ನೂತನ ಸಾರಿಗೆ ಸೇವೆಗೆ ಚಾಲನೆ

Contributed byharishdivigihalli1@gmail.com|Vijaya Karnataka
new transport service launched in hirekerur
26 ಹೆಚ್ ಕೆಆರ್ 2

ನೂತನ ಸಾರಿಗೆ ಸೇವೆಗೆ ಚಾಲನೆ
ಹಿರೇಕೆರೂರು : ಹಿರೇಕೆರೂರು ಬಸ್ ಘಟಕಕ್ಕೆ ಸೇರ್ಪಡೆಗೊಂಡ ನೂತನ ಬಸ್ ಗಳ ಲೋಕಾರ್ಪಣೆ ಹಾಗೂ ಉದ್ಘಾಟನಾ ಸಮಾರಂಭವನ್ನು ಜು.27 ರಂದು ಇಲ್ಲಿನ ಬಸ್ ನಿಲ್ದಾಣದಲ್ಲಿಆಯೋಜಿಸಲಾಗಿದೆ ಎಂದು ಘಟಕ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಬೆಳಗ್ಗೆ 8:15 ಕ್ಕೆ ಹಿರೇಕೆರೂರಿನಿಂದ ಪ್ರಾರಂಭವಾಗುವ ಈ ಹೊಸ ಬಸ್ , ಚಿಕ್ಕೇರೂರು, ಹಂಸಭಾವಿ, ಕಾಗಿನೆಲೆ ಮಾರ್ಗವಾಗಿ ಹಿರೇಕೆರೂರು - ಹಾವೇರಿ ನಡುವೆ ಮೂರು ದುಂಡು ಸುತ್ತುವಳಿ ಸಾರಿಗೆ ಸೇವೆಯನ್ನು ಒದಗಿಸಲಿದೆ. ಈ ನೂತನ ಬಸ್ ಸೇವೆಗಳಿಗೆ ಶಾಸಕ ಯು. ಬಿ. ಬಣಕಾರ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.