ಚಾತುರ್ಮಾಸ-1

Contributed byShridevi Ambekallu|Vijaya Karnataka
chaturmasa events and rebirth of jagadgurus
1.

ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯ
ಶೃಂಗೇರಿ ಶಾರದಾ ಪೀಠದ ಉಭಯ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಜು. 29ರಿಂದ ಗುರುನಿವಾಸದಲ್ಲಿಚಾತುರ್ಮಾಸ ವ್ರತ ಕೈಗೊಳ್ಳಲಿದ್ದು ಸೆ. 26ರಂದು ಸಮಾಪ್ತಿಗೊಳಿಸಲಿದ್ದಾರೆ.

ಚಾತುರ್ಮಾಸ ್ಯ ಸಂದರ್ಭದಲ್ಲಿಗುರು ನಿವಾಸದಲ್ಲಿಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜು. 29 ವ್ಯಾಸಪೂಜೆ, ಚಾತುರ್ಮಾಸ ವ್ರತ, ಜು. 30ರಂದು ಉತ್ತರ ಪೂಜೆ ನೆರವೇರಲಿದೆ.

ಆ. 9ರಂದು ಏಕಾದಶಿ ಮತ್ತು ಶ್ರಾವಣ ಸೋಮವಾರ ವಿಶೇಷ ಪೂಜೆ, ಆ. 21ರಂದು ಶ್ರೀ ವರಲಕ್ಷಿತ್ರ್ಮ ವ್ರತ ಹಾಗೂ ಆ. 24 ಹಾಗೂ 31ರಂದು ಶ್ರಾವಣ ಸೋಮವಾರ ಪೂಜೆ, ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆ. 14ರಂದು ಶ್ರೀ ವರಸಿದ್ಧಿ ವಿನಾಯಕ ವ್ರತ ಹಾಗೂ ಶ್ರೀ ಮಹಾಗಣಪತಿ ವಾಕ್ಯಾರ್ಥ ಸಭೆ, ಸೆ. 20 ಶ್ರೀ ಕೇದಾರನಾಥ ಪೂಜೆ, ಸೆ. 22 ವಾಮನ ಜಯಂತಿ, ಸೆ. 25 ಶ್ರೀ ಅನಂತಪದ್ಮನಾಭ ವ್ರತ, ಸೆ. 26 ಶ್ರೀ ಉಮಾಮಹೇಶ್ವರಿ ವ್ರತ ಹಾಗೂ ಚಾತುರ್ಮಾಸ ವ್ರತ ಮುಕ್ತಾಯ, ಸೆ. 27 ಶ್ರೀ ಮಹಾಗಣಪತಿ ವ್ಯಾಕ್ಯಾರ್ಥ ಸಭೆ ಸಮಾಪನ ಮುಂತಾದ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ.

ಜಗದ್ಗುರುಗಳ ವರ್ಧಂತಿ

ಜಗದ್ಗುರು ಶ್ರೀವಿಧುಶೇಖರ ಭಾರತೀ ಸ್ವಾಮೀಜಿ ಅವರ 34ನೇ ವರ್ಧಂತಿ ಮಹೋತ್ಸವ ಆ.17ರಂದು ನಡೆಯಲಿದೆ. ಆ.13 ಮಹಾರುದ್ರ ಮಹಾಯಾಗದ ಸಂಕಲ್ಪ, ಆ.16 ಶ್ರೀಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಆ.17ರಂದು ಗುರುನಿವಾಸದಲ್ಲಿಬೆಳಗ್ಗೆ 7ಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರ ಅಹ್ನಿಕ ದರ್ಶನ, ನಂತರ ಅನುಗ್ರಹ ಭಾಷಣ, 11.30ಕ್ಕೆ ಮಹಾರುದ್ರಯಾಗದ ಪೂರ್ಣಾಹುತಿ, ರಾತ್ರಿ 8.30ಕ್ಕೆ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಲಿದೆ.

-------------

2.

ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕನ್ಯಾಡಿ ಶ್ರೀರಾಮ ಕ್ಷೇತ್ರ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬೈಂದೂರು ಗೋಳಿಹೊಳೆ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿಜು. 29ರಿಂದ ಸೆ. 14ರವರೆಗೆ ಕನ್ಯಾಡಿ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ನಡೆಯಲಿದೆ. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಉಡುಪಿ ಜಿಲ್ಲೆಯಲ್ಲಿಮೊದಲ ಬಾರಿಗೆ ಈ ಕೈಂಕರ್ಯ ಮಾಡುತ್ತಿದ್ದಾರೆ.

-------------

ಆನೆಗುಂದಿ ಶ್ರೀ

ಕಾಸರಗೋಡು

ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಪರಾಭವ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ಪಡುಕುತ್ಯಾರಿನ ಶ್ರೀ ಮಠದಲ್ಲಿನಡೆಯಲಿದೆ.

---------

3.

ಬಾರ್ಕೂರು ಭಂಡಾರಕೇರಿ ಮಠದಲ್ಲಿಶ್ರೀ ವಿದ್ಯೇಶ ತೀರ್ಥರಿಂದ ವ್ರತಾಚರಣೆ

ಉಡುಪಿ ಕೀರ್ತಿಶೇಷ ಯತಿವರೇಣ್ಯ ಶ್ರೀ ವಿದ್ಯಾಮಾನ್ಯ ತೀರ್ಥ ಶ್ರೀಪಾದರು ಶ್ರೀಮಧ್ವರಿಗೆ ದೀಕ್ಷಾ ಪ್ರದಾನ ಮಾಡಿದ ಶ್ರೀ ಅಚ್ಯುತಪ್ರಜ್ಞರು ಹಾಗೂ ಶ್ರೀ ಸತ್ಯತೀರ್ಥರ ಪರಂಪರೆಯ ಪೀಠಾರೋಹಣ ಶತಮಾನೋತ್ಸವದ ಸಂಭ್ರಮ-2026 ಹಾಗೂ ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದರ ಕರಕಮಲ ಸಂಜಾತರಾದ ಶ್ರೀವಿದ್ಯೇಶ ತೀರ್ಥರ 47ನೇ ಚಾತುರ್ಮಾಸ್ಯ ವ್ರತಾಚರಣೆಯು ಜು. 29ರಿಂದ ಸೆ.26 ರವರೆಗೆ ಬಾರ್ಕೂರು ಭಂಡಾರಕೇರಿ ಮಠದಲ್ಲಿನಡೆಯಲಿದೆ.

ವಿವಿಧ ಕಾರ್ಯಕ್ರಮಗಳು:

ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ನಿಗದಿತ ಭಾಗವನ್ನು ಮುಗಿಸುವ ತನಕ 48 ಮಂದಿ ವಿದ್ವಾಂಸರಿಂದ ನಾಲ್ಕು ವೇದಗಳ ಪಾರಾಯಣ ನಡೆಯಲಿದೆ. 36 ವಿದ್ವಾಂಸರಿಂದ ಮಧ್ವಭಾರತದ 108 ಬಾರಿ ಪಾರಾಯಣ, 16 ವಿದ್ವಾಂಸರಿಂದ ಸಮಗ್ರ ಶ್ರೀಮದ್ಭಾಗವತ ಪಾರಾಯಣ ನಡೆಯಲಿದೆ. ಸಂಜೆ 4 ಗಂಟೆಯಿಂದ 5 ಗಂಟೆವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂಜೆ 5 ರಿಂದ 6.30 ರವರೆಗೆ ವಿದ್ವಾಂಸರಿಂದ ಭಾರತ-ರಾಮಾಯಣಾದಿಗಳ ಉಪಾಖ್ಯಾನಗಳ ಬಗ್ಗೆ ಪ್ರವಚನ ಆ ಬಳಿಕ ಶ್ರೀಪಾದರಿಂದ ಅನುಗ್ರಹ ಸಂದೇಶ.

ಸೆ. 12ರಿಂದ ಸೆ. 26 ರವರೆಗೆ 15 ವಿದ್ವಾಂಸರಿಂದ ಪ್ರೋಷ್ಠಪದಿ ಭಾಗವತ ಪ್ರವಚನ ನಡೆಯಲಿದೆ. ಪ್ರತಿದಿನ ಸಂಜೆ 6.30ರಿಂದ ರಾತ್ರಿ 8 ಗಂಟೆಯವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಹರಿಕಥಾ ಕಾಲಕ್ಷೇಪ, ಯಕ್ಷಗಾನ, ತಾಳಮದ್ದಳೆ, ದಾಸವಾಣಿ, ಶಾಸ್ತ್ರೀಯ ಸಂಗೀತ, ಗಮಕ ವಾಚನ-ವ್ಯಾಖ್ಯಾನ, ಭರತನಾಟ್ಯ, ವೀಣಾವಾದನ, ವಿದ್ಯೇಶ ವಿಠಲಾಂಕಿತ ಕೃತಿಗಳ ಸಾಮೂಹಿಕ ಗಾಯನ ಇರಲಿದೆ.

100 ಜನ ವಿದ್ವಾಂಸರಿಗೆ ಮಧ್ವಾರಾದ್ಧಾಂತ ಸಂವರ್ಧಕ ಸಭೆಯ ವತಿಯಿಂದ ಸನ್ಮಾನ, ಸೆ. 5ರಂದು ಮಧ್ಯಾಹ್ನ 3ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಿಂದ ಭರಿತವಾದ ವಿಟ್ಲಪಿಂಡಿ ಶ್ರೀಕೃಷ್ಣ ಜಯಂತಿ ಮಹೋತ್ಸವ ನಡೆಯಲಿದೆ.