ಪೆರಿಯ: ಬೇಕಲ್ ಗೋಕುಲಂ ಗೋಶಾಲೆಯಲ್ಲಿಪರಂಪರಾ ವಿದ್ಯಾಪೀಠದ ಆಶ್ರಯದಲ್ಲಿಆಷಾಢ ಏಕಾದಶಿಯ ಪ್ರಯುಕ್ತ 2 ದಿನಗಳ ಕಾಲ ನಡೆಯುತ್ತಿರುವ ನೃತ್ಯ ಗಾನ ಕಾರ್ಯಕ್ರಮಗಳಲ್ಲಿಶುಕ್ರವಾರ ನಡೆದ ಕೊಳಲು ಕಛೇರಿ ಗಮನಾರ್ಹವಾಗಿತ್ತು.
ಮುತ್ತುಸ್ವಾಮಿ ದೀಕ್ಷಿತರ ನಾಟ ರಾಗದಲ್ಲಿನ ಮಹಾಗಣಪತಿಯಿಂದ ಕಚೇರಿ ಆರಂಭವಾಗಿ, ಹಂಸಾನಂದಿ ರಾಗದಲ್ಲಿನ ಬಂಟುರೀತಿ ಹಾಗೂ ಸ್ವಾತಿ ತಿರುನಾಳರ ಪರಿಪಾಲಯಮಾಂ, ನಂತರ ಜನರಂಜಿನಿ, ಸಾರಮತಿ, ಆಹಿರ್ ಭೈರವ್ , ದರ್ಬಾರಿ ಕಾನಡ, ವನಮಾಲಿ, ಸಿಂಧು ಭೈರವಿ, ದೇಶ್ ಎಂಬ ರಾಗಗಳಲ್ಲಿನ ಕೃತಿಗಳನ್ನು ಕೊಳಲಿನಲ್ಲಿನುಡಿಸಿದರು. ಜಯಂತ್ ಅವರ ಶಿಷ್ಯಂದಿರಾದ ಫಣಿ ತೇಜ, ಪವನ್ ಕಲ್ಯಾಣ್ , ವಿಕಾಸ್ ಕೃಷ್ಣನ್ ಅವರೂ ಕೊಳಲಿನಲ್ಲಿಸಹಕರಿಸಿದರು. ಕುಲೂರ್ ಜಯಚಂದ್ರ ರಾವ್ ಮೃದಂಗದಲ್ಲಿಮತ್ತು ಪಯ್ಯನ್ನೂರ್ ಗೋವಿಂದ ಪ್ರಸಾದ್ ಮೋರ್ಸಿಂಗ್ ಪಕ್ಕವಾದ್ಯ ನೀಡಿದರು.ಚಿತ್ರ: 25 ಬಿಎ ಬೇಕಲ