** (ಸ್ಟೋರಿ) ವ್ಯಾಪ್ತಿಯೂ ದೊಡ್ಡದು, ಇನ್ ಸ್ಪೆಕ್ಟರ್ ಹುದ್ದೆಯೂ ಖಾಲಿ

Contributed bymambadynews@gmail.com|Vijaya Karnataka
bantwal rural police vacant post a large issue from legal perspective
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ | ಪ್ರಭಾರ ಅಧಿಕಾರಿಗಳಿಂದ ಕಾರ್ಯನಿರ್ವಹಣೆ

ಹರೀಶ ಮಾಂಬಾಡಿ ಬಂಟ್ವಾಳ
್ಛಛಿಛಿdಚಿa್ಚkvkಞ್ಞಜಃಜಞaಜ್ಝಿ.್ಚಟಞ

ಈ ಪೊಲೀಸ್ ಠಾಣೆ ಇರುವ ಜಾಗ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯಲ್ಲಿರುವ ಬಂಟ್ವಾಳ ಪೇಟೆ. ಆದರೆ ಕರೆ ಬಂದರೆ ಬಂಟ್ವಾಳ ತಾಲೂಕಿನ ಗ್ರಾಮಾಂತರ ಭಾಗಗಳಿಗಷ್ಟೇ ಅಲ್ಲ, ಉಳ್ಳಾಲ ತಾಲೂಕಿನ ವ್ಯಾಪ್ತಿಯ ಗ್ರಾಮಗಳಿಗೂ ಓಡಾಡಬೇಕು. ಸುಮಾರು ಮೂವತ್ತರಷ್ಟು ಗ್ರಾಮಗಳನ್ನು ಒಳಗೊಂಡಿರುವ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಕಟ್ಟಡವೇನೋ ಸುಸಜ್ಜಿತವಾಗಿದೆ. ಆದರೆ ಹಿಂದಿನ ಇನ್ ಸ್ಪೆಕ್ಟರ್ ವರ್ಗಾವಣೆಯಾಗಿ ಹೋದ ಮೇಲೆ ಮತ್ತೆ ಯಾರೂ ಬರಲೇ ಇಲ್ಲ. ಸದ್ಯಕ್ಕೆ ಬಂಟ್ವಾಳ ನಗರ ಠಾಣೆಯ ಇನ್ ಸ್ಪೆಕ್ಟರ್ ಅವರಿಗೇ ಹೆಚ್ಚುವರಿ ಹೊಣೆಗಾರಿಕೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಹಲವು ಸೂಕ್ಷ್ಮ ಪ್ರದೇಶಗಳನ್ನು ಹೊಂದಿರುವ ತಾಲೂಕು. ಅದರಲ್ಲೂಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯು ಒಂದು ಬದಿಯಲ್ಲಿಫರಂಗಿಪೇಟೆ, ಮತ್ತೊಂದು ಬದಿಯಲ್ಲಿಉಳ್ಳಾಲ ತಾಲೂಕಿನ ಸಜೀಪನಡುವರೆಗೂ ಹರಡಿಕೊಂಡಿದೆ. ಇದರ ಮಧ್ಯೆ ಬಂಟ್ವಾಳ ನಗರ ಠಾಣೆ ವ್ಯಾಪ್ತಿಯ ಸರಹದ್ದು ಇದೆ.

ಅಡ್ಡೂರು ಬಳಿಯ ಪೊಳಲಿ, ಕಾವಳಮೂಡೂರು, ಕಡೇಶಿವಾಲ್ಯ, ಫರಂಗಿಪೇಟೆ, ಮಂಚಿ, ಇರಾ, ಪುಚ್ಚೇರಿ, ಸರಪಾಡಿ, ಕಕ್ಯಪದವು ಹೀಗೆ ಠಾಣೆಯಿಂದ ಸುಮಾರು 15 ಕಿ.ಮೀ.ಗೂ ದೂರದ ವ್ಯಾಪ್ತಿ ಇದೆ. ಪ್ರಕರಣಗಳ ಪತ್ತೆ ಸಂದರ್ಭ ಇಷ್ಟು ವ್ಯಾಪ್ತಿಯನ್ನು ನಿಭಾಯಿಸುವುದು ದೊಡ್ಡ ಸವಾಲು.

ಹೀಗೆ ಒಂದು ಭಾಗದಲ್ಲೇನಾದರೂ ಆದರೆ ಅಲ್ಲಿಂದ ಮತ್ತೊಂದು ಭಾಗಕ್ಕೆ ಬರಬೇಕಾದರೆ, ಹಲವು ಕಿಲೋಮೀಟರ್ ಕ್ರಮಿಸಬೇಕು. ದೊಡ್ಡ ವ್ಯಾಪ್ತಿ, ದೂರು, ದುಮ್ಮಾನಗಳು ನೂರಾರು. ಹೀಗಾಗಿ ಇದಕ್ಕೊಬ್ಬರು ಸಾರಥಿಯೂ ಬೇಕು. ಆ ಹುದ್ದೆ ಭರ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಭಾರ ಅಧಿಕಾರಿಗಳ ನಿರ್ವಹಣೆ: ಬಂಟ್ವಾಳ ವೃತ್ತದೊಳಗಿದ್ದ ಮೂರು ಪೊಲೀಸ್ ಠಾಣೆಗಳನ್ನು ಇಲ್ಲಿನ ಕೆಲವೊಂದು ಅಂಶಗಳನ್ನು ಸರಕಾರದ ಮುಂದೆ ಇಟ್ಟು ಪೊಲೀಸ್ ಇನ್ ಸ್ಪೆಕ್ಟರ್ ಠಾಣೆಗಳಾಗಿ ಮಾರ್ಪಾಡು ಮಾಡಿ ಈ ಹಿಂದೆಯೇ ಆದೇಶ ಮಾಡಿತ್ತು. ಇದರಂತೆ ಬಂಟ್ವಾಳ ನಗರ, ವಿಟ್ಲಹಾಗೂ ಬಂಟ್ವಾಳ ಗ್ರಾಮಾಂತರ ಠಾಣೆಗಳಿಗೆ ಪೊಲೀಸ್ ಇನ್ ಸ್ಪೆಕ್ಟರ್ ಗಳನ್ನು ನೇಮಕಗೊಳಿಸಿತ್ತು.

ಸುಮಾರು ಏಳು ತಿಂಗಳ ಹಿಂದೆ ಗ್ರಾಮಾಂತರ ಠಾಣೆಯಲ್ಲಿಪಿ.ಐ. ಆಗಿದ್ದ ಶಿವಕುಮಾರ್ ಅವರನ್ನು ಬೈಂದೂರಿಗೆ ವರ್ಗಾಯಿಸಲಾಗಿತ್ತು. ಬಂಟ್ವಾಳ ನಗರ ಠಾಣೆಯ ಇನ್ ಸ್ಪೆಕ್ಟರ್ ಅನಂತ ಪದ್ಮನಾಭ ಅವರಿಗೆ ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ಗ್ರಾಮಾಂತರದ ಪ್ರಭಾರ ನೀಡಲಾಗಿದೆ. ಇದಕ್ಕೂ ಮುನ್ನ ವಿಟ್ಲಠಾಣೆಯ ಇನ್ ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಅವರಿಗೆ ಪ್ರಭಾರ ಜವಾಬ್ದಾರಿ ಇತ್ತು. ಗ್ರಾಮಾಂತರ ಠಾಣೆಯ ಎಸ್ ಐ ಮಂಜುನಾಥ ಟಿ. ಅವರು ಹೆಚ್ಚುವರಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಖಾಲಿ ಹುದ್ದೆ ಭರ್ತಿಗೆ ಈಗಾಗಲೇ ಸರಕಾರಕ್ಕೆ ಇಲಾಖೆ ಮಟ್ಟದಿಂದ ಪತ್ರ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಟ್

ಬಂಟ್ವಾಳ ಗ್ರಾಮಾಂತರ ಸಹಿತ ಹಲವು ಠಾಣೆಗಳಲ್ಲಿಪೊಲೀಸ್ ಇನ್ ಸ್ಪೆಕ್ಟರ್ ಹುದ್ದೆ ಖಾಲಿ ಇರುವ ಬಗ್ಗೆ ಮಾಹಿತಿ ದೊರಕಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನೆಲೆಯಲ್ಲಿಈ ಹುದ್ದೆಗಳ ಭರ್ತಿಗೆ ವಿಶೇಷ ಆದ್ಯತೆ ಕೊಡಲಾಗುತ್ತದೆ.

-ಯು.ಟಿ.ಖಾದರ್ , ದ.ಕ. ಉಸ್ತುವಾರಿ ಸಚಿವ.

ಚಿತ್ರ: 24ಬಿಎಚ್ ಗ್ರಾಮಾಂತರ

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ

ಚಿತ್ರ: 24ಬಿಎಚ್ ಖಾದರ್

ಸಚಿವ ಯು.ಟಿ.ಖಾದರ್