ಇಲ್ಲಿಹಾಸ್ಟೆಲ್ ಸೌಲಭ್ಯವೇ ಇಲ್ಲ!

Contributed bykariyappa.kudupali@gmail.com|Vijaya Karnataka
lack of hostel facilities in rattihalli town hinders education for poor students
ಜು.19.ರಟ್ಟೀಹಳ್ಳಿ.1

ತಾಲೂಕಿನಲ್ಲಿಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆ (ಕಿಕ್ಕರ್ )
ಇಲ್ಲಿಹಾಸ್ಟೆಲ್ ಸೌಲಭ್ಯವೇ ಇಲ್ಲ! (ಹೆಡ್ )

ಕರಿಯಪ್ಪ ಚೌಡಕ್ಕನವರ ರಟ್ಟೀಹಳ್ಳಿ

ರಟ್ಟೀಹಳ್ಳಿ ತಾಲೂಕು ಕೇಂದ್ರವಾಗಿ 8 ವರ್ಷ ಆಗಿದೆ. ಪಟ್ಟಣ ದಿನದಿಂದ ದಿನಕ್ಕೆ ಆರ್ಥಿಕ,ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಶೈಕ್ಷಣಿಕವಾಗಿಯೂ ಸಾಕಷ್ಟು ಮುಂದೆ ಇದೆ. ಆದರೆ ಇಂತಹ ದೊಡ್ಡ ಪಟ್ಟಣದಲ್ಲಿಇಲ್ಲಿಯವರೆಗೂ ಒಂದೇ ಒಂದು ಹಾಸ್ಟೆಲ್ ಇಲ್ಲ. ಹೀಗಾಗಿ ತಾಲೂಕಿನ ಸಾವಿರಾರು ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ ಎನ್ನುವುದು ಈ ಭಾಗದ ಜನರ ದೂರು.

ಪಟ್ಟಣದಲ್ಲಿಸುಮಾರು 17-18 ಸಾವಿರದಷ್ಟು ಜನ ಸಂಖ್ಯೆ ಇದೆ. ಈ ತಾಲೂಕಿಗೆ 63 ಹಳ್ಳಿಗಳು ಒಳಪಡುತ್ತವೆ. ಸುಮಾರು 40 ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳು ಈ ಪಟ್ಟಣದಲ್ಲಿಶಿಕ್ಷಣ ಪಡೆಯಲು ಬರುತ್ತಾರೆ.

ರಟ್ಟೀಹಳ್ಳಿಯಲ್ಲಿ4-5 ಖಾಸಗಿ ಪ್ರೌಢ ಶಾಲೆಗಳಿದ್ದು, ಇತ್ತೀಚೆಗೆ ಕೆಪಿಎಸ್ ಸರಕಾರಿ ಪ್ರೌಢ ಶಾಲೆಯೂ ಆಗಿದೆ. ಸುತ್ತಮುತ್ತಲಿನ ಹಲವು ಗ್ರಾಮಗಳ ವಿದ್ಯಾರ್ಥಿಗಳಿಗೆ ರಟ್ಟೀಹಳ್ಳಿ ಕೇಂದ್ರ ಸ್ಥಾನದಂತಿದ್ದು ಹೋಗಿ ಬರಲು ಸಾಕಷ್ಟು ಅನುಕೂವಾಗಿದೆ.

ಪಟ್ಟಣದಲ್ಲಿಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಗಳು, ಸರಕಾರಿ ಪಿಯು ಕಾಲೇಜ್ , ಖಾಸಗಿ ಪಿಯು ಕಾಲೇಜ್ ಗಳು, ಪದವಿ ಕಾಲೇಜ್ , 4-5 ಖಾಸಗಿ ಪ್ರೌಢ ಶಾಲೆಗಳಿದ್ದು ಸಾವಿರಾರು ಮಕ್ಕಳು ಓದುತ್ತಿದ್ದಾರೆ. ಆದರೆ ಇಲ್ಲಿಯಾವುದೇ ಹಾಸ್ಟೆಲ್ ಗಳ ವ್ಯವಸ್ಥೆ ಇಲ್ಲದಿರುವುದರಿಂದ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ತೊಡಕಾಗಿದೆ. ಪಟ್ಟಣದಲ್ಲಿಹಾಸ್ಟೆಲ್ ವ್ಯವಸ್ಥೆ ಆದರೆ ಗ್ರಾಮೀಣ ವಿದ್ಯಾರ್ಥಿಗಳು ವಸತಿ ಮಾಡಿಕೊಂಡು ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ. ಹಾಸ್ಟೆಲ್ ಗಳು ಆಗಬೇಕೆಂಬುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ. ಆದರೆ ಇಲ್ಲಿಯವರೆಗಾದರೂ ಅದು ಈಡೇರಿಲ್ಲ.

2007 ರಲ್ಲಿವರ್ಷದ ಹಿಂದೆ ರಟ್ಟೀಹಳ್ಳಿ ಪಟ್ಟಣದಲ್ಲಿಸರಕಾರಿ ಪಿಯು ಕಾಲೇಜ್ ಆರಂಭಿಸಲಾಗಿದ್ದು ಇದರಿಂದ ಬಡ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವೂ ಆಗಿದೆ. ತಾಲೂಕು ಕೇಂದ್ರವಾಗಿರುವ ರಟ್ಟೀಹಳ್ಳಿಯಲ್ಲಿಎಸ್ ಸಿ, ಎಸ್ ಟಿ ಹಾಸ್ಟೆಲ್ , ಬಿಸಿಎಂ ಹಾಸ್ಟೆಲ್ , ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸೇರಿದಂತೆ ಎಲ್ಲವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಪ್ರತ್ಯೇಕ ಹಾಸ್ಟೆಲ್ ತೆರೆದರೆ ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿಸರಕಾರ ಗಮನಹರಿಸಬೇಕಾಗಿದೆ ಎಂಬುದು ತಾಲೂಕಿನ ಜನರ ಆಶಯ.

............ಕೋಟ್ .........

ರಟ್ಟೀಹಳ್ಳಿ ಪಟ್ಟಣದಲ್ಲಿಎಲ್ಲವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ ಗಳನ್ನು ತೆರೆದರೆ ನಮ್ಮ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ತಾಲೂಕು ಕೇಂದ್ರದಲ್ಲಿಹಾಸ್ಟೆಲ್ ವ್ಯವಸ್ಥೆಯಾಗಬೇಕು.

-ಶಂಬಣ್ಣ ಗೂಳಪ್ಪನವರ , ರಟ್ಟೀಹಳ್ಳಿ

.............ಕೋಟ್ ..............

ರಟ್ಟೀಹಳ್ಳಿ ತಾಲೂಕು ಕೇಂದ್ರದಲ್ಲಿಹಾಸ್ಟೆಲ್ ಅವಶ್ಯಕತೆ ಇದೆ. ಹಾಸ್ಟೆಲ್ ಗೆ ಸಂಬಂದಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಬಾಲಕ ಮತ್ತು ಬಾಲಕೀಯರ ಎರಡು ಮೆಟ್ರಿಕ್ ನಂತರದ ಹಾಸ್ಟೆಲ್ ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

-ಗಿರೀಶ ಮುಡಿಯಮ್ಮನವರ, ತಾಲೂಕು ಸಮಾಜ ಕಲ್ಯಾಣಾಧಿಕಾರಿ, ರಟ್ಟೀಹಳ್ಳಿ-ಹಿರೇಕೆರೂರು

ಫೋಟೊ: ಎಐ