತು ಗೌರವಿಸದ ಕಾರಣಕ್ಕೆ ಬೃಹಸ್ಪತಿ ಬಲು ಬೇಸರದಿಂದ ಹಿಂತಿರುಗಿ ಹೋದಾಗಲಷ್ಟೇ ಇಂದ್ರನ ಅಹಂಕಾರ ಇಳಿಯಿತು. ಗುರುಗಳಿಗೆ ನೋವಾದ ಹಿನ್ನೆಲೆಯಲ್ಲಿಕ್ಷಮೆ ಕೇಳಲೆಂದು ಬೃಹಸ್ಪತಿ ಗುರುಗಳ ಮನೆಗೆ ಹೋದಾಗ ಅವರು ಒಳಗಿದ್ದರೂ ಅಸ್ತರಾದರು(ಇಂದ್ರನಿಗೆ ಕಾಣಿಸಲಿಲ್ಲ)ಗುರು ಅನುಗ್ರಹವಿಲ್ಲದ ಕಾರಣಕ್ಕೆ ದೈತ್ಯರು ಸ್ವರ್ಗಕ್ಕೆ ದಾಳಿಯಿಟ್ಟರು, ಸಂಪತ್ತೆಲ್ಲಾದೋಚಿದರು. ಇದು ಭಾಗವತದಲ್ಲಿಗುರುಗಳ ಮಹತ್ವವನ್ನು ಸಾರುವ ಒಂದು ದೃಷ್ಟಾಂತ. ಗುರುಗಳು ನಿತ್ಯ ಗೌರವಾರ್ಹರು. ಗುರುಪೂರ್ಣಿಮೆಯಂದು ವಿಶೇಷ ಗೌರವ ಸಲ್ಲಬೇಕು. ಗುರುಗಳ ಸೇವೆಯಿಂದ ಶಿಷ್ಯನಾದವ ವಿದ್ಯೆ, ಬುದ್ಧಿ, ಜ್ಞಾನ, ಕೀರ್ತಿ ಸಹಿತ ಫಲ ಸಂಪಾದಿಸಬಲ್ಲ.

ಗುರು ಅನುಗ್ರಹವಿದ್ದವ ಬದುಕಿನಲ್ಲಿಏಳಿಗೆ ಹೊಂದಿದ್ದಾನೆ, ಸಾಧನೆ ಮಾಡಿದ್ದಾನೆ, ಕೀರ್ತಿ ಪಡೆದಿದ್ದಾನೆ, ಅಧಿಕಾರ ಗಳಿಸಿದ್ದಾನೆ. ಗುರುವಿನ ಕೋಪ- ಶಾಪಕ್ಕೆ ತುತ್ತಾದವ ಹೇಗೆ ಹಾಳಾಗಿ ಹೋಗಿದ್ದಾನೆ ಎನ್ನುವುದನ್ನು ರಾಮಾಯಣ, ಮಹಾಭಾರತ ಸಹಿತ ಪುರಾಣ ಕಥೆಗಳು ಸಾರಿ ಸಾರಿ ಹೇಳುತ್ತಿದ್ದರೂ ನಾವು ಗುರುವನ್ನು ನಿರ್ಲಕ್ಷಿಸಿದರೆ ಉದ್ಧಾರವಾಗುವ ಪರಿ ಎಂತು?

ವಿದ್ಯೆ ಕಲಿಯಲೆಂದು ಮೋಸದಿಂದ ಬಂದ ಕರ್ಣನಿಗೆ ಶಾಪವಿತ್ತ ದ್ರೋಣಾಚಾರ್ಯರು ಅರ್ಜುನನ್ನು ಜಗದ ಅತ್ಯುತ್ತಮ ಬಿಲ್ವಿದ್ಯಾ ಪರಿಣತನನ್ನಾಗಿ ರೂಪಿಸಿದರು. ಇದು ಗುರುವಿನಿಂದ ಅನುಗ್ರಹ ಹಾಗೂ ಶಾಪಕ್ಕೊಳಗಾದ ಶಿಷ್ಯಂದಿರ ಕಥನ. ಗುರು ಸೇವೆ ಮೂಲಕ ಕಲಿವ ವಿದ್ಯೆಯಿಂದ ಸಾಧನೆ, ಬದುಕಿನ ಗುರಿ ಮುಟ್ಟಲು ಸಾಧ್ಯ. ಯುವಜನರಲ್ಲಿಗುರು ಗೌರವದ ಚಿಂತನೆ ಬರಬೇಕು. ಗುರುಗಳನ್ನು ನೋಯಿಸಬಾರದು. ಉತ್ತಮ ನಾಗರಿಕರಾಗಲು, ಸಮಾಜದಲ್ಲಿಸಾಧಕ ವ್ಯಕ್ತಿಯಾಗಲು ಗುರುಗಳ ಅನುಗ್ರಹ ಮುಖ್ಯ. ಗುರುಗಳ ಸ್ಥಾನಮಾನದ ಔನ್ನತ್ಯದಿಂದ ಭಾರತ ವಿಶ್ವ ಗುರುವಾಗಲು ಸಾಧ್ಯ.

ಯುವಜನರಲ್ಲಿಗುರು ಗೌರವದ ಚಿಂತನೆ ಬರಬೇಕು. ಗುರುಗಳನ್ನು ನೋಯಿಸಬಾರದು. ಉತ್ತಮ ನಾಗರಿಕರಾಗಲು, ಸಮಾಜದಲ್ಲಿಸಾಧಕ ವ್ಯಕ್ತಿಯಾಗಲು ಗುರುಗಳ ಅನುಗ್ರಹ ಮುಖ್ಯ. ಗುರುಗಳ ಸ್ಥಾನಮಾನದ ಔನ್ನತ್ಯದಿಂದ ಭಾರತ ವಿಶ್ವ ಗುರುವಾಗಲು ಸಾಧ್ಯ.