ಸೆಕೆಂಡ್ ಲೀಡ್ - 1

Contributed bychitravathi.k@timesgroup.com|Vijaya Karnataka
indias 69725 crore shipbuilding initiative a massive transformation in the maritime industry
ಕಡಲ ಉದ್ಯಮಕ್ಕೆ 69,725 ಕೋಟಿ ರೂ. ಅನುದಾನ

- ನೂತನ ಕಡಲ ನೀತಿ ಜಾರಿ
ದೇಶೀಯ ಹಡಗು ನಿರ್ಮಾಣ ಸಾಮರ್ಥ್ಯ, ಕಡಲ ಧನಸಹಾಯ ಮತ್ತು ಕೌಶಲವನ್ನು ಬಲಪಡಿಸುವ ನಿಟ್ಟಿನಲ್ಲಿಕೇಂದ್ರ ಸರಕಾರವು 69,725 ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ಅನ್ನು ಅನುಮೋದಿಸಿದೆ. ಲೋಕಸಭೆಯಲ್ಲಿಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಬಂದರು, ಸಾರಿಗೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ , ಜಾಗತಿಕ ಮಾರುಕಟ್ಟೆಯಲ್ಲಿಭಾರತೀಯ ಹಡಗುಕಟ್ಟೆಗಳು ಎದುರಿಸುತ್ತಿರುವ ವೆಚ್ಚದ ಅಡಚಣೆಗಳನ್ನು ನಿವಾರಿಸಲು 24,736 ಕೋಟಿ ರೂ. ವೆಚ್ಚದ ‘ಹಡಗು ನಿರ್ಮಾಣ ಹಣಕಾಸು ನೆರವು ಯೋಜನೆ’ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ಯಾಕೇಜ್ ನ ಪ್ರಮುಖ ಅಂಶವೆಂದರೆ 25,000 ಕೋಟಿ ರೂ. ಬಂಡವಾಳದೊಂದಿಗೆ ‘ಕಡಲ ಅಭಿವೃದ್ಧಿ ನಿಧಿ’ ಸ್ಥಾಪಿಸುವುದಾಗಿದೆ. ಇದರಲ್ಲಿ20,000 ಕೋಟಿ ರೂ. ಕಡಲ ಹೂಡಿಕೆ ನಿಧಿ ಮತ್ತು 5,000 ಕೋಟಿ ರೂ. ಬಡ್ಡಿ ಪ್ರೋತ್ಸಾಹಕ ನಿಧಿ ಸೇರಿದೆ. ಉತ್ಪಾದನಾ ಸಾಮರ್ಥ್ಯವನ್ನು 4.5 ದಶಲಕ್ಷ ಗ್ರೋಸ್ ಟನ್ ಗೆ ಹೆಚ್ಚಿಸಲು 19,989 ಕೋಟಿ ರೂ.ಗಳ ಹಡಗು ನಿರ್ಮಾಣ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಮ್ಯಾರಿಟೈಮ್ ಇಂಡಿಯಾ ವಿಷನ್ 2030 ಹಾಗೂ ಮ್ಯಾರಿಟೈಮ್ ಅಮೃತ ಕಾಲ ವಿಷನ್ 2047ರ ಗುರಿಗಳಿಗೆ ಅನುಗುಣವಾಗಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ರೂಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆಂಧ್ರಪ್ರದೇಶ, ಗುಜರಾತ್ ಮತ್ತು ತಮಿಳುನಾಡಿನಲ್ಲಿಮೂರು ಹಸಿರು ಕ್ಷೇತ್ರ ಹಡಗು ನಿರ್ಮಾಣ ಸಮುಚ್ಛಯಗಳ ಅಭಿವೃದ್ಧಿಗೆ ಹಸಿರು ನಿಶಾನೆ ನೀಡಲಾಗಿದೆ. ದೊಡ್ಡ ಹಡಗುಗಳನ್ನು ಮೂಲಸೌಕರ್ಯವೆಂದು ವರ್ಗೀಕರಿಸಲಾಗಿದ್ದು, 400ಕ್ಕೂ ಹೆಚ್ಚು ಹಡಗುಗಳ ನೌಕಾಪಡೆ ಸ್ವಾಧೀನ ಯೋಜನೆಯು ಭಾರತೀಯ ಹಡಗುಕಟ್ಟೆಗಳಿಗೆ ಅನುಕೂಲ ಒದಗಿಸುತ್ತದೆ.