ಪರಮಹಂಸ ಯೋಗಾನಂದರನ್ನು (1893 - 1952)ಆಧ್ಯಾತ್ಮಿಕ ಮಹಾಪುರುಷರಲ್ಲೊಬ್ಬರೆಂದು ಪರಿಗಣಿಸಲಾಗಿದೆ. ಜನಪ್ರಿಯ ಆಧ್ಯಾತ್ಮಿಕ ಮೇರುಕೃತಿಯಾದ ಯೋಗಿಯ ಆತ್ಮಕಥೆಯ ಮೂಲಕ ಅನೇಕ ಬೋಧನೆಗಳನ್ನು ನೀಡಿದ್ದಾರೆ. ಅವರು ‘ ಕ್ರಿಯಾಯೋಗ ’ ಎಂಬ ಪ್ರಸಿದ್ಧ ಯೋಗವನ್ನು ಪ್ರಸ್ತುತಪಡಿಸಿ ಲೋಕದೆಲ್ಲೆಡೆ ಪ್ರಸಿದ್ಧರಾದವರು.
‘ ಬಾಬಾಜಿ ಯವರ ಹೆಸರನ್ನು ಯಾರು ಭಕ್ತಿಯಿಂದ ಉಚ್ಚರಿಸುತ್ತಾರೋ, ಅಂಥವರು ತತ್ ಕ್ಷಣದಲ್ಲೇ ಅವರ ಆಧ್ಯಾತ್ಮಿಕ ಕೃಪೆಗೆ ಪಾತ್ರರಾಗುತ್ತಾರೆ’ ಎಂದು ಶ್ರೀ ಶ್ರೀ ಲಾಹಿರಿ ಮಹಾಶಯರು ಹೇಳಿದ್ದಾರೆ. ಮಹಾನ್ ಗುರುಗಳಾದ ಶ್ರೀ ಶ್ರೀ ಲಾಹಿರಿ ಮಹಾಶಯರ ಈ ಮಹತ್ವದ ಉಕ್ತಿಯನ್ನು ಪರಮಹಂಸ ಯೋಗಾನಂದರು ತಮ್ಮ ‘ಯೋಗಿಯ ಆತ್ಮಕಥೆ’ಯಲ್ಲಿ(ಈ ಪುಸ್ತಕವು 1946ರಲ್ಲಿಮೊದಲ ಬಾರಿಗೆ ಸಾರ್ವಜನಿಕರಿಗೆ ಮಹಾವತಾರರ ಉಪಸ್ಥಿತಿಯನ್ನು ಬಹಿರಂಗಪಡಿಸಿದೆ) ಉಲ್ಲೇಖಿಸಿದ್ದಾರೆ. ಈ ಪುಸ್ತಕವು ಪರಮಶ್ರೇಷ್ಠ ಅವತಾರರಾದ ಮಹಾವತಾರ ಬಾಬಾಜಿ ಅವರ ಅತೀಂದ್ರಿಯ ಮಹತ್ವವನ್ನು ಮತ್ತು ಎಲ್ಲಾಪ್ರಾಮಾಣಿಕ ಅನುಯಾಯಿಗಳ ಜೀವನದ ಮೇಲೆ ಅವರ ಅಚ್ಚಳಿಯದ ಪ್ರಭಾವವನ್ನು ಶಕ್ತಿಯುತವಾಗಿ ವಿವರಿಸುತ್ತದೆ. ಬಾಬಾಜಿಯವರ ಆಧ್ಯಾತ್ಮಿಕ ಸ್ಥಿತಿಯು ಮಾನವನ ಗ್ರಹಿಕೆಗೆ ಮೀರಿದುದು ಎಂದು ಶ್ರೀ ಶ್ರೀ ಲಾಹಿರಿ ಮಹಾಶಯರ ಆಧ್ಯಾತ್ಮಿಕ ಉತ್ತರಾಧಿಕಾರಿಯಾದ ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ ಅವರೂ ಹೇಳಿರುವರು. ಆದರೂ, ಸಾಮಾನ್ಯ ಜನರು, ಅನುಪಮ, ಸರ್ವಶ್ರೇಷ್ಠ ಬಾಬಾಜಿ ಅವರಂತಹ ಮಹಾನ್ ಗುರುಗಳ ಸ್ಫೂ್ಪರ್ತಿ ಮತ್ತು ಬೋಧನೆಗಳೊಂದಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳಲು ಪ್ರಯತ್ನಿಸಿದರೆ, ಅವರು ತಮ್ಮ ಆಧ್ಯಾತ್ಮಿಕ ಪಯಣದಲ್ಲಿಅಪಾರವಾದ ಪ್ರಯೋಜನವನ್ನು ಪಡೆಯುತ್ತಾರೆ.
ಜುಲೈ 25 ಪರಮಹಂಸ ಯೋಗಾನಂದರ ಸಂಸ್ಮರಣೆ
ಪ್ರಸಿದ್ಧ ಅಮರ ಗುರು, ಮಹಾವತಾರ ಬಾಬಾಜಿಯವರ ಸ್ಮರಣ ದಿನವನ್ನು ಪ್ರತಿ ವರ್ಷ ಜುಲೈ 25ರಂದು ಭಾರತದಲ್ಲಿಯೋಗದಾ ಸತ್ಸಂಗ ಸೊಸೈಟಿಯ (ವೈಎಸ್ ಎಸ್ ) ಭಕ್ತರು ಮತ್ತು ಪ್ರಪಂಚದಾದ್ಯಂತ ಸೆಲ್ ್ಫ ರಿಯಲೈಝೇಷನ್ ಫೆಲೋಶಿಪ್ (ಎಸ್ ಆರ್ ಎಫ್ ) ಸದಸ್ಯರು ಆಚರಿಸುತ್ತಾರೆ. ಮಹಾವತಾರ ಬಾಬಾಜಿ, ಶ್ರೀ ಶ್ರೀ ಲಾಹಿರಿ ಮಹಾಶಯರು, ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ ಮತ್ತು 1917ರಲ್ಲಿವೈಎಸ್ ಎಸ್ ಅನ್ನು ಸ್ಥಾಪಿಸಿದ ಪರಮಹಂಸ ಯೋಗಾನಂದ ಅವರು ಆಧ್ಯಾತ್ಮಿಕ ಪ್ರಗತಿಯ ‘ಕ್ರಿಯಾ ಯೋಗ’ ಮಾರ್ಗದ ಬೋಧನೆಗಳನ್ನು ಜಗತ್ತಿಗೆ ಸಾರಿದ್ದಾರೆ.
‘ಯೋಗಿಯ ಆತ್ಮಕಥೆ’ಯ ಪುಟಗಳು ನಮ್ಮ ಕಣ್ಣುಗಳಿಗೆ, ಹೃದಯಗಳಿಗೆ ಮತ್ತು ಆತ್ಮಗಳಿಗೆ ನಿಜವಾದ ಗುರು ಮತ್ತು ಶ್ರದ್ಧೆಯುಳ್ಳ ಶಿಷ್ಯನ ನಡುವೆ ಇರುವ ಬಾಂಧವ್ಯದ ಅಪಾರತೆ ಮತ್ತು ಅನಂತತೆಯನ್ನು ಹೊತ್ತು ತರುತ್ತವೆ.
ಮಹಾವತಾರ ಬಾಬಾಜಿಯವರು ಸ್ವತಃ ನಿಸ್ವಾರ್ಥ ಸೇವೆಯ ಕುರಿತು ಹೀಗೆ ಹೇಳಿದ್ದಾರೆ, ‘ಈ ಪ್ರಪಂಚದಲ್ಲಿದ್ದು, ವೈಯಕ್ತಿಕ ಉದ್ದೇಶ ಅಥವಾ ಆಸಕ್ತಿಯಿಲ್ಲದೇ ತನ್ನ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸಬಲ್ಲಯೋಗಿ ಖಂಡಿತಾ ಸಾಕ್ಷಾತ್ಕಾರದ ಮಾರ್ಗವನ್ನೇ ತುಳಿಯುತ್ತಾನೆ’ ಎಂದು. ಇದನ್ನು ಯೋಗಿಯ ಆತ್ಮ ಕಥೆಯಲ್ಲಿಉಲ್ಲೇಖಿಸಿದ್ದಾರೆ.