ಕಾಸರಗೋಡು : ನಗರದ ಸ್ಪೆಷಲ್ ಸಬ್ ಜೈಲಿನ ಹಿಂದಿನ ಭಾಗದ ಪಳ್ಳಂ ರಸ್ತೆ ಮೊದಲೇ ಸಂಪೂರ್ಣ ಹದಗೆಟ್ಟ ರಸ್ತೆಯಾಗಿದ್ದು, ಅಲ್ಲಿಯೇ ಸಮೀಪವಿರುವ ಹಳೆ ಕಟ್ಟಡವೊಂದು ಕುಸಿದು ಬೀಳುವ ಸ್ಥಿತಿಯಲ್ಲಿದೆ.
ನಗರದ ಟೌನ್ ಯುಪಿ ಶಾಲೆ ಮತ್ತು ಶಿಕ್ಷಣ ಉಪಜಿಲ್ಲಾಕಚೇರಿಯತ್ತ ಸಾಗುವ ಹಾಗೂ ವ್ಯಾಪಾರ ಸಂಸ್ಥೆಗಳಿಗೆ ಸಾಗುವ ರಸ್ತೆಯೂ ಇದಾಗಿದೆ. ಐದು ವರ್ಷಗಳ ಹಿಂದೆ ಈ ರಸ್ತೆಗೆ ಡಾಮರೀಕರಣ ನಡೆಸಲಾಗಿತ್ತು. ನಂತರದ ವರ್ಷಗಳಲ್ಲಿಇದರ ದುರಸ್ತಿ ಕೆಲಸಗಳು ನಡೆಸಿಲ್ಲಎಂದು ಪ್ರದೇಶವಾಸಿಗಳು ದೂರಿದ್ದಾರೆ. ಹದಗೆಟ್ಟಿರುವುದರಿಂದಾಗಿ ಈ ರಸ್ತೆಯಲ್ಲಿದ್ವಿಚಕ್ರ ವಾಹನಗಳು ಅಪಘಾತಕ್ಕೊಳಗಾಗುತ್ತಿರುವುದು ಸಾಮಾನ್ಯವಾಗಿದೆ. ಕಾಸರಗೋಡು ನಗರಸಭೆಗೆ ಸೇರಿದ ರಸ್ತೆಯಾಗಿದೆ. ಆದ್ದರಿಂದ ನಗರಸಭೆ ಇತ್ತ ತುರ್ತಾಗಿ ಗಮನಹರಿಸಿ ರಸ್ತೆಯನ್ನು ತುರ್ತಾಗಿ ದುರಸ್ತಿಗೊಳ ಪಡಿಸಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ. ಮಳೆಗಾಲದಲ್ಲೂಹೊಂಡಗಳಲ್ಲಿನೀರು ತುಂಬಿರುವುದರಿಂದ ದ್ವಿಚಕ್ರವಾಹನ ಸವಾರರು ಹೆಚ್ಚು ಅಪಘಾತಕ್ಕೆ ಸಾಧ್ಯತೆಯಿರುವುದರಿಂದ ಶೀಘ್ರದಲ್ಲಿಯೇ ರಸ್ತೆ ಮರು ಡಾಮರೀಕರಣ ನಡೆಸಿ ಕುಸಿತ ಭೀತಿಯಲ್ಲಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.ಚಿತ್ರ:25ಕೆಎಸ್ ರೋಡ್ ,1