ಫ್ಲೈಯರ್

Contributed byDHEERAJ K|Vijaya Karnataka
significant ancient snake tametara mirim details
ಹಾವಿನ ವಿಕಾಸದ ಕಥೆಯೇ ಚೇಂಜ್ !

ವಿಜ್ಞಾನಿಗಳು ದಕ್ಷಿಣ ಬ್ರೆಜಿಲ್ ನಲ್ಲಿ7.5ರಿಂದ 8.5 ಕೋಟಿ ವರ್ಷಗಳಷ್ಟು ಹಳೆಯದಾದ ಹಾವಿನ ಪಳೆಯುಳಿಕೆಯನ್ನು ಪತ್ತೆಹಚ್ಚಿದ್ದಾರೆ. ಈ ಅನ್ವೇಷಣೆಯು ಭೂಮಿಯ ಮೇಲೆ ಹಾವುಗಳು ಹೇಗೆ ವಿಕಸನಗೊಂಡವು ಎಂಬ ವಿಜ್ಞಾನಿಗಳ ಹಳೆಯ ನಂಬಿಕೆಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಈ ಅಧ್ಯಯನದ ವರದಿ ‘ನೇಚರ್ ’ವಿಜ್ಞಾನ ಪತ್ರಿಕೆಯಲ್ಲಿಪ್ರಕಟವಾಗಿದೆ.
ಹೊಸ ತಳಿಯ ಹೆಸರು: ಈ ಪ್ರಾಚೀನ ಹಾವಿಗೆ ‘ಟಮೆಟಾರಾ ಮಿರಿಮ್ ’ ಎಂದು ಹೆಸರಿಡಲಾಗಿದೆ. ಇದು ಸುಮಾರು 42 ಸೆಂಟಿಮೀಟರ್ ಉದ್ದವಿತ್ತು. ಡೈನೋಸಾರ್ ಕಾಲದ ಹಾವುಗಳ ಪಳೆಯುಳಿಕೆಗಳು ಸಿಗುವುದು ತುಂಬಾ ಅಪರೂಪ. ಆದರೆ ಈ ಪಳೆಯುಳಿಕೆಯಲ್ಲಿಶೇ. 60ರಷ್ಟು ತಲೆಬುರುಡೆ ಮತ್ತು ಶೇ. 70ರಷ್ಟು ಬೆನ್ನುಮೂಳೆ ಅತ್ಯಂತ ಸುಸ್ಥಿತಿಯಲ್ಲಿಸಿಕ್ಕಿದೆ.

ಮೆದುಳಿನ ಸಿಟಿ ಸ್ಕಾ್ಯನ್ : ವಿಜ್ಞಾನಿಗಳು ಹೈ-ರೆಸಲ್ಯೂಶನ್ ಸಿಟಿ ಸ್ ಕ್ಯಾನ್ ಬಳಸಿ ಈ ಹಾವಿನ ಮೆದುಳಿನ ರಚನೆಯನ್ನು ಅಧ್ಯಯನ ಮಾಡಿದ್ದಾರೆ. ಇದು ಇಂದಿನ ಕೋರಲ್ ಹಾವುಗಳಂತೆ ಮಣ್ಣಿನ ಅಡಿಯಲ್ಲಿಗೂಡು ಮಾಡಿ ಜೀವಿಸುವ ಗುಣ ಹೊಂದಿತ್ತು ಎಂದು ತಿಳಿದುಬಂದಿದೆ.

ವಿಕಾಸದ ಹೊಸ ಹಾದಿ: ಇಲ್ಲಿಯವರೆಗೆ ವಿಜ್ಞಾನಿಗಳು ಹಾವುಗಳು ನೀರಿನಿಂದ ಅಥವಾ ನೆಲದಿಂದ ವಿಕಸನಗೊಂಡು ಬಂದವು ಎಂದು ಭಾವಿಸಿದ್ದರು. ಆದರೆ ‘ಟಮೆಟಾರಾ ಮಿರಿಮ್ ’ ಪತ್ತೆಯಾದ ನಂತರ, ಪುರಾತನ ಹಾವುಗಳು ಮಣ್ಣಿನ ಅಡಿ, ನೆಲದ ಮೇಲೆ ಮತ್ತು ನೀರಿನಲ್ಲಿಹೀಗೆ ಬೇರೆ ಬೇರೆ ವಾತಾವರಣಕ್ಕೆ ಸ್ವತಂತ್ರವಾಗಿ ಹೊಂದಿಕೊಳ್ಳುತ್ತಾ ವಿಕಾಸಗೊಂಡಿವೆ ಎಂಬುದು ಸ್ಪಷ್ಟವಾಗಿದೆ.

ಕಾಲುಗಳಿದ್ದವೇ?: ಸುಮಾರು 17 ಕೋಟಿ ವರ್ಷಗಳ ಹಿಂದೆ ‘ಜುರಾಸಿಕ್ ’ ಅವಧಿಯಲ್ಲಿಹಾವುಗಳು ಓತಿಕ್ಯಾತ ಅಥವಾ ಹಲ್ಲಿಗಳಂತಹ ಪೂರ್ವಜರಿಂದ ವಿಕಸನಗೊಂಡವು. ಈ ಹೊಸ ಹಾವಿಗೆ ‘ನಜಾಶ್ ’ ಎಂಬ ಇನ್ನೊಂದು ಪುರಾತನ ಹಾವಿನಂತೆ ಹಿಂಗಾಲುಗಳು ಇದ್ದಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.