ಇಂಟ್ರೊವಿವಾಹಗಳಂಥ ಸಮಾರಂಭಗಳಲ್ಲಿಸಾಂಪ್ರದಾಯಿಕ ಅದ್ಧೂರಿ ದಿರಸುಗಳ ಸ್ಥಾನವನ್ನು ಆಧುನಿಕ ವಿನ್ಯಾಸದ ಮೆಟಾಲಿಕ್ ಲುಕ್ ಒಳಗೊಂಡ ಉಡುಪುಗಳು ಆವರಿಸಿವೆ.
ಲವಲವಿಕೆ ಸುದ್ದಿಲೋಕ
ವಿವಾಹದ ಉಡುಗೆ ಅಂದರೆ ಅಲ್ಲಿಕಸೂತಿಗಳು ಮೇಳೈಸುತ್ತವೆ, ಜರಿ, ಸ್ಟೋನ್ ಗಳು ಹೊಳೆಯುತ್ತವೆ. ರೇಷ್ಮೆಯ ಗತ್ತು ಇಡೀ ಉಡುಪಿನ ಸಿರಿತನವನ್ನು ಬಿಂಬಿಸುತ್ತದೆ. ಹಾಗೆ ಅದ್ಧೂರಿಯಾಗಿ ಕಾಣಿಸುವುದರಲ್ಲಿಸಂಭ್ರಮಿಸುತ್ತಿದ್ದ ಮದುವೆ ಉಡುಪುಗಳಲ್ಲಿಒಂದಷ್ಟು ಆಧುನಿಕ ಟ್ವಿಸ್ಟ್ ನೀಡುವ ವಿಭಿನ್ನ ಪ್ರಯೋಗಗಳು ನಡೆಯುತ್ತಿವೆ.
ಮದುವೆ ಫ್ಯಾಷನ್
ಸಾಂಪ್ರದಾಯಿಕ ನೇಯ್ಗೆಯ ಸೊಬಗನ್ನು ಕಾಯ್ದುಕೊಳ್ಳುತ್ತಲೇ ಆಧುನಿಕ ಜುವೆಲ್ಲರಿ ಆರ್ಟ್ ಮತ್ತು ಮೆಟಾಲಿಕ್ ವಿನ್ಯಾಸಗಳನ್ನು ಮದುವೆಯ ಉಡುಪಿನಲ್ಲಿಪ್ರಯೋಗಿಸುವ ವೆಡ್ಡಿಂಗ್ ಟ್ರೆಂಡ್ ಈಗ ಸದ್ದು ಮಾಡುತ್ತಿದೆ. ಈ ಮೂಲಕ ಇಂದಿನ ಕಾಲದ ಮದುವೆ ಫ್ಯಾಷನ್ ಎಂದರೆ ಕೇವಲ ಸಾಂಪ್ರದಾಯಿಕ ಉಡುಪು ಧರಿಸುವುದಷ್ಟೇ ಅಲ್ಲ, ತಮಗೆ ಇಷ್ಟವಾದ ಶೈಲಿಯನ್ನು ಧೈರ್ಯವಾಗಿ ಅಭಿವ್ಯಕ್ತಪಡಿಸುವುದು ಎಂಬುದನ್ನು ಸಾರಲು ಹೊರಟಿದ್ದಾರೆ ಯುವತಿಯರು. ಇದರ ಭಾಗವಾಗಿ ಮದುವೆ ಉಡುಪುಗಳಲ್ಲಿಜುವೆಲ್ಲರಿ ಡಿಸೈನ್ , ಶಿಲ್ಪಕಲೆ ಮತ್ತು ಪಾರಂಪರಿಕ ನೇಯ್ಗೆಯನ್ನು ಒಟ್ಟಿಗೆ ಸೇರಿಸಿ ರೂಪಿಸುವ ವಿಶಿಷ್ಟ ಉಡುಪುಗಳು ಗಮನ ಸೆಳೆಯುತ್ತಿವೆ. ಇತ್ತೀಚೆಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅಂತಹ ಲುಕ್ ನಲ್ಲಿಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.
ಮೆಟಾಲಿಕ್ ಶೈಲಿ
ಜಾಹ್ನವಿ ಧರಿಸಿದ್ದ ದಿರಸಲ್ಲಿಸಾಂಪ್ರದಾಯಿಕ ಸೀಕ್ವಿಸ್ಸ್ ಅಥವಾ ಹೊಳೆಯುವ ಸ್ಟೋನ್ ಗಳ ಕೆಲಸದ ಬದಲಿಗೆ ಚಿನ್ನದ ಬಸ್ಟಿಯರ್ ಅತ್ಯಾಕರ್ಷಕ ಕಲಾಕೃತಿಯಂತೆ ಕಾಣುತ್ತದೆ. ಲೋಹದ ಸೂಕ್ಷ್ಮ ಮೃದುತ್ವ ಮತ್ತು ಅದಕ್ಕೆ ನೀಡಲಾದ ಆಕಾರವೇ ಉಡುಪಿಗೆ ಗಾಂಭೀರ್ಯ ನೀಡುತ್ತದೆ. ಸಾಂಪ್ರದಾಯಿಕ ಲೆಹೆಂಗಾಗಳ ಬದಲಿಗೆ ಇಲ್ಲಿಮೆಟಾಲಿಕ್ ರೇಷ್ಮೆ ಸ್ಕರ್ಟ್ ಅನ್ನು ಮೃದುವಾಗಿ ಡ್ರೇಪ್ ಮಾಡಲಾಗಿದೆ. ಇದರೊಂದಿಗೆ ಹೆಗಲ ಮೇಲೆ ಹಾಕಿಕೊಂಡಿರುವ ರೇಷ್ಮೆ ಶಾಲಿನ ಮೇಲಿನ ಹುಲಿ ವಿನ್ಯಾಸ ಮತ್ತು ಜಾಲರಿ ಕೆಲಸಗಳು ಈ ಆಧುನಿಕ ಉಡುಪಿಗೆ ಸಾಂಪ್ರದಾಯಿಕ ಸೊಬಗನ್ನು ನೀಡುತ್ತವೆ. ಬಸ್ಟಿಯರ್ ನ ಮೆರುಗಿಗೆ ಧಕ್ಕೆ ಬಾರದಂತೆ ಸರಳ ಚಿನ್ನದ ಚೋಕರ್ ಮತ್ತು ಜುಮ್ಕಿಗಳನ್ನು ಧರಿಸಬಹುದು. ಹಣೆಗೊಂದು ಸಣ್ಣ ಕಪ್ಪು ಬಿಂದಿ, ನೀಟಾಗಿ ಹೆಣೆದ ಜಡೆ ಮತ್ತು ಲೈಟ್ ಮೇಕ್ ಅಪ್ ಮಾಡಬಹುದು ಎಂಬುದನ್ನು ಜಾಹ್ನವಿ ತೋರಿಸಿದ್ದಾರೆ. ಈ ಬಗೆಯ ಉಡುಗೆಗಳು ರಿಸೆಪ್ಷನ್ ಅಥವಾ ಕಾಕ್ಟೇಲ್ ಪಾರ್ಟಿಗಳಿಗೆ ಸೂಕ್ತ.
ಬಾಕ್ಸ್
ಡ್ರೇಪಿಂಗ್ ಸ್ಕರ್ಟ್ ಫ್ಯಾಷನ್
ಕಾಲಿನ ಬಳಿ ದೊಡ್ಡದಾಗಿ ಹರಡಿಕೊಳ್ಳುವ ಲೆಹೆಂಗಾಗಳ ಬದಲಿಗೆ ಸೀರೆಯ ಲುಕ್ ನೆನಪಿಸುವ ಡ್ರೇಪಿಂಗ್ ಸ್ಕರ್ಟ್ ಗಳು ಗಮನ ಸೆಳೆಯುತ್ತಿವೆ. ದೇಹದ ಆಕಾರಕ್ಕೆ ತಕ್ಕಂತೆ ಕಾಣಿಸುವ ಮೆಟಾಲಿಕ್ ಸಿಲ್ಕ… ಸ್ಕರ್ಟ್ , ಕೇವಲ ರಾಯಲ್ ಲುಕ್ ನೀಡುವುದಲ್ಲದೆ ಧರಿಸಲು ಆರಾಮದಾಯಕ. ಚಿನ್ನ, ಬೆಳ್ಳಿ, ತವರಗಳಂಥ ಮೆಟಾಲಿಕ್ ನೀಡುವ ಈ ಬಗೆಯ ಸ್ಕರ್ಟ್ ಗಳು ಈಗ ಟ್ರೆಂಡಿಂಗ್ ನಲ್ಲಿವೆ. ಇದನ್ನು ಸಾಂಪ್ರದಾಯಿಕ ಹಾಗೂ ಮಾಡರ್ನ್ ಲುಕ್ ನೊಂದಿಗೆ ಸಂಯೋಜಿಸಬಹುದು ಎಂಬುದೇ ಇದರ ವಿಶೇಷ. ಸರಳ ವಿನ್ಯಾಸದೊಂದಿಗೆ ಅದ್ಧೂರಿ ನೋಟ ನೀಡುತ್ತದೆ.