ಗೌರವ ಕಾರ್ಯಾಧ್ಯಕ್ಷ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಹೇಳಿಕೆ | ರೈತ ಸಂಪರ್ಕ ಸಭೆ, ಸಂವಾದ
ವಿಕ ಸುದ್ದಿಲೋಕ ಬೆಳಗಾವಿಕೃಷಿ ಕ್ಷೇತ್ರದಲ್ಲಿಆರ್ಥಿಕ ಸುಧಾರಣೆ ಹಾಗೂ ಬೆಳೆ ಉತ್ಪಾದಕತೆ ಹೆಚ್ಚಿಸಲು ರೈತರು ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ವ್ಯವಸಾಯ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಕೆಎಲ್ ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಹೇಳಿದರು.
ಅಥಣಿ ತಾಲೂಕಿನ ಶೇಗುಣಶಿ ಗ್ರಾಮದಲ್ಲಿಶಿವಶಕ್ತಿ ಶುಗರ್ಸ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ರೈತ ಸಂಪರ್ಕ ಸಭೆಯಲ್ಲಿಪಾಲ್ಗೊಂಡು ರೈತರೊಂದಿಗೆ ಸಂವಾದ ನಡೆಸಿದ ಅವರು, ‘‘ನಾನು ಸದಾ ರೈತರ ಪರವಾಗಿ ನಿಂತಿದ್ದು, ಅವರ ಹಿತಾಸಕ್ತಿಯೇ ನನ್ನ ಮೊದಲ ಆದ್ಯತೆಯಾಗಿದೆ. ನನ್ನ ಜೀವಿತಾವಧಿಯನ್ನು ರೈತರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದೇನೆ. ರೈತರು ಆರ್ಥಿಕವಾಗಿ ಸದೃಢರಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ,’’ ಎಂದರು.
‘‘ಕೆಎಲ್ ಇ ಸಂಸ್ಥೆಯು ರೈತರ ಅಭಿವೃದ್ಧಿಗೆ ಸದಾ ಬದ್ಧವಾಗಿದೆ. ಮತ್ತಿಕೊಪ್ಪದಲ್ಲಿರುವ ಕೆಎಲ್ ಇ ಕೃಷಿ ವಿಜ್ಞಾನ ಕೇಂದ್ರದ ಮೂಲಕ ರೈತರಿಗೆ ನಿರಂತರವಾಗಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆಧುನಿಕ ಕೃಷಿ ಪದ್ಧತಿಗಳು, ಸುಧಾರಿತ ಬೆಳೆ ನಿರ್ವಹಣೆ, ತೋಟಗಾರಿಕೆ, ಜಲ ಸಂರಕ್ಷಣೆ ಹಾಗೂ ಹೊಸ ಕೃಷಿ ತಂತ್ರಜ್ಞಾನಗಳ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ. ತರಬೇತಿಗಾಗಿ ದೂರದ ಊರುಗಳಿಂದ ಆಗಮಿಸುವ ರೈತರಿಗೆ ವಸತಿ ಹಾಗೂ ಅಗತ್ಯ ಸೌಲಭ್ಯವನ್ನೂ ಕಲ್ಪಿಸಲಾಗಿದೆ,’’ ಎಂದು ತಿಳಿಸಿದರು.
ಸಭೆಯಲ್ಲಿರೈತರು ತಮ್ಮ ಪ್ರದೇಶದಲ್ಲಿಎದುರಿಸುತ್ತಿರುವ ನೀರಾವರಿ, ಬೆಳೆ ಉತ್ಪಾದನೆ, ಮಾರುಕಟ್ಟೆ ವ್ಯವಸ್ಥೆ, ಕಾರ್ಮಿಕರ ಕೊರತೆ ಹಾಗೂ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದಿರುವುದು ಸೇರಿದಂತೆ ನಾನಾ ಸಮಸ್ಯೆಗಳನ್ನು ಮುಕ್ತವಾಗಿ ಪ್ರಸ್ತಾಪಿಸಿದರು. ರೈತರ ಅಹವಾಲು ಆಲಿಸಿದ ಡಾ. ಕೋರೆ ಅವರು, ‘‘ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಕೃಷಿಯಲ್ಲಿತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಹಾಗೂ ಬೆಳೆ ವೈವಿಧ್ಯತೆ ಮತ್ತು ಮೌಲ್ಯವರ್ಧಿತ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು,’’ ಎಂದು ಸಲಹೆ ನೀಡಿದರು.
ಸಭೆಯಲ್ಲಿಜಿಪಂ ಮಾಜಿ ಸದಸ್ಯ ಶ್ರೀಶೈಲ ನಾರಗೊಂಡ, ತಮ್ಮಣ್ಣಪ್ಪ ತೆಳಿ, ಬಸವರಾಜ ಅಸಂಗಿ ಇತರರು ಉಪಸ್ಥಿತರಿದ್ದರು.
ಕ್ವೋಟ್ ... 1
ರೈತ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಕೃಷಿ ಶಿಕ್ಷಣ ದೊರೆಯುವ ಉದ್ದೇಶದಿಂದ ತೆನಿಕೊಳ್ಳದಲ್ಲಿಕೆಎಲ್ ಇ ಸಂಸ್ಥೆಯಿಂದ ಕೃಷಿ ಪದವಿ ಕಾಲೇಜು ಆರಂಭಿಸಲಾಗಿದೆ. ಆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಕೃಷಿ ಶಿಕ್ಷಣ ಪಡೆಯಲು ಉತ್ತಮ ಅವಕಾಶ ದೊರೆತಿದ್ದು, ವೈಜ್ಞಾನಿಕ ಕೃಷಿಯತ್ತ ಯುವ ರೈತರನ್ನು ಆಕರ್ಷಿಸುವ ಪ್ರಯತ್ನ ಯಶಸ್ವಿಯಾಗಿದೆ.
-ಪದ್ಮಶ್ರೀ ಡಾ.ಪ್ರಭಾಕರ ಕೋರೆ | ಕೆಎಲ್ ಇ ಗೌರವ ಕಾರ್ಯಾಧ್ಯಕ್ಷರು
ಪೋಟೋ26ಸಿಕೆಡಿ13: ಅಥಣಿ ತಾಲೂಕಿನ ಶೇಗುಣಶಿ ಗ್ರಾಮದಲ್ಲಿನಡೆದ ರೈತ ಸಂಪರ್ಕ ಸಭೆಯಲ್ಲಿಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರನ್ನು ಸನ್ಮಾನಿಸಲಾಯಿತು.