ಒಂದೆಡೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ, ಮತ್ತೊಂದೆಡೆ ದಟ್ಟಾರಣ್ಯದ ಭೌಗೋಳಿಕ ಸವಾಲಿನ ನಡುವೆ ಸಿಲುಕಿರುವ ಕೌಕ್ರಾಡಿ ಗ್ರಾಮ ಪಂಚಾಯಿತಿ ಈಗ ಅಭಿವೃದ್ಧಿ ವಿಚಾರದಲ್ಲಿಹೊಸ ಸವಾಲುಗಳನ್ನು ಎದುರಿಸುತ್ತಿದೆ. ಜತೆಗೆ ಕಳೆದ ಮೂರು ದಶಕಗಳಿಂದ ಇಚಿಲಂಪಾಡಿಯನ್ನು ಪ್ರತ್ಯೇಕ ಗ್ರಾಮ ಪಂಚಾಯಿತಿಯಾಗಿ ಘೋಷಿಸಬೇಕೆಂದು ಜನ ಆಗ್ರಹಿಸುತ್ತಿದ್ದಾರೆ.
ಕಡಬ ತಾಲೂಕು ವ್ಯಾಪ್ತಿಯ ಕೌಕ್ರಾಡಿ ಗ್ರಾಮ ಪಂಚಾಯಿತಿ 8383.9 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು, 2 ಗ್ರಾಮಗಳು, 5 ವಾರ್ಡ್ ಗಳಿದ್ದು, 6962 ಜನಸಂಖ್ಯೆ ಹೊಂದಿದೆ. ಪಂಚಾಯಿತಿಯ ಒಂದು ಭಾಗ ದಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದರೆ, ಇನ್ನೊಂದು ಭಾಗ ರಾಷ್ಟ್ರೀಯ ಹೆದ್ದಾರಿ- 75ರ ಅಂಚಿನಲ್ಲಿವಿಸ್ತರಿಸಿದೆ. ಕಳೆದ ಕೆಲವು ವರ್ಷಗಳಲ್ಲಿರಸ್ತೆ, ಕುಡಿಯುವ ನೀರು, ಬೀದಿದೀಪ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.
ಹೆದ್ದಾರಿ ಕಾಮಗಾರಿಯಿಂದ ಪಂಚಾಯಿತಿಗೆ ನೇರ ಸಂಪರ್ಕ ಕಲ್ಪಿಸುವ ರಸ್ತೆಗಳು ಕಡಿತಗೊಂಡಿವೆ. ಕುಡಿಯುವ ನೀರಿನ ಪೈಪ್ ಲೈನ್ ಗಳು ಹಾನಿಗೊಳಗಾಗಿದ್ದು, ಚರಂಡಿ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ. ಮಳೆಗಾಲದಲ್ಲಿನೀರು ಸರಾಗವಾಗಿ ಹರಿಯದೆ ಕೆಲವೆಡೆ ಸಮಸ್ಯೆ ಉಲ್ಬಣಿಸಿದೆ.
ಆದಾಯ ಮೂಲ: ಸ್ವಂತ ನಿಧಿ, ವಾಣಿಜ್ಯ ಸಂಕೀರ್ಣಗಳ ತೆರಿಗೆ ಹಾಗೂ ಕಟ್ಟಡಗಳ ಏಲಂ ಸೇರಿದಂತೆ ಸ್ಥಳೀಯ ಮೂಲಗಳಿಂದ ಪಂಚಾಯಿತಿಗೆ ವಾರ್ಷಿಕ ಸುಮಾರು 35 ಲಕ್ಷ ರೂ. ಆದಾಯ ಬರುತ್ತದೆ. ಆದರೆ ಸುಮಾರು 49 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿದಿರುವುದು ದೊಡ್ಡ ಸವಾಲಾಗಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ4 ಪ್ರಾಥಮಿಕ ಶಾಲೆಗಳು, 9 ಅಂಗನವಾಡಿ ಕೇಂದ್ರಗಳು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ 2 ಸ್ಮಶಾನಗಳಿವೆ. ಜಲ ಜೀವನ್ ಮಿಷನ್ ಯೋಜನೆಯಡಿ ಇಚಿಲಂಪಾಡಿ ವ್ಯಾಪ್ತಿಯಲ್ಲಿ87 ಲಕ್ಷ ರೂ. ಹಾಗೂ ಕೌಕ್ರಾಡಿ ವ್ಯಾಪ್ತಿಯಲ್ಲಿ191 ಲಕ್ಷ ರೂ. ವೆಚ್ಚದಲ್ಲಿಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ಮನರೇಗಾ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿರಸ್ತೆ, ಚರಂಡಿ, ನೀರು ಸಂಗ್ರಹಣೆ ಹಾಗೂ ಸಾರ್ವಜನಿಕ ಕಾಮಗಾರಿಗಳು ಗಮನಾರ್ಹವಾಗಿ ನಡೆದಿವೆ.
ಬೇಡಿಕೆಗಳು
*ನಿವೇಶನ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಲು ಸೂಕ್ತ ನಿವೇಶನದ ಬೇಡಿಕೆ.
*15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗದೆ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿ.
* ಗ್ರಾಮೀಣ ಭಾಗದಲ್ಲಿಮೊಬೈಲ್ ನೆಟ್ವರ್ಕ್ ಕೊರತೆಯಿಂದ ಜಿಪಿಎಸ್ ಆಧಾರಿತ ಸಮೀಕ್ಷೆಗಳಿಗೆ ತೊಂದರೆ.
*ಕೃಷಿ ಚಟುವಟಿಕೆಗಳಿಗಾಗಿ ಲೋ ವೋಲ್ಟೇಜ್ ಸಮಸ್ಯೆಗೆ ಬೇಕಿದೆ ಮುಕ್ತಿ.
*ಪಟ್ಲಡ್ಕ-ಇಚಿಲಂಪಾಡಿ ರಸ್ತೆಯ ಎರಡೂ ಬದಿ ಇರುವ ಬೃಹತ್ ಮರಗಳ ತೆರವು.
ಗ್ರಾಮೀಣ ಪ್ರದೇಶದ ಭೌಗೋಳಿಕ ಹಾಗೂ ಅರಣ್ಯ ಸಂಬಂಧಿತ ಸವಾಲುಗಳ ನಡುವೆಯೂ ಕೌಕ್ರಾಡಿ ಪಂಚಾಯಿತಿಯಲ್ಲಿಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಹೆದ್ದಾರಿ ಕಾಮಗಾರಿಯಿಂದ ಉಂಟಾದ ಸಂಪರ್ಕ ರಸ್ತೆ ಹಾಗೂ ಚರಂಡಿ ಸಮಸ್ಯೆಗಳ ಕುರಿತು ಮೇಲ್ಮಟ್ಟದಲ್ಲಿನಿರಂತರ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಲಭ್ಯವಿರುವ ನಿಧಿಯಲ್ಲಿತುರ್ತು ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ.
-ಮೋಹನ್ ಕುಮಾರ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪ್ರಭಾರ).
ಜಲ ಜೀವನ್ ಮಿಷನ್ ಯೋಜನೆಯಡಿ ಕೌಕ್ರಾಡಿ ಹಾಗೂ ಇಚಿಲಂಪಾಡಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳು ಗ್ರಾಮೀಣ ಜನರಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶ ಹೊಂದಿವೆ. ತಾಂತ್ರಿಕ ಅಡಚಣೆಗಳಿದ್ದರೂ ಯೋಜನೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ತುರ್ತು ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ.
-ಸುರೇಶ್ , ಆಡಳಿತ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪುತ್ತೂರು.
ಸದಸ್ಯ ಮಂಡಳಿ ಹಾಗೂ ಅಧಿಕಾರಿಗಳ ಸಹಕಾರದಿಂದ ನನ್ನ ಅಧ್ಯಕ್ಷೀಯ ಅವಧಿಯಲ್ಲಿರಸ್ತೆ, ಕುಡಿಯುವ ನೀರು, ಬೀದಿದೀಪ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿದ್ದೇವೆ. ಕೌಕ್ರಾಡಿಯ ಸಮಗ್ರ ಅಭಿವೃದ್ಧಿಗಾಗಿ ಜನರೊಂದಿಗೆ ನೇರ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸಿದ್ದೇವೆ.