ಅಮೆರಿಕ ಸುಂಕ ಬೆದರಿಕೆ ಹಿಂದಿನ ರಹಸ್ಯ

Contributed byPanchami M S|Vijaya Karnataka
us drug tariff threat a concern for india
ಅಮೆರಿಕದಲ್ಲಿಯೇ ಜೆನೆರಿಕ್ ಔಷಧಗಳ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ, ವಿದೇಶಿ

ಔಷಧಗಳ ಮೇಲಿನ ಆಮದು ಸುಂಕವನ್ನು 2 ವರ್ಷಗಳ ನಂತರ ಶೇಕಡಾ 100ಕ್ಕೆ ಮತ್ತು ತದನಂತರ ಶೇಕಡಾ 200ಕ್ಕೆ ಹೆಚ್ಚಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ… ಟ್ರಂಪ್ ಘೋಷಿಸಿದ್ದಾರೆ. ಈ ಹಿಂದೆ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಧಿಕಾರಗಳ ಕಾಯಿದೆ, 1974ರ ವ್ಯಾಪಾರ ಕಾಯಿದೆಯ ಸೆಕ್ಷನ್ 122 ಹಾಗೂ 1962ರ ವ್ಯಾಪಾರ ವಿಸ್ತರಣಾ ಕಾಯಿದೆಯ ಸೆಕ್ಷನ್ 232ರ ಅಡಿಯಲ್ಲಿಟ್ರಂಪ್ ಆಡಳಿತ ಜಾರಿಗೆ ತಂದ ಹೆಚ್ಚಿನ ಸುಂಕ ನೀತಿಗಳಿಂದ ಔಷಧಗಳಿಗೆ ವಿನಾಯಿತಿ ನೀಡಲಾಗಿತ್ತು. ಇವುಗಳ ರಕ್ಷಣೆಯ ಹೊರತಾಗಿಯೂ, ಈ ಹೊಸ ನಿರ್ಧಾರ ಭಾರತಕ್ಕೆ ಆತಂಕವನ್ನು ಉಂಟು ಮಾಡಿದೆ. ಅಮೆರಿಕ ತಂತ್ರಗಳೇನು? ಟ್ರಂಪ್ ಔಷಧಗಳ ಮೇಲೆ ಸುಂಕ ವಿಧಿಧಿಸುವ ಕುರಿತು ಎರಡು ಬಾರಿ ಎಚ್ಚರಿಕೆ ನೀಡಿದ್ದರು. ಕಳೆದ ಏಪ್ರಿಲ್ 2ರಂದು, ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ, ನಿರ್ದಿಷ್ಟ ಬ್ರಾಂಡೆಡ್ ಔಷಧಗಳ ಮೇಲೆ ಜುಲೈ
31ರಿಂದ ಶೇಕಡಾ 100ರಷ್ಟು ಸುಂಕ ವಿಧಿಧಿಸುವುದಾಗಿ ಹೇಳಿದ್ದರು. ಇದಕ್ಕೂ ಮುನ್ನ 2025ರ ಸೆಪ್ಟೆಂಬರ್ 25ರಂದು ಪೇಟೆಂಟ್ ಪಡೆದ ಔಷಧಗಳ ಮೇಲೂ ಇಷ್ಟೇ ಸುಂಕ ವಿಧಿಧಿಸುವ ಯೋಜನೆ ಎಂದಿದ್ದರು. ಆದರೆ, ಈ ಎರಡೂ ಪ್ರಸ್ತಾಪಗಳು ಇಂದಿಗೂ ಜಾರಿಗೆ ಬಂದಿಲ್ಲ. ವ್ಯಾಪಾರ ತಜ್ಞರ ಪ್ರಕಾರ, ಮಧ್ಯಂತರ

ಚುನಾವಣೆಗಳಿಗೆ ಕೆಲವು ವಾರಗಳಷ್ಟೇ ಬಾಕಿ ಇರುವಾಗ ಔಷಧ ಬೆಲೆ ಏರಿಕೆಯು ಸರಕಾರದ ವಿರುದ್ಧ ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಬಹುದು. ಹೀಗಾಗಿ ಸುಂಕ ಏರಿಸುವುದಕ್ಕಿಂತಲೂ, ಜಾಗತಿಕ ಫಾರ್ಮಾ ಸಂಸ್ಥೆಗಳು ಅಮೆರಿಕದಲ್ಲೇ ಹೂಡಿಕೆ ಮಾಡುವಂತೆ ಒತ್ತಡ ಹೇರುವುದೇ

ಈ ಬೆದರಿಕೆಗಳ ಹಿಂದಿರುವ ಮುಖ್ಯ

ಉದ್ದೇಶವಾಗಿದೆ.