ಸ್ಕೂಲ್ ನ್ಯೂಸ್

Contributed byShrividya Rao|Vijaya Karnataka
event celebrating student achievements in mysore
ಸಾಧಕರ ಸಾಧನೆಯೇ ಮಕ್ಕಳಿಗೆ ಸ್ಪೂರ್ತಿ

ಮಕ್ಕಳ ಸಾಧನೆಗೆ ನಿಜವಾದ ಸ್ಪೂರ್ತಿ ಸಾಧಕರ ಸಾಧನೆಯಿಂದಲೇ ದೊರೆಯುತ್ತದೆ. ಗುರಿ ಸಾಧಿಧಿಸುವ ದೃಢ ಮನಸ್ಸು, ಕಠಿಣ ಪರಿಶ್ರಮ ಮತ್ತು ಉತ್ತಮ ಮಾರ್ಗದರ್ಶನ ಇದ್ದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ನಮ್ಮ ಪ್ರತಿಯೊಂದು ಸಾಧನೆಯೂ ದೇಶದ ಅಭಿವೃದ್ಧಿಗೆ ಪೂರಕವಾಗುವಂತಿರಬೇಕು ಎಂದು ಮೈಸೂರ್ ಕಿರ್ಲೋಸ್ಕರ್ ಎಜುಕೇಶನ್ ಟ್ರಸ್ವ್ ನ ಉಪಾಧ್ಯಕ್ಷ ರವೀಂದ್ರ ವಿ. ಗುಮಾಸ್ತೆ ತಿಳಿಸಿದರು.
ಹರಿಹರದ ಎಂಕೆಎಟಿ ಆಂಗ್ಲಮಾಧ್ಯಮ ಶಾಲೆಯಲ್ಲಿರಾಜಾರಾಂ ಒಳಾಂಗಣ ಕ್ರೀಡಾ ಸಂಕೀರ್ಣದ ಉದ್ಘಾಟನೆ ಹಾಗೂ ಪರೀಕ್ಷೆಯಲ್ಲಿಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಂಡು, ಅದನ್ನು ಸಾಧಿಧಿಸಲು ಶಿಸ್ತು, ಪರಿಶ್ರಮ ಹಾಗೂ ಉತ್ತಮ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಅವರು ಮಾರ್ಗದರ್ಶನ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ ಕೆ ಇ ಟಿ ಟ್ರಸ್ಟನ ಧರ್ಮದರ್ಶಿ ಆರ್ . ಎಸ್ . ಶ್ರೀವಾತ್ಸನ್ ಮಾತನಾಡಿ, ‘ಭಾರತದ ಯುವಪೀಳಿಗೆಯೇ ದೇಶದ ಭವಿಷ್ಯದ ಶಕ್ತಿ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂಸಾಧಿಸುವ ಸಾಮರ್ಥ್ಯ ಅಡಗಿದೆ. ಗುರಿ ಸಾಧಿಧಿಸಲು ಕೇವಲ ಆಸೆ ಇದ್ದರೆ ಸಾಲದು. ದೃಢ ಸಂಕಲ್ಪ, ನಿರಂತರ ಪ್ರಯತ್ನ, ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಛಲ ಅತ್ಯಗತ್ಯ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಎಐಎಸ್ ಎಸ್ ಇ ಪರೀಕ್ಷೆಯಲ್ಲಿ ಶೇ. 96.4 ಅಂಕಗಳನ್ನು ಗಳಿಸಿದ ಕೆ. ಜಿ. ತರುಣ್ ಪಾಟೀಲ್ ಅವರಿಗೆ ಪ್ರತಿಭಾ ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಅಲ್ಲದೆ ಉತ್ತಮ ಸಾಧನೆ ಮಾಡಿರುವ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿರಾಜಾರಾಂ ಒಳಾಂಗಣ ಕ್ರೀಡಾ ಸಂಕೀರ್ಣದ ವಿನ್ಯಾಸಕರ್ತರಾದ ಶ್ರೀ ಸುನೀಲ್ ಶೇಲಾರ್ , ಎಂಕೆಎಟಿ ಬಳಗದ ಸದಸ್ಯರು, ಶಾಲೆಯ ಪ್ರಾಚಾರ್ಯೆ ಅರ್ಚನಾ ಮುಳಗುಂದ್ , ಮುಖ್ಯ ಶಿಕ್ಷಕಿ ಪರಿಮಳಾ ಕೆ., ಪಿಯುಸಿ ವಿಭಾಗದ ಮುಖ್ಯಸ್ಥ ಗುರುಮೂರ್ತಿ ಸಿ.ಎಂ., ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲೆಯ ಆಡಳಿತ ಅಧಿಕಾರಿ ಡಾ. ಬಿ ಟಿ ಅಚ್ಚುತ್ ಕಾರ್ಯಕ್ರಮದ ಸಂಪೂರ್ಣ ಉಸ್ತವಾರಿ ವಹಿಸಿದ್ದರು

ಫೈಲ್ ನೇಮ್ - ಹರಿಹರ