ಇಂಟ್ರೊಸಂಗಾತಿಗಳ ನಡುವೆ ಸಂಬಂಧ ಗಟ್ಟಿಯಾಗಲು, ಪ್ರೀತಿಯ ಆಯ್ಕೆಯಲ್ಲಿಅನುಸರಿಸುವ ಮಾನದಂಡ ಮತ್ತು ಗುಣಗಳು ಕೂಡ ಮುಖ್ಯ ಅಂಶವೇ ಆಗಿರುತ್ತವೆ. ಸಂಗಾತಿಗೆ ಕೊಡುವ ಗೌರವ, ಕ್ಷೇಮ, ಕಾಳಜಿಯು ಪ್ರೀತಿ ಬಾಂಧವ್ಯದ ದೀರ್ಘಾಯುಷ್ಯವನ್ನು ನಿರ್ಧರಿಸುತ್ತವೆ.
ವಾಣಿ ಮೈಸೂರು
ಸಂಗಾತಿಗಳು ಪರಸ್ಪರ ಅನ್ಯೋನ್ಯತೆಯಿಂದ ಬಾಳ್ವೆ ನಡೆಸಲು ಪ್ರೀತಿಯ ನಂಟು ಅಗಾಧವಾಗಿ ಬೆಸೆದಿರಬೇಕು ಮತ್ತು ಅರ್ಥ ಮಾಡಿಕೊಳ್ಳುವ ಗುಣದಲ್ಲಿಇಬ್ಬರಲ್ಲೂಸಹಮತವಿರಬೇಕು. ಪ್ರೀತಿಯೆಂದರೆ ಒಂದು ಅದ್ಭುತ ಭಾವ. ಅದನ್ನು ವ್ಯಕ್ತಪಡಿಸುವ ಮತ್ತು ಬಯಸುವ ರೀತಿಯಲ್ಲಿವಿಧಗಳು ಕೂಡ ಇರುತ್ತದೆ. ಪ್ರೀತಿ ಬಗ್ಗೆ ವಿಶ್ಲೇಷಣೆಯಲ್ಲಿಪ್ರತಿ ಪುರುಷ ಮತ್ತು ಮಹಿಳೆಯಲ್ಲಿಅವರದ್ದೇ ವಿಭಿನ್ನ ಅಭಿರುಚಿ ಹಾಗೂ ಆದ್ಯತೆಗಳಿರುತ್ತವೆ.
ಪ್ರೀತಿ ಹೆಚ್ಚಿಸುವ ಗುಣ
ಸಂಗಾತಿಯ ಜತೆಗಿನ ನಗು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಮತ್ತು ಆಹ್ಲಾದಕರ ಕ್ಷಣಗಳನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸಂಗಾತಿಗಳು ಸಹ ವಿಶ್ವಾಸಾರ್ಹತೆ ಹುಡುಕುತ್ತಾರೆ. ಅವರು ಪ್ರಾಮಾಣಿಕ ಮತ್ತು ಸ್ವಯಂಪ್ರೇರಿತ ಪಾಟ್ರ್ನರ್ ಗಳನ್ನು ಹೆಚ್ಚು ಬಯಸುತ್ತಾರೆ. ಈ ಗುಣ ಚಿರಸಂಬಂಧ ಬೆಸೆಯುವ ಕಾರಣ ಇದು ಸಂಗಾತಿಗಳ ನಡುವೆ ಸೇತುವೆ ನಿರ್ಮಿಸುತ್ತದೆ ಮತ್ತು ಶಾಶ್ವತ ಜೀವನವನ್ನು ವಿನಿಮಯಿಸಿಕೊಳ್ಳಲು ಸಹಾಯ ಮಾಡುತ್ತದೆ.
ಭಾವನೆಗಳ ವಿನಿಮಯ
ಉಪಸ್ಥಿತಿ, ಆಲಿಸುವಿಕೆ, ತಿಳಿವಳಿಕೆಯನ್ನೂ ಸಂಗಾತಿಗಳು ಬಯಸುತ್ತಾರೆ. ಇವೆಲ್ಲವೂ ಸಂಗಾತಿಗಳ ಪ್ರೀತಿ ಹೊಂದಾಣಿಕೆಯನ್ನು ಗಟ್ಟಿಗೊಳಿಸುತ್ತದೆ ಮತ್ತು ಬಂಧವನ್ನು ಚಿರಗೊಳಿಸುತ್ತದೆ. ಅವರಿಬ್ಬರು ಭಾವೋದ್ರೇಕತೆಯನ್ನು ಪರಸ್ಪರ ಹಂಚಿಕೊಳ್ಳುವುದರಿಂದಲೂ ಸಂಬಂಧ ಹತ್ತಿರವಾಗುತ್ತದೆ. ಬೇಸರದ ಭಾವನೆ ಇಬ್ಬರಲ್ಲೂಏಕತಾನತೆ ಸೃಷ್ಟಿಸುತ್ತದೆ. ಅದಕ್ಕಾಗಿ ಭಾವನೆಗಳನ್ನು ವಿನಿಮಯಿಸಿಕೊಂಡಷ್ಟು ಸಂಗಾತಿಯ ಮನಸ್ಸನ್ನು ಅರಿಯಲು ಸಾಧ್ಯವಾಗುತ್ತದೆ.
ಬಾಕ್ಸ್
ಪ್ರೀತಿ ಕಳೆದುಕೊಳ್ಳುವ ಲಕ್ಷಣ
ಯಾವ ಸಂಬಂಧದಲ್ಲಿಅನುಮಾನ ಮತ್ತು ನಂಬಿಕೆಯ ಕೊರತೆ ಇರುವುದೋ ಅಲ್ಲಿಹೊಂದಾಣಿಕೆ ದೂರದ ಮಾತಾಗಿ ಉಳಿಯುತ್ತದೆ. ಈ ನ್ಯೂನತೆಗಳು ಸಂಬಂಧವನ್ನು ವಿಷಕಾರಿ ಜಗತ್ತಿನಲ್ಲಿಮುಳುಗಿಸುತ್ತವೆ. ಇದರಿಂದ ಸಂಬಂಧ ಮುರಿದು ಹೋಗುತ್ತದೆ. ಸಂಗಾತಿಗಳು ಪರಸ್ಪರ ಗೌರವ ಬಯಸುತ್ತಾರೆ. ಅದು ಸಿಗದಿದ್ದಾಗ ಅವರ ಸಂಬಂಧ ದೀರ್ಘಕಾಲ ಉಳಿಯದಿರುವ ಸಾಧ್ಯತೆ ಕೂಡ ಇರುತ್ತದೆ. ಸಂಗಾತಿಗಳು ತಮ್ಮ ಸ್ವತಂತ್ರ ಇಚ್ಛೆಯನ್ನು ನಿಯಂತ್ರಿಸಲ್ಪಡುವುದನ್ನು ಸಹಿಸುವುದಿಲ್ಲ. ನಿಯಂತ್ರಣದ ಸ್ವಭಾವದಿಂದ ಅವರಿಬ್ಬರು ದೂರವಾಗುವ ಸಾಧ್ಯತೆಯೇ ಹೆಚ್ಚು. ಸಂಗಾತಿಗಳ ನಡುವೆ ಕಡಿಮೆ ಸಂವಹನ, ಮಿತ ಮಾತು, ತಮ್ಮ ಭಾವನೆಗಳನ್ನು ವ್ಯಕ್ತಪಡಿಸದೆ ಇರುವುದು ಮತ್ತು ತಮ್ಮ ಸಂಗಾತಿಯ ಮಾತನ್ನು ಕೇಳದಿರುವುದು ಕೂಡ ಅತೃಪ್ತಿಕರ ಭಾವನೆ ಸೃಷ್ಟಿಸುವ ಕಾರಣ ಆ ಸಂಬಂಧ ಹೆಚ್ಚು ಕಾಲ ನಿಲ್ಲದೇ ಹೋಗುವ ಸಾಧ್ಯತೆಗಳಿರುತ್ತದೆ.