ಪೇಜ್ 4 ಸುದ್ದಿಗಳು

Contributed byDHEERAJ K|Vijaya Karnataka
oath ceremony for student leaders highlights importance of leadership
ನಾಯಕತ್ವದ ಜವಾಬ್ದಾರಿಯಿಂದ ಆತ್ಮವಿಶ್ವಾಸ

ರಾಣೆಬೆನ್ನೂರು ನಗರದ ನ್ಯಾಶನಲ್ ಪಬ್ಲಿಕ್ ಸಿ.ಬಿ.ಎಸ್ .ಇ ಶಾಲೆಯಲ್ಲಿಶಾಲಾ ನಾಯಕದ ಪ್ರತಿಜ್ಞಾ ವಿಧಿ ಸಮಾರಂಭ ಶನಿವಾರ ನಡೆಯಿತು.
ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್ ನೀಡಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ‘ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವು ಕೇವಲ ಪದವಿ ಅಥವಾ ಬ್ಯಾಡ್ಜ್ ಧರಿಸುವ ಸಮಾರಂಭವಲ್ಲ. ಅದು ನಾಯಕತ್ವದ ಗುಣ, ಶಿಸ್ತು, ಸೇವಾ ಮನೋಭಾವ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಸಂಕಲ್ಪ ಸ್ವೀಕರಿಸುವ ಘಟ್ಟವಾಗಿದೆ. ಇಂತಹ ಕಾರ್ಯಕ್ರಮಗಳು ನಾಯಕತ್ವದ ಮಹತ್ವ ತಿಳಿಸಿ ವಿದ್ಯಾರ್ಥಿಗಳಲ್ಲಿಆತ್ಮವಿಶ್ವಾಸ ಬೆಳೆಸುವುದರ ಜತೆಗೆ ಉತ್ತಮ ನಾಗರಿಕರನ್ನಾಗಿ ರೂಪಿಸುವಲ್ಲಿಸಹಕಾರಿಯಾಗುತ್ತದೆ’ ಎಂದು ಹೇಳಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ತುಳಜಪ್ಪ ವ್ಹಿ ಲದ್ವಾ ಮಾತನಾಡಿ, ‘ಉತ್ತಮ ನಾಯಕರು ತಮ್ಮ ಮಾತಿನಿಂದ ಮಾತ್ರವಲ್ಲ, ತನ್ನ ಕಾರ್ಯಗಳಿಂದ ಇತರರಿಗೆ ಮಾದರಿಯಾಗುತ್ತಾರೆ. ಸಮಯ ಪಾಲನೆ, ಶಿಸ್ತು ವಿನಯತೆ, ಸಹಕಾರ ಮತ್ತು ಕರ್ತವ್ಯ ನಿಷ್ಠೆ ಇವು ನಾಯಕರ ಪ್ರಮುಖ ಗುಣಗಳಾಗಿವೆ. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಸಮಾನವಾಗಿ ಗೌರವಿಸಿ ಅವರ ಸಮಸ್ಯೆಗಳನ್ನು ಆಲಿಸಿ ಶಿಕ್ಷಕರೊಂದಿಗೆ ಸಮನ್ವಯ ಸಾಧಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸವುದು ನಿಮ್ಮ ಕರ್ತವ್ಯವಾಗಿದೆ’ ಎಂದು ಹೇಳಿದರು.

ವಿದ್ಯಾರ್ಥಿ ನಾಯಕರುಗಳಿಗೆ ಶಿಕ್ಷಕರಾದ ತೌಸಿಫ್ ಅಹ್ಮದ್ ಸೈಕಲ್ ಗಾರ ಪ್ರಮಾಣ ವಚನ ಬೋಧಿಸಿದರು. ಸಂಸ್ಥೆಯ ಅಧ್ಯಕ್ಷರಾದ ವಜ್ರೇಶ್ವರಿ ವಿ. ಲದ್ವಾ, ನಿರ್ದೇಶಕರಾದ ಡಾ. ಎಂ.ಎಂ. ಅನಂತರೆಡ್ಡಿ, ಡಾ. ಬಿ.ಆರ್ . ಸಾವುಕಾರ, ಮಲ್ಲಿಕಾರ್ಜುನ ಅಂಗಡಿ, ಅರುಣಾ ಪಿ. ಕಬಾಡಿ, ಶಾಲೆಯ ಪ್ರಾಂಶುಪಾಲರಾದ ಶಿವಲೀಲಾ ಕುರುವತ್ತಿ, ಶಿಕ್ಷಕ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕರಾದ ಮಾರ್ಷಲ್ ಗುಡಗೂರು ಕಾರ್ಯಕ್ರಮ ನಿರೂಪಿಸಿದರು, ರವಿಕುಮಾರ ಐರಣಿ ಸ್ವಾಗತಿಸಿದರು, ವಿದ್ಯಾರ್ಥಿನಿ ಕಾವ್ಯ ಕೆ. ವಂದಿಸಿದರು.

ಫೊಟೊ: ನ್ಯಾಶನಲ್

= ==