ಸದುಪಯೋಗ ಪಡೆದುಕೊಳ್ಳಿ* ಬಿಳಿಗೆರೆ ಗ್ರಾ.ಪಂ. ಪಿಡಿಒ ಶೀಲಾ ಮನವಿ
ವಿಕ ಸುದ್ದಿಲೋಕ ಹುಣಸೂರು
ನರೇಗಾ ಯೋಜನೆ ಬದಲಿಗೆ ವಿಬಿ ಜಿ ರಾಮ್ ಜಿ ಯೋಜನೆ ಚಾಲ್ತಿಯಲ್ಲಿದ್ದು, ಈ ಯೋಜನೆಯಡಿ 125 ಮಾನವ ದಿನಗಳು ಹಾಗೂ ಕೂಲಿ ಮೊತ್ತ 382 ರೂ.ಗಳಿಗೆ ಏರಿಕೆಯಾಗಿದ್ದು, ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕಿನ ಬಿಳಿಗೆರೆ ಗ್ರಾ.ಪಂ. ಪಿಡಿಒ ಶೀಲಾ ಮನವಿ ಮಾಡಿದರು.
ತಾಲೂಕಿನ ಬಿಳಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಗೌಡನಹಳ್ಳಿ ಗ್ರಾಮದಲ್ಲಿಅನುಷ್ಠಾನವಾಗುತ್ತಿರುವ ಕಾಮಗಾರಿ ಸ್ಥಳ ಪರಿಶೀಲನೆ ವೇಳೆ ಮಾತನಾಡಿದ ಅವರು, ‘‘ಸಂಪೂರ್ಣ ಪಾರದರ್ಶಕತೆ ಮತ್ತು ತಂತ್ರಜ್ಞಾನದೊಂದಿಗೆ ಈ ಕಾಯಿದೆ ಜಾರಿಯಾಗಿದ್ದು, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ,’’ ಎಮದು ಕೋರಿದರು.
ತಾಲೂಕು ಐಇಸಿ ಸಂಯೋಜಕಿ ಪುಷ್ಪವತಿ ಮಾತನಾಡಿ, ‘‘ಕೂಲಿ ಕಾರ್ಮಿಕರಿಗೆ 100ರಿಂದ 125 ಮಾನವ ದಿನ ಸೃಜನೆಗೆ ಹೆಚ್ಚಿಸಲಾಗಿದೆ. 370ರಿಂದ 382ಕ್ಕೆ ಕೂಲಿ ಮೊತ್ತ ಹೆಚ್ಚಳಗೊಂಡಿದ್ದು, ನಿರಂತರ ಕೆಲಸದಿಂದ ಸುಮಾರು 47,750 ರೂ. ಗಳಿಸಬಹುದಾಗಿದೆ. ಯೋಜನೆಯಲ್ಲಿ318 ಬಗೆಯ ಕಾಮಗಾರಿಗಳಿದ್ದು, ವೈಯಕ್ತಿಕವಾಗಿಯೂ ಗ್ರಾಮೀಣ ಭಾಗದ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು,’’ ಎಂದರು.
‘‘ರೈತರಿಗೆ ಅನುಕೂಲವಾಗಲಿ ಎಂದು ಬಿತ್ತನೆ ಮತ್ತು ಕಟಾವು ಸಮಯದಲ್ಲಿ60 ದಿನಗಳ ಬಿಡುವು ನೀಡಲಾಗಿದೆ. ಉದ್ಯೋಗ ಕೋರಲು ನಮೂನೆ-6ರ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಕೆಲಸ ನೀಡದಿದ್ದಲ್ಲಿಪಂಚಾಯಿತಿಯೇ ಕೂಲಿ ಕೊಡಬೇಕಿದೆ,’’ ಎಂದರು.
ಯೋಜನೆ ಬಗ್ಗೆ ಕೂಲಿ ಕಾರ್ಮಿಕರಲ್ಲಿಅರಿವು ಮೂಡಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿವಿಬಿ ಜಿ ರಾಮ್ ಜಿ ಮಾಹಿತಿಯುಳ್ಳ ಕರಪತ್ರ ಅಂಟಿಸಲಾಯಿತು. ಗ್ರಾ.ಪಂ. ಕಾರ್ಯದರ್ಶಿ ಆನಂದ್ , ಕಾಯಕ ಮಿತ್ರ ಸುಮಾ, ಬಿಎಫ್ ಟಿ ಕುಮಾರ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಇದ್ದರು.
ಬಾಕ್ಸ್
ಯೋಜನೆಯಿಂದ ಅನುಕೂಲ:
ವಿಬಿ ಜಿ ರಾಮ್ ಜಿ ಯೋಜನೆಯಡಿ ದಿನವೊಂದರ ಕೂಲಿ ಮೊತ್ತ 382ಕ್ಕೆ ಹೆಚ್ಚಳಗೊಂಡಿದೆ. ಒಬ್ಬ ವ್ಯಕ್ತಿ 125ದಿನ ಕೆಲಸ ನಿರ್ವಹಿಸಿದಲ್ಲಿ47ಸಾವಿರ ದೊರೆಯಲಿದೆ. ಇದರಿಂದಾಗಿ ಬಿತ್ತನೆಬೀಜ, ಗೊಬ್ಬರ, ಮನೆ ನಿರ್ವಹಣೆಗೆ ನೆರವಾಗಲಿದೆ. ಕೂಲಿ ಹಣದಲ್ಲಿವಾರದ ಚೀಟಿ, ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಿದ್ದು, ಆರ್ಥಿಕ ಜೀವನಕ್ಕೆ ಪೂರಕವಾಗಿದೆ.
-ಶಶಿಕಲಾ, ಕಾಂತೇಗೌಡ, ಫಲಾನುಭವಿಗಳು
ಪೊಟೋ 24ಎಚ್ ಯುಎನ್ -8
ಹುಣಸೂರು ತಾಲೂಕು ಬಿಳಿಗೆರೆ ಬಿಳಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಗೌಡನಹಳ್ಳಿ ಗ್ರಾಮದಲ್ಲಿವಿಬಿ ಜಿ ರಾಮ್ ಜಿ ಯೋಜನೆ ಕುರಿತು ಕರಪತ್ರ ವಿತರಿಸಲಾಯಿತು.