ಹೊಸದಿಲ್ಲಿ: ‘‘ ದೇಶಾದ್ಯಂತ ಜೆನ್ ಜಿ ಸಿಜೆಪಿಯ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಹೊಂದಿದೆ. ನಮಗೂ ಕೂಡ ತಳಮಟ್ಟದ ಸಮಸ್ಯೆಯನ್ನು ಎತ್ತಿಕೊಂಡು ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಬಯಕೆಯಿದೆ. ಆ ನಿಟ್ಟಿನಲ್ಲಿಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಕೇಂದ್ರೀಕರಿಸುತ್ತಿದ್ದೇವೆ. ಸದ್ಯಕ್ಕೆ ಅಲ್ಪ ವಿರಾಮದಲ್ಲಿದ್ದೇವೆ,’’ ಎಂದು ಸಿಜೆಪಿ ಸದಸ್ಯ ಸುಧೀರ್ ಸಾಂಗ್ವಾನ್ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.‘‘ಶಿಕ್ಷಣ ಕ್ಷೇತ್ರದ ಹೊರತಾಗಿನ ಸಾರ್ವಜನಿಕ ಸಮಸ್ಯೆಗಳ ಕಡೆಗೆ ಇನ್ಮುಂದೆ ಸಿಜೆಪಿ ಗಮನಹರಿಸಲಿದೆ,’’ ಎಂದು ಸಿಜೆಪಿ ವಕ್ತಾರೆ ವೈಷ್ಣವಿ ಗೌರ್ ತಿಳಿಸಿದ್ದಾರೆ.
‘‘ ಇದು ಅಂತ್ಯವಲ್ಲ. ಮತ್ತೆ ಸಿಜೆಪಿ ಒಂದೆಡೆ ಸೇರಲಿದೆ. ಈ ಬಾರಿ ನಾಗರಿಕ ಸಮಾಜ ಹಾಗೂ ಸಾರ್ವಜನಿಕರ ಬಳಿಯಿಂದ ವಾಸ್ತವ ಸಮಸ್ಯೆಯೊಂದನ್ನು ಎತ್ತಿಕೊಂಡು , ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತೇವೆ. ಸಿಜೆಪಿಯನ್ನು ರಾಜಕೀಯ ಪಕ್ಷ ಆಗಿಸುವ ಸಾಮರ್ಥ್ಯವು ನಮಗೆ ಸದ್ಯಕ್ಕಿಲ್ಲ,’’ ಎಂದು ಸ್ಪಷ್ಟಪಡಿಸಿದ್ದಾರೆ.