ಖೋದಾನಪುರ ಗ್ರಾಮಸ್ಥರಿಂದ ಪ್ರತಿಭಟನೆ | ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆ
ವಿಕ ಸುದ್ದಿಲೋಕ ಬೆಳಗಾವಿಕಿತ್ತೂರು ತಾಲೂಕಿನ ಖೋದಾನಪುರ ಗ್ರಾಮದಲ್ಲಿವ್ಯಕ್ತಿಯೊಬ್ಬರು ದಾಬಾ ಹೆಸರಿನಲ್ಲಿಹೋಟೆಲ್ ಶುರುಮಾಡಿದ್ದು, ಅಲ್ಲಿಅನಧಿಕೃತವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮದ ಮಹಿಳೆಯರು ಮತ್ತು ನಾಗರಿಕರು ಸೋಮವಾರ ಬೆಳಗಾವಿಯ ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘‘ಖೋದಾನಪುರ ಗ್ರಾಮದ ಕೃಷ್ಣಾ ಕಲಾಲ್ ಎಂಬುವರು ಮೊದಲು ದಾಬಾ ಆರಂಭಿಸಿ ನಂತರ ಅದೇ ಸ್ಥಳದಲ್ಲಿಅನಧಿಕೃತವಾಗಿ ಬಾರ್ ತೆರೆದು ಸಾರಾಯಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಗ್ರಾಮದ ಸ್ವಾಸ್ಥ್ಯ ಹಾಳಾಗುತ್ತಿದೆ. ಯುವಕರು ಕುಡಿತಕ್ಕೆ ದಾಸರಾಗುತ್ತಿದ್ದಾರೆ,’’ ಎಂದು ಪ್ರತಿಭಟನಾಕಾರರು ಆರೋಪಿಸಿದರು.
‘‘ಬಾರ್ ಇರುವುದರಿಂದ ಗ್ರಾಮದ ಮಕ್ಕಳು ಹಾಳಾಗುತ್ತಿದ್ದಾರೆ. ಇದೇ ಕಾರಣಕ್ಕೆ ನಮ್ಮೂರಿನ ಹುಡುಗರಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ. ಗೃಹಲಕ್ಷ್ಮೇ ಯೋಜನೆಯ ಹಣವನ್ನೂ ಗಂಡಂದಿರು ಕುಡಿತಕ್ಕೆ ಬಳಸುತ್ತಿದ್ದಾರೆ. ಇದರಿಂದ ಕುಟುಂಬ ನಡೆಸುವುದೇ ಕಷ್ಟವಾಗಿದೆ. ಹೀಗಾಗಿ ಅನಧಿಕೃತ ಬಾರ್ ತಕ್ಷಣ ಬಂದ್ ಮಾಡಿಸಬೇಕು,’’ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಅಬಕಾರಿ ಅಧಿಕಾರಿಗಳು, ‘‘ಶೀಘ್ರದಲ್ಲಿಯೇ ಖೋದಾನಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ,’’ ಭರವಸೆ ನೀಡಿದರು.
ಫೋಟೊ: 27ಮಲ್ಲು6
ಬೆಳಗಾವಿ ಅಬಕಾರಿ ಇಲಾಖೆಯ ಕಚೇರಿ ಎದುರು ಖೋದಾನಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.