ವಿಕ ಸುದ್ದಿಲೋಕ ಸಕಲೇಶಪುರಲಯನ್ಸ್ ಸಂಸ್ಥೆ ಕಳೆದ ಹಲವು ದಶಕಗಳಿಂದ ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆಗಳ ಮೂಲಕ ಜನರ ವಿಶ್ವಾಸವನ್ನು ಗಳಿಸಿದೆ ಎಂದು ಲಯನ್ಸ್ ಸಂಸ್ಥೆಯ ಮಾಜಿ ಗವರ್ನರ್ ಸಂಜೀತ್ ಶೆಟ್ಟಿ ಹೇಳಿದರು.
ಪಟ್ಟಣದಲ್ಲಿಏರ್ಪಡಿಸಿದ್ದ ಲಯನ್ಸ್ ಕ್ಲಬ್ ನ ನೂತನ(2026-27 ನೇ ಸಾಲಿನ) ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿಮಾತನಾಡಿದರು.
‘‘ಯಾವುದೇ ರೀತಿಯ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜ ಸೇವೆಯನ್ನು ಜೀವನದ ಧ್ಯೇಯವನ್ನಾಗಿಸಿಕೊಂಡಿರುವ ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ಮಾದರಿ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕಣ್ಣಿನ ತಪಾಸಣಾ ಶಿಬಿರ, ರಕ್ತದಾನ, ವಿದ್ಯಾರ್ಥಿಗಳಿಗೆ ನೆರವು, ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿಪರಿಹಾರ ಕಾರ್ಯಗಳು ಸೇರಿದಂತೆ ಅನೇಕ ಸಮಾಜಮುಖಿ ಕಾರ ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ,’’ಎಂದು ಹೇಳಿದರು.
‘‘ಸಕಲೇಶಪುರ ಲಯನ್ಸ್ ಕ್ಲಬ್ ಜಿಲ್ಲೆಹಾಗೂ ರಾಜ್ಯ ಮಟ್ಟದಲ್ಲಿಯೂ ಉತ್ತಮ ಸೇವಾ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದು, ಈ ಸಾಧನೆಯ ಹಿಂದೆ ಎಲ್ಲಾಸದಸ್ಯರ ನಿಸ್ವಾರ್ಥ ಸೇವಾ ಮನೋಭಾವವೇ ಕಾರಣವಾಗಿದೆ. ನೂತನ ಪದಾಧಿಕಾರಿಗಳು ಇದೇ ಉತ್ಸಾಹ ಹಾಗೂ ಬದ್ಧತೆಯಿಂದ ಸಮಾಜಮುಖಿ ಕಾರ ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಿ, ಜನರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಬೇಕು,’’ಎಂದರು.
2026-27ನೇ ಅವಧಿಯ ಅಧ್ಯಕ್ಷರಾಗಿ ಲ.ವಿಶ್ವನಾಥ್ , ಕಾರ ್ಯದರ್ಶಿಯಾಗಿ ಲಕ್ಷ್ಮಣ್ ರಾಮ್ ಗುರ್ಜಾರ್ , ಖಜಾಂಚಿ ಸೋಮಶೇಖರ್ , ಸಹ ಕಾರ್ಯದರ್ಶಿಯಾಗಿ ಜೈಶಂಕರ್ ಅಧಿಕಾರ ಸ್ವೀಕರಿಸಿದರು.
ಲಯನ್ಸ್ ಸಂಸ್ಥೆಯ ನಿಕಟ ಪೂರ್ವ ಅಧ್ಯಕ್ಷ ಗಿರೀಶ್ (ಮಂಜು), ಮಾಜಿ ಜಿಲ್ಲಾಗವರ್ನರ್ ಅರುಣ್ ಶೆಟ್ಟಿ, ವಸಂತ್ ಕುಮಾರ್ ಶೆಟ್ಟಿ ಮತ್ತಿತರರು ಹಾಜರಿದ್ದರು.
ಫೋಟೋ(ಊಓ23ಏ6)-
ಸಕಲೇಶಪುರದಲ್ಲಿನಡೆದ ಕಾರ ್ಯಕ್ರಮದಲ್ಲಿಲಯನ್ಸ್ ಸಂಸ್ಥೆ ನೂತನ(2026-27) ಅಧ್ಯಕ್ಷರಾಗಿ ವಿಶ್ವನಾಥ್ ಅವರು ಅಧಿಕಾರ ಸ್ವೀಕರಿಸಿದರು.