ಮಾನವನ ಕಣ್ಣುಗಳ ವಿಕಾಸದ ಕುರಿತು ವಿಜ್ಞಾನಿಗಳು ಅತ್ಯಂತ ರೋಚಕ ಸಂಗತಿಯೊಂದನ್ನು ಪತ್ತೆಹಚ್ಚಿದ್ದಾರೆ. ಸುಮಾರು 60 ಕೋಟಿ ವರ್ಷಗಳ ಹಿಂದೆ ಜೀವಿಸಿದ್ದ ಒಂಟಿ ಕಣ್ಣಿನ ಸೂಕ್ಷ್ಮ ಜೀವಿಯಿಂದ ಮಾನವ ಹಾಗೂ ಎಲ್ಲಾಬೆನ್ನೆಲುಬುಳ್ಳ ಜೀವಿಗಳ ಕಣ್ಣುಗಳು ವಿಕಸನಗೊಂಡಿವೆ ಎಂದು ಸ್ವೀಡನ್ ನ ಲುಂಡ್ ವಿಶ್ವವಿದ್ಯಾಲಯ ಮತ್ತು ಸಸ್ಸೆP್ಸ… ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿದ್ದಾರೆ.60 ಕೋಟಿ ವರ್ಷಗಳ ಹಿಂದಿನ ಪಳೆಯುಳಿಕೆ
ಸುಮಾರು 60 ಕೋಟಿ ವರ್ಷಗಳ ಹಿಂದೆ ಸಮುದ್ರದಲ್ಲಿದ್ದ ಕ್ರಿಮಿಯಂತಹ ಅತ್ಯಂತ ಸಣ್ಣ ಜೀವಿ ಒಂದೇ ಜಾಗದಲ್ಲಿ ನಿಂತು ಆಹಾರ ಶೋಧಿಧಿಸುತ್ತಿತ್ತು. ಆರಂಭಿಕ ಹಂತದಲ್ಲಿಇದು ಎರಡು ಕಣ್ಣುಗಳನ್ನು ಹೊಂದಿತ್ತು. ಆ ಜೀವಿಯು ಅತ್ಯಂತ ಶಾಂತ ಮತ್ತು ಒಂದೇ ಕಡೆಯಲ್ಲಿನೆಲೆಸುವ ಜೀವನಶೈಲಿಗೆ ಒಗ್ಗಿಕೊಂಡಿದ್ದರಿಂದ ಅದು ಜೋಡಿ ದೃಷ್ಟಿಯ ಮೇಲೆ ಹೆಚ್ಚು ಅವಲಂಬಿತವಾಗಿರಲಿಲ್ಲ. ಹಲವು ತಲೆಮಾರುಗಳ ಅವಧಿಧಿಯಲ್ಲಿ ಆ ಕಣ್ಣುಗಳು ಕ್ರಮೇಣ ಕಣ್ಮರೆಯಾದವು. ಎರಡು ಕಣ್ಣುಗಳು ನಶಿಸಿದರೂ, ತಲೆಯ ಮಧ್ಯಭಾಗದಲ್ಲಿಬೆಳಕನ್ನು ಗ್ರಹಿಸುವ ಜೀವಕೋಶಗಳ ಗುಂಪು ಉಳಿದುಕೊಂಡಿತು. ಇದು ಹಗಲು-ರಾತ್ರಿ ಹಾಗೂ ಮೇಲ್ಭಾಗದ ದಿಕ್ಕನ್ನು ಗುರುತಿಸಲು ಈ ಜೀವಿಗೆ ಸಹಾಯ ಮಾಡುತ್ತಿತ್ತು.
ಮತ್ತೆ ಮೂಡಿದ ಕಣ್ಣುಗಳು
ಮಿಲಿಯನ್ ಗಟ್ಟಲೆ ವರ್ಷಗಳ ನಂತರ ಆ ಪ್ರಾಣಿಯ ಸಂತತಿಯು ಮತ್ತೆ ಸಕ್ರಿಯವಾಗಿ ಈಜಲು ಪ್ರಾರಂಭಿಸಿತು. ಚಲನಶೀಲ ಜೀವನಶೈಲಿಯು ದೃಷ್ಟಿಯ ಅಗತ್ಯವನ್ನು ಮತ್ತೆ ಸೃಷ್ಟಿಸಿತು. ಆಗ ಈ ಮಧ್ಯದ ಕಣ್ಣಿನ ಭಾಗಗಳೇ ರೂಪಾಂತರಗೊಂಡು ಜೋಡಿ ಕಣ್ಣುಗಳಾಗಿ ವಿಕಸನಗೊಂಡವು.
ಇತರ ಜೀವಿಗಳಿಗೂ ನಮಗೂ ಇರುವ ವ್ಯತ್ಯಾಸ
ಆ ಪ್ರಾಚೀನ ಒಂಟಿ ಕಣ್ಣಿನ ಅವಶೇಷವು ಇಂದಿಗೂ ಮಾನವನ ಮಿದುಳಿನ ಆಳದಲ್ಲಿಪಿನಿಯಲ್ ಗ್ರಂಥಿ ರೂಪದಲ್ಲಿಉಳಿದುಕೊಂಡಿದೆ. ನಾವು ಕಣ್ಣಿನಿಂದ ನೋಡಲು ಪಿನಿಯಲ್ ಗ್ರಂಥಿಯನ್ನು ಬಳಸದಿದ್ದರೂ, ಅದು ಬೆಳಕು ಮತ್ತು ಕತ್ತಲೆಯನ್ನು ಗ್ರಹಿಸಿ ಮೆಲಟೋನಿನ್ ಎಂಬ ಹಾರ್ಮೋನ್ ಸ್ರವಿಸುತ್ತದೆ. ಇದು ನಮ್ಮ ದೇಹದ ಹಗಲು-ರಾತ್ರಿಯ ನಿದ್ರೆಯ ಚಕ್ರವನ್ನು ನಿಯಂತ್ರಿಸುತ್ತದೆ.
ಮಾನವ ಹಾಗೂ ಬೆನ್ನುಮೂಳೆ ಇರುವ ಜೀವಿಗಳ ಕಣ್ಣಿನ ರೆಟಿನಾ ನೇರವಾಗಿ ಮಿದುಳಿನ ಅಂಗಾಂಶದಿಂದ ವಿಕಸನಗೊಂಡರೆ, ಕೀಟಗಳು ಮತ್ತು ಸ್ಕ್ವಿಡ್ ಗಳ ಕಣ್ಣುಗಳು ಚರ್ಮದ ಹೊರಭಾಗದಿಂದ ವಿಕಾಸಗೊಳ್ಳುತ್ತವೆ. ಮೀನುಗಳು, ಕಪ್ಪೆಗಳು ಮತ್ತು ಕೆಲವು ರೀತಿಯ ಹಲ್ಲಿಗಳಲ್ಲಿ ತಲೆಯ ಮೇಲ್ಭಾಗದಲ್ಲಿಇಂದಿಗೂ ಈ ಮಧ್ಯದ ಕಣ್ಣು ಬೆಳಕನ್ನು ಗ್ರಹಿಸುವ ಸಣ್ಣ ಚುಕ್ಕೆಯಂತೆ ಕಂಡುಬರುತ್ತದೆ.