ವಿಕ ಸುದ್ದಿಲೋಕ ಬದಿಯಡ್ಕಸಾರ್ವಜನಿಕ ಆರೋಗ್ಯ ಚಟುವಟಿಕೆಗಳನ್ನು ತೀವ್ರವಾಗಿ ಅನುಷ್ಠಾನಗೊಳಿಸಲು ಪ್ರಾರಂಭಿಸಲಾದ ‘ವಿಷನ್ 2026’ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಮತ್ತು ಗರ್ಭ ಕೋಶದ ಕ್ಯಾನ್ಸರ್ ತಡೆಗಟ್ಟುವಿಕೆಯ ಭಾಗವಾಗಿ 14 ರಿಂದ 15 ವರ್ಷ ವಯಸ್ಸಿನ ಬಾಲಕಿಯರಿಗೆ ನೀಡಲಾಗುವ ಎಚ್ ಪಿಎ ಲಸಿಕೆಯ ಶೇ.100 ವ್ಯಾಪ್ತಿಯನ್ನು ಸಾಧಿಸಿದ್ದಕ್ಕಾಗಿ ಗ್ರಾಮ ಪಂಚಾಯಿತಿ ಆಡಳಿತ ಸಮಿತಿಯು ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು.
ಇದರ ಜತೆಗೆ, ಸಾಂಕ್ರಾಮಿಕ ಮತ್ತು ಜೀವನ ಶೈಲಿ ರೋಗಗಳನ್ನು ತಡೆಗಟ್ಟುವ ಕೆಲಸ ಮಾಡಲು ಸಿದ್ಧರಾಗಿರುವ 140 ಆರೋಗ್ಯ ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು. ಕುಂಬ್ಡಾಜೆ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕಾ ಎ.ಸಿ. ಅಧ್ಯಕ್ಷತೆಯಲ್ಲಿಮಾರ್ಪನಡ್ಕದ ಪಾಂಚಜನ್ಯಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪಂಚಾಯಿತಿ ಅಧ್ಯಕ್ಷೆ ಯಶೋದಾ ಎನ್ .ಉದ್ಘಾಟಿಸಿದರು.ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಆರೋಗ್ಯ ನಿರೀಕ್ಷಕ ಕೆ.ಸುರೇಶ್ ಕುಮಾರ್ ಮತ್ತು ಪಬ್ಲಿಕ್ ಹೆಲ್ತ್ ನರ್ಸ್ ಉಷಾ ಆರೋಗ್ಯ ಸ್ವಯಂ ಸೇವಕರಿಗೆ ತರಬೇತಿ ನೀಡಿದರು.
ಕಾರ ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನಾ ಕುಮಾರಿ, ಪಂಚಾಯಿತಿ ಕಲ್ಯಾಣ ಕ್ಷೇಮ ಕಾರ ್ಯ ಸಮಿತಿಯ ಅಧ್ಯಕ್ಷ ಅಬೂಬಕರ್ , ಪಂಚಾಯಿತಿ ಮಹೇಶ್ ಅಜ್ಜಿಮೂಲೆ, ಬಿ.ಟಿ.ಅಬ್ದುಲ್ಲಕುಂಞಿ, ಎಸ್ . ಮಹಮ್ಮದ್ , ನೂರುದ್ದೀನ್ , ಗೀತಾ, ಬಬಿತಾ ರೇಷ್ಮಾ, ಸೌಭಾಗ್ಯಲಕ್ಷ್ಮಿ ಮತ್ತು ಮಶೀದಾ ಭಾಗವಹಿಸಿದ್ದರು. ವೈದ್ಯಾಧಿಕಾರಿ ಡಾ. ಸೈಯದ್ ಹಮೀದ್ ಶುಹೈಬ್ ಸ್ವಾಗತಿಸಿ, ಜೆಎಚ್ ಐ ಜಿಜು ಮಾರ್ಕೋಸ್ ವಂದಿಸಿದರು.
ಚಿತ್ರ:18ಕೆಎಸ್ ತರಬೇತಿ- ಆರೋಗ್ಯ ಸ್ವಯಂ ಸೇವಕರಿಗೆ ತರಗತಿ ನಡೆಯಿತು.