ತುಮಕೂರು: ರಾಜ್ಯದ ಬರದ ಸ್ಥಿತಿಗತಿಯ ಬಗ್ಗೆ ಮುಂದಿನ ತಿಂಗಳು ಕೇಂದ್ರ ಸರಕಾರಕ್ಕೆ ಸಮಗ್ರ ಮಾಹಿತಿಯನ್ನು ನೀಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ,‘‘ರಾಜ್ಯದಲ್ಲಿಮಳೆ ಕೊರತೆಯಿಂದ ಆಗಿರುವ ಬರಗಾಲ ಪರಿಸ್ಥಿತಿಯ ಬಗ್ಗೆ ಸಂಸತ್ ಅಧಿವೇಶನದಲ್ಲಿಪ್ರಸ್ತಾಪಿಸುವುದಕ್ಕೆ ಸಂಸದರಿಗೆ ಮನವಿ ಮಾಡಿದ್ದೇವೆ. ಈ ಸಂಬಂಧ ಸೋಮವಾರ ಹೊಸದಿಲ್ಲಿಯಲ್ಲಿಸಭೆಯನ್ನು ಕರೆದಿದ್ದೇವೆ,’’ಎಂದರು.‘‘ಈ ಸಭೆಯಲ್ಲಿರಾಜ್ಯದ ಬರ ಪರಿಸ್ಥಿತಿಯನ್ನು ಸಂಸತ್ತಿನಲ್ಲಿಅಲ್ಲದೇ ಸಂಬಂಧಿಸಿದ ಇಲಾಖೆಗಳ ಸಚಿವರಿಗೂ ಮನವರಿಕೆ ಮಾಡಿ ಅಗತ್ಯ ಸಹಕಾರಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವುದಕ್ಕೆ ಬೇಕಾದ ಎಲ್ಲಪೂರಕ ಮಾಹಿತಿಗಳನ್ನು ನೀಡಲಿದ್ದೇವೆ,’’ಎಂದು ಹೇಳಿದರು.
‘‘ಈಗಾಗಲೇ ನಾನು ಮತ್ತು ಮುಖ್ಯಮಂತ್ರಿಗಳು ಮೂರು ವಿಭಾಗಗಳಲ್ಲಿವೀಕ್ಷಣೆ ಮಾಡಿ, ಬರದ ಪರಿಸ್ಥಿತಿಯ ಪರಿಶೀಲನೆ ನಡೆಸಿದ್ದೇವೆ. ಶೀಘ್ರವೇ ಮೈಸೂರು ವಿಭಾಗದಲ್ಲೂಪರಿಶೀಲನಾ ಸಭೆ ಮಾಡುತ್ತೇವೆ. ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತಗಳು ಸಿದ್ಧವಾಗಿರಬೇಕು. ಜನಜಾನುವಾರುಗಳಿಗೆ ನೀರಿನ ಕೊರೆತೆಯುಂಟಾಗದಂತೆಯೂ ಎಚ್ಚರಿಕೆ ವಹಿಸಲು ಸೂಚಿಸಿದ್ದೇವೆ,’’ಎಂದರು.