ಟಾಪ್ ರೈಟ್

Contributed bybabitha.salian@timesgroup.com|Vijaya Karnataka
kajal kumars new comedy role tenali dl lb film release
ಕಾಜಲ್ ಕಾಮಿಡಿ ಪ್ರಯೋಗ

ಸ್ಯಾಂಡಲ್ ವುಡ್ ನ ‘ಮ್ಯಾಂಗೊ ಪಚ್ಚ’, ‘ಪೆಪೆ’ ಸಿನಿಮಾಗಳಲ್ಲಿಗಂಭೀರ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟಿ ಕಾಜಲ್ ಕುಂದರ್ ಈಗ ‘ತೆನಾಲಿ ಡಿಎ ಎಲ್ ಎಲ್ ಬಿ’ ಚಿತ್ರದ ಮೂಲಕ ಮೊದಲ ಬಾರಿಗೆ ಕಾಮಿಡಿ ಪಾತ್ರದಲ್ಲಿಕಾಣಿಸಿಕೊಳ್ಳುತ್ತಿದ್ದಾರೆ.
ಮಲ್ವೀರ

ನಟಿ ಕಾಜಲ್ ಕುಂದರ್ , ನಟ ಕೋಮಲ್ ಕುಮಾರ್ ಗೆ ಜೋಡಿಯಾಗಿ ‘ತೆನಾಲಿ ಡಿಎ ಎಲ್ ಎಲ್ ಬಿ’ ಸಿನಿಮಾದಲ್ಲಿಕಾಮಿಡಿ ಸ್ಪರ್ಶವಿರುವ ಈ ಕಾಲದ ಸಿಟಿ ಹುಡುಗಿ ಪಾತ್ರದಲ್ಲಿದ್ದಾರೆ. ಸಿದ್ದ್ರುವ್ ಸಿದ್ದು ನಿರ್ದೇಶನದ ಈ ಚಿತ್ರದ ಬಗ್ಗೆ ಹೇಳಿರುವ ಅವರು, ‘ಒಂದು ತುಳು ಕಾಮಿಡಿ ಸಿನಿಮಾದಲ್ಲಿನಟಿಸಿದ್ದೆ. ಅದು ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ. ಈಗ ಕನ್ನಡದಲ್ಲಿಮೊದಲ ಬಾರಿಗೆ ಕಾಮಿಡಿ ಜಾನ್ರ ಮಾಡುತ್ತಿದ್ದೇನೆ. ಅದರ ಮೂರು ವಾರಗಳ ಶೂಟಿಂಗ್ ನಲ್ಲಿಪಾಲ್ಗೊಂಡಿದ್ದೇನೆ’ ಎಂದಿದ್ದಾರೆ.

ನಟನೆಗೆ ಹೆಚ್ಚಿನ ಅವಕಾಶ

‘ಈ ಚಿತ್ರದಲ್ಲಿನನ್ನ ಪಾತ್ರಕ್ಕೆ ಹಲವು ಶೇಡ್ ಗಳಿವೆ. ಹಿಂದಿನ ಸಿನಿಮಾಗಳಲ್ಲಿನನ್ನ ಪರ್ಫಾರ್ಮೆನ್ಸ್ ನೋಡಿಯೇ ನನಗೆ ಈ ಅವಕಾಶ ಸಿಕ್ಕಿದೆ. ಹಾಸ್ಯಮಯವಾಗಿ ಸಾಗುವ ‘ತೆನಾಲಿ ಡಿಎ ಎಲ್ ಎಲ್ ಬಿ’ ಸಿನಿಮಾದಲ್ಲಿನನ್ನ ಪಾತ್ರ ತುಸು ಕಾಮಿಡಿಯನ್ನೂ ಮಾಡುತ್ತದೆ ಮತ್ತು ಪರ್ಫಾರ್ಮೆನ್ಸ್ ಗೂ ಅವಕಾಶ ಇದೆ. ಕೋಮಲ್ ಅವರ ಜತೆಗೆ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ಅವರು ಸೆಟ್ ನಲ್ಲಿತುಂಬಾ ಸಹಜವಾಗಿ ಪ್ರತಿಕ್ರಿಯಿಸುತ್ತಿದ್ದರು. ಸ್ಕಿ್ರಪ್ಟ್ ನಲ್ಲಿಇರುವುದಕ್ಕಿಂತ ಹೆಚ್ಚು ನಗಿಸುವ ಡೈಲಾಗ್ ಗಳನ್ನು ಕ್ಷಣಾರ್ಧದಲ್ಲೇ ಸೃಷ್ಟಿಸಿ ದೃಶ್ಯವನ್ನು ಹೆಚ್ಚು ಸ್ವಾರಸ್ಯಕರವನ್ನಾಗಿಸುತ್ತಿದ್ದರು. ಸೆಟ್ ನಲ್ಲಿಅವರ ಕಾಮಿಡಿ ಟೈಮಿಂಗ್ ಗೆ ನಮಗೆ ನಗು ಕಂಟ್ರೋಲ್ ಮಾಡಲಾಗುತ್ತಿರಲಿಲ್ಲ. ಶೂಟಿಂಗ್ ಮುಗಿದ ಮೇಲೆ ಅವರಷ್ಟು ಸೈಲೆಂಟ್ ಆಗಿರುವ ವ್ಯಕ್ತಿಯನ್ನು ನಾನು ನೋಡಿಲ್ಲ’ ಎಂದಿದ್ದರು.

ತೆನಾಲಿ ಮೇಲೆ ನಿರೀಕ್ಷೆ

ಈ ಸಿನಿಮಾದಲ್ಲಿನನ್ನದು ಗ್ಲಾಮರಸ್ ಪಾತ್ರವಲ್ಲ, ಹಾಗಂತ ಸಾಂಪ್ರದಾಯಿಕ ಕೂಡ ಅಲ್ಲ. ವೆಸ್ಟರ್ನ್ ಉಡುಪು ಕೂಡ ಇರುತ್ತದೆ, ಕುರ್ತಾವನ್ನೂ ಧರಿಸುತ್ತೇನೆ ಎಂದಿರುವ ಕಾಜಲ್ ಕುಂದರ್ , ‘ಸಿನಿಮಾದಿಂದ ಸಿನಿಮಾಗೆ ಪಾತ್ರ ವಿಭಿನ್ನವಾಗಿರಬೇಕೆಂದು ಯೋಚಿಸುತ್ತೇನೆ. ಆ ಚಿತ್ರ ವರ್ಕ್ ಆದರಷ್ಟೇ ಅದರಲ್ಲಿನ ನಮ್ಮ ಪರ್ಫಾರ್ಮೆನ್ಸ್ ಗೂ ಬೆಲೆ ಬರುತ್ತದೆ. ಸಿನಿಮಾ ಗೆದ್ದಾಗಲಷ್ಟೇ ಜನರು ನಮ್ಮನ್ನು ಮತ್ತು ನಮ್ಮ ಕೆಲಸವನ್ನು ನೋಡುತ್ತಾರೆ. ನಾನಂತೂ ನನ್ನ ಕೆಲಸವನ್ನು ಪ್ರಾಮಾಣಿಕವಾಗಿಯೇ ಮಾಡುತ್ತಿದ್ದೇನೆ. ನನ್ನ ನಟನೆಯ ಸಿನಿಮಾಗಳು ಹಿಟ್ ಆಗದಿದ್ದರೂ ನನಗೆ ಅವಕಾಶಗಳು ಬರುತ್ತಿವೆ ಎಂದಾಗ ನನ್ನ ಶ್ರಮಕ್ಕೂ ಫಲ ಸಿಗುತ್ತಿದೆ ಎಂಬ ತೃಪ್ತಿ ಇದೆ. ‘ತೆನಾಲಿ’ ಸಿನಿಮಾ ಬಳಿಕ ನನಗೆ ಬರುವ ಪಾತ್ರಗಳ ವೈವಿಧ್ಯತೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ’ ಎಂದು ವಿವರಿಸಿದ್ದಾರೆ.

ಕೋಟ್

ಎಲ್ಲಾಸಿನಿಮಾಗಳಿಗೆ ಹಾಗೂ ನಟಿಸುವ ಸೆಟ್ ಗಳಲ್ಲೂವಿಭಿನ್ನ ವೈಬ್ಸ್ ಇರುತ್ತವೆ. ರಿಹರ್ಸಲ್ ಮಾಡುವಾಗ, ಸೆಟ್ ನಲ್ಲಿನಟಿಸುವಾಗ ಆ ಜೋನ್ ಗೆ ನಾವೇ ಹೊಂದಿಕೊಳ್ಳುತ್ತೇವೆ. ನಮ್ಮ ಮೈಂಡ್ ಸೆಟ್ ಅದಕ್ಕೆ ಸಿದ್ಧವಾಗುತ್ತದೆ. ಕನ್ನಡದಲ್ಲಿನನ್ನ ನಟನೆಯ ಆರು ಸಿನಿಮಾಗಳು ಬಿಡುಗಡೆಯಾಗಲಿದ್ದು, ‘ತೆನಾಲಿ’ ಮುಂದಿನ ವರ್ಷ ಬರಲಿದೆ.

ಕಾಜಲ್ ಕುಂದರ್ | ನಟಿ