Terror Birds The Last Bird That Lived In The Ice Age
ಪೇಜ್ 8 ಲೀಡ್
Contributed by: DHEERAJ K|Vijaya Karnataka•
ಟೆರರ್ ಬರ್ಡ್ಸ್
ಇಂಟ್ರೋಹಿಮಯುಗದವರೆಗೂ ಭೂಮಿಯ ಮೇಲೆ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿದ್ದ ಅತ್ಯಂತ ಯಶಸ್ವಿ ಮಾಂಸಾಹಾರಿ ಜೀವಿಗಳಾಗಿ, ಭಯಾನಕ ಹಕ್ಕಿಗಳು ಎಂದೇ ಪ್ರಸಿದ್ಧವಾಗಿದ್ದ ಟೆರರ್ ಬರ್ಡ್ಸ್ ಕುರಿತ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.
ಲಕ್ಷಾಂತರ ವರ್ಷಗಳ ಹಿಂದೆ ಭೂಮಿಯ ಮೇಲೆ ಅಧಿಧಿಪತ್ಯ ಸಾಧಿಸಿದ್ದ ಹಾರಲಾಗದ ಆದರೆ ಅತಿ ವೇಗವಾಗಿ ಓಡಿ ಬೇಟೆಯಾಡುತ್ತಿದ್ದ ದೈತ್ಯ ಮಾಂಸಾಹಾರಿ ಹಕ್ಕಿಗಳನ್ನು ಟೆರರ್ ಬರ್ಡ್ಸ್ ಅಥವಾ ಫೋರಸ್ ರಾಸಿಡೆ ಎನ್ನಲಾಗುತ್ತದೆ. ವಿಜ್ಞಾನಿಗಳು ಇದುವರೆಗೆ ಈ ಭಯಾನಕ ಹಕ್ಕಿಗಳು ಸುಮಾರು 25 ಲಕ್ಷ ವರ್ಷಗಳ ಹಿಂದೆಯೇ ಸಂಪೂರ್ಣವಾಗಿ ಅಳಿದುಹೋಗಿದ್ದವು ಎಂದು ಭಾವಿಸಿದ್ದರು. ಆದರೆ ಇತ್ತೀಚಿನ ಒಂದು ಅದ್ಭುತ ಪಳೆಯುಳಿಕೆ ಸಂಶೋಧನೆಯು ಪ್ರಾಚೀನ ಇತಿಹಾಸವನ್ನೇ ಬದಲಾಯಿಸಿದೆ. ಈ ಟೆರರ್ ಬರ್ಡ್ ಗಳು ವಿಜ್ಞಾನಿಗಳು ಅಂದಾಜಿಸಿದ್ದಕ್ಕಿಂತಲೂ ಲಕ್ಷಾಂತರ ವರ್ಷಗಳ ನಂತರ ಅಂದರೆ ಕೇವಲ 25 ಸಾವಿರ ವರ್ಷಗಳ ಹಿಂದಿನ ಹಿಮಯುಗದಲ್ಲೂದಕ್ಷಿಣ ಅಮೆರಿಕದಲ್ಲಿಜೀವಿಸಿದ್ದವು.
ತಪ್ಪಾಗಿ ಗುರುತಿಸಿದ್ದ ಮೂಳೆ: 1980ರ ದಶಕದಲ್ಲಿಬ್ರೆಜಿಲ್ ನ ಬಾಹಿಯಾ ಪ್ರಾಂತ್ಯದ ಟೋಕಾ ಡೋಸ್ ಓಸೋಸ್ ಗುಹೆಯಲ್ಲಿಹಕ್ಕಿಯೊಂದರ ಕಾಲಿನ ಮೂಳೆ ಸಿಕ್ಕಿತ್ತು. 2008ರಲ್ಲಿವಿಜ್ಞಾನಿಗಳು ಅದನ್ನು ಹದ್ದು ಜಾತಿಗೆ ಸೇರಿದ್ದು ಎಂದು ಭಾವಿಸಿ ಮ್ಯೂಸಿಯಂ ಕಪಾಟಿನಲ್ಲಿಟ್ಟು ಮರೆತಿದ್ದರು.
ಮರುಪರೀಕ್ಷೆ ತಂದ ತಿರುವು: ಬ್ರೆಜಿಲ್ ನ ಪ್ಯಾಲಿಯಂಟಾಲಜಿಸ್ವ್ ವಿಕ್ಟರ್ ಹ್ಯೂಗೋ ಮಚಾಡೊ ಮತ್ತು ತಂಡದವರು 2024ರಲ್ಲಿಈ ಮೂಳೆಯನ್ನು ಮರುಪರೀಕ್ಷಿಸಿದಾಗ, ಅದು ಸಾಮಾನ್ಯ ಹದ್ದಿನದಲ್ಲ, ಬದಲಿಗೆ ಕಿಲ್ಲರ್ ಟೆರರ್ ಬರ್ಡ್ ಗೆ ಸೇರಿದ್ದು ಎಂದು ಪತ್ತೆಯಾಯಿತು.
ಕೊನೆಯ ಭಯಾನಕ ಹಕ್ಕಿ: ವಿಜ್ಞಾನಿಗಳು ಈ ಹೊಸ ಪ್ರಬೇಧಕ್ಕೆ ಎಸ್ಕೇಟಾರ್ನಿಸ್ ಅಟೆರಾಡೋರಾ ಎಂದು ಹೆಸರಿಟ್ಟಿದ್ದಾರೆ. ಗ್ರೀಕ್ ಭಾಷೆಯಲ್ಲಿಇದರರ್ಥ ಕೊನೆಯ ಟೆರರ್ ಬರ್ಡ್ ಎಂದಾಗಿದೆ.
ಭೀಕರ ಶಿಕಾರಿ ಜೀವಿ: ಈ ತಳಿಯ ಹಕ್ಕಿಗಳು ಭೀಕರ ಶಿಕಾರಿ ಪ್ರಾಣಿಗಳಾಗಿದ್ದವು. ಕೆಲವು ದೊಡ್ಡ ಭಯಾನಕ ಹಕ್ಕಿಗಳು 10 ಅಡಿ ಎತ್ತರ ಮತ್ತು 300 ಕೆಜಿಗಿಂತಲೂ ಹೆಚ್ಚು ತೂಕ ಹೊಂದಿದ್ದವು. ಇವುಗಳಿಗೆ ಹಾರಲು ಬರುತ್ತಿರಲಿಲ್ಲ. ಆದರೆ ತಮ್ಮ ಭಾರವಾದ ತುದಿಯಲ್ಲಿಕೊಕ್ಕೆಯಂತಿದ್ದ ಶಕ್ತಿಯುತ ಕೊಕ್ಕನ್ನು ಕೊಡಲಿಯಂತೆ ಬಳಸಿ ಬೇಟೆಯ ತಲೆಯನ್ನು ಜಜ್ಜುತ್ತಿದ್ದವು.
ಡೈನೋಸಾರ್ ಗಳ ನಿಜವಾದ ವಾರೀಸುದಾರರು
6.6 ಕೋಟಿ ವರ್ಷಗಳ ಹಿಂದೆ ಡೈನೋಸಾರ್ ಗಳು ಅಳಿದುಹೋದಾಗ, ದಕ್ಷಿಣ ಅಮೆರಿಕದಲ್ಲಿಆಹಾರ ಸರಪಳಿಯ ಮೇಲ್ಭಾಗ ಖಾಲಿಯಾಯಿತು. ಅದನ್ನು ಆಕ್ರಮಿಸಿಕೊಂಡದ್ದು ಈ ಭಯಾನಕ ಹಕ್ಕಿಗಳು. ಇವು ತಮ್ಮ ಕಾಲಿನ ಚೂಪಾದ ಉಗುರುಗಳಿಂದ ಪ್ರಾಣಿಗಳನ್ನು ಮೆಟ್ಟಿ ಹಿಡಿದು ಬೇಟೆಯಾಡುತ್ತಿದ್ದವು. ದಕ್ಷಿಣ ಅಮೆರಿಕದಲ್ಲಿಕಾಣಸಿಗುವ ‘ಸೆರಿಯೇಮಾ’ ಎನ್ನುವ ಸಾಧಾರಣ ಗಾತ್ರದ ಹಕ್ಕಿ ಈ ಟೆರರ್ ಬರ್ಡ್ ಗಳ ಇಂದಿನ ಏಕೈಕ ಜೀವಂತ ವಿಕಸನೀಯ ಬಂಧು.
ಮಾನವರ ಮುಖಾಮುಖಿ: ಹೊಸ ಸಂಶೋಧನೆಯ ಪ್ರಕಾರ ಈ ಹಕ್ಕಿಗಳು 25 ಸಾವಿರ ವರ್ಷಗಳ ಹಿಂದೆಯೂ ಬದುಕಿದ್ದರಿಂದ, ಆರಂಭಿಕ ಮಾನವರು ಮತ್ತು ಈ ಹಕ್ಕಿಗಳು ಮುಖಾಮುಖಿಯಾಗಿರುವ ಸಾಧ್ಯತೆಯಿದೆ. ಏಕೆಂದರೆ ದಕ್ಷಿಣ ಅಮೆರಿಕದಲ್ಲಿಮಾನವನ ಅಸ್ತಿತ್ವದ ಪಳೆಯುಳಿಕೆಗಳು ಸಹ 25 ಸಾವಿರ ವರ್ಷಗಳಷ್ಟು ಹಳೆಯದ್ದಾಗಿವೆ.
ಬಾಕ್ಸ್
ಅಳಿದುಹೋಗಿದ್ದು ಹೇಗೆ
ಸುಮಾರು 30 ಲಕ್ಷ ವರ್ಷಗಳ ಹಿಂದೆ ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳು ಜೋಡಣೆಯಾದಾಗ, ಉತ್ತರದಿಂದ ಹುಲಿ-ತೋಳಗಳಂತಹ ಸಸ್ತನಿ ಪ್ರಾಣಿಗಳು ದಕ್ಷಿಣಕ್ಕೆ ಬಂದವು. ದೈತ್ಯ ಹಕ್ಕಿಗಳು ಈ ಪ್ರಾಣಿಗಳ ಜೊತೆಗಿನ ಸ್ಪರ್ಧೆಯಲ್ಲಿಸೋತು ಅಳಿದುಹೋದವು. ಆದರೆ, ಸಣ್ಣ ಗಾತ್ರದ ಭಯಾನಕ ಹಕ್ಕಿಗಳು ಹವಾಮಾನ ಬದಲಾವಣೆ ಮತ್ತು ಹಿಮಯುಗದ ಕೊನೆಯವರೆಗೂ ಬದುಕಿ ಉಳಿಯಲು ಯಶಸ್ವಿಯಾಗಿದ್ದವು ಎಂಬುದನ್ನು ಈ ಹೊಸ ಪಳೆಯುಳಿಕೆ ನಿರೂಪಿಸಿದೆ.