Hindustan Aeronautics Recruitment For 30 Executive Positions Last Date To Apply Is August 12
ಪುಟ 5 ಜಾಬ್ ಸುದ್ದಿ
Contributed by: Jaya shree|Vijaya Karnataka•
30 ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಧಿ- ಎಚ್ ಎಎಲ್ ನೇಮಕಾತಿ, ಅರ್ಜಿ ಸಲ್ಲಿಕೆಗೆ ಆಗಸ್ಟ್ 12 ಕೊನೆಯ ದಿನಭಾರತ ಸರಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ ನವರತ್ನ ಸಂಸ್ಥೆ ‘ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ’ (ಎಚ್ ಎಎಲ್ ) ವಿವಿಧ ತಾಂತ್ರಿಕ ಮತ್ತು ತಾಂತ್ರಿಕೇತರ ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆಗೆ ಆಗಸ್ಟ್ 12 ಕೊನೆಯ ದಿನವಾಗಿದೆ.
ನೇಮಕಾತಿ ಅಡಿಯಲ್ಲಿಫೈನಾನ್ಸ್ ಆಫೀಸರ್ , ಡೆಪ್ಯುಟಿ ಮ್ಯಾನೇಜರ್ ಹಾಗೂ ಮ್ಯಾನೇಜರ್ (ಡಿಸೈನ್ - ಮೆಕ್ಯಾನಿಕಲ್ , ಎಲೆಕ್ಟ್ರಿಕಲ್ , ಎಲೆಕ್ಟ್ರಾನಿಕ್ಸ್ ) ಸೇರಿದಂತೆ ಒಟ್ಟು 30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮ್ಯಾನೇಜರ್ (ಡಿಸೈನ್ ) ಹುದ್ದೆಗಳಿಗೆ ಎಂಜಿನಿಯರಿಂಗ್ ಪದವಿಯೊಂದಿಗೆ ಬಿ.ಇ/ಬಿ.ಟೆಕ್ ಮತ್ತು ಎಂ.ಟೆಕ್ ಪೂರ್ಣಗೊಳಿಸಿರಬೇಕು. ಫೈನಾನ್ಸ್ ಹುದ್ದೆಗಳಿಗೆ ಸಿಎ/ಸಿಡಬ್ಲ್ಯೂಎ ಅಥವಾ ಸಂಬಂಧಿತ ವೃತ್ತಿಪರ ವಿದ್ಯಾರ್ಹತೆ ಕಡ್ಡಾಯವಾಗಿದೆ. ಹುದ್ದೆಯ ಶ್ರೇಣಿಗೆ ಅನುಗುಣವಾಗಿ 2ರಿಂದ 8 ವರ್ಷಗಳ ಅನುಭವದ ಅಗತ್ಯವಿದೆ. ಹುದ್ದೆಗೆ ಅನುಗುಣವಾಗಿ ವಯೋಮಿತಿ 35ರಿಂದ 45 ವರ್ಷಗಳಾಗಿದ್ದು, ಎಸ್ಸಿ, ಎಸ್ ಟಿ, ಒಬಿಸಿ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗ ಹಾಗೂ ಸಂಸ್ಥೆಯ ನಿಯಮಾವಳಿಗಳಂತೆ 50,000-2,00,000 ರೂ. ವರೆಗೆ ಮಾಸಿಕ ವೇತನ ಶ್ರೇಣಿ ಸಿಗಲಿದೆ. ಅಭ್ಯರ್ಥಿಗಳ ಆಯ್ಕೆಯನ್ನು ನೇರ ಸಂದರ್ಶನದ ಮೂಲಕ ಮಾತ್ರ ನಡೆಸಲಾಗುತ್ತದೆ. ಸಾಮಾನ್ಯ, ಒಬಿಸಿ ಮತ್ತು ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500 ರೂ. ಆಗಿದ್ದು, ಎಸ್ ಸಿ, ಎಸ್ ಟಿ ಹಾಗೂ ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಧಿಕೃತ ವೆಬ್ ಸೈಟ್ ಡಿಡಿಡಿ.ha್ಝ-ಜ್ಞಿdಜಿa.್ಚಟ.ಜ್ಞಿ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.