ಪುಟ 4 ಫ್ಲೈಯರ್

Contributed byJaya shree|Vijaya Karnataka
skill development inr 530 crore fund and job opportunities for 200000 youths
ಉದ್ಯೋಗ ಆಧರಿತ ತರಬೇತಿಗೆ 530ಕೋಟಿ ರೂ.

- ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದಿಂದ ಮಹತ್ವದ ಕ್ರಮ
ಯುವಕರಿಗೆ ಉದ್ಯೋಗ ಕೊಡಿಸುವುದು ಮತ್ತು ಅವರ ಆದಾಯ ಹೆಚ್ಚಿಸುವುದನ್ನು ಕಡ್ಡಾಯಗೊಳಿಸಲು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಹೊಸ ನಿಯಮ ಜಾರಿ ತಂದಿದೆ. ಇನ್ಮುಂದೆ ತರಬೇತಿ ಸಂಸ್ಥೆಗಳಿಗೆ ನೀಡುವ ಹಣವು, ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸುವ ಹಾಗೂ ಅವರು ಆ ವೃತ್ತಿಯಲ್ಲಿಮುಂದುವರಿಯುವ ಆಧಾರದ ಮೇಲೆ ಸಿಗಲಿದೆ. ಇದಕ್ಕಾಗಿ 530ಕೋಟಿ ರೂ. ವೆಚ್ಚದ ‘ಸ್ಕಿಲ್ಸ್ ಔಟ್ ಕಮ್ ಫಂಡ್ ’ ಆರಂಭಿಸಲಾಗುತ್ತಿದೆ ಸಚಿವಾಲಯ ತಿಳಿಸಿದೆ.

ಯೋಜನೆಯಿಂದ ಕಡಿಮೆ ಆದಾಯ ಹೊಂದಿರುವ ಕುಟುಂಬಗಳ ಸುಮಾರು 2 ಲಕ್ಷ ಯುವಕ-ಯುವತಿಯರಿಗೆ ಅನುಕೂಲವಾಗಲಿದೆ. 18 ರಿಂದ 40 ವರ್ಷ ವಯಸ್ಸಿನ, ಪ್ರಸ್ತುತ ಯಾವುದೇ ಉದ್ಯೋಗ, ಶಿಕ್ಷಣ ಅಥವಾ ತರಬೇತಿಯಲ್ಲಿಇಲ್ಲದ ಯುವಕರು, ಶಾಲಾ-ಕಾಲೇಜು ಡ್ರಾಪ್ ಔಟ್ ಗಳು ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ಈ ಯೋಜನೆಯಲ್ಲಿಶೇ. 50ರಷ್ಟು ಮಹಿಳಾ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸುವ ಗುರಿ ಹೊಂದಲಾಗಿದೆ. ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮವು (ಎನ್ ಎಸ್ ಡಿಸಿ) ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಿಎಸ್ ಆರ್ ನಿಧಿಯನ್ನು ಕ್ರೋಡೀಕರಿಸಿ ಈ ಬೃಹತ್ ಯೋಜನೆಯನ್ನು ನಿರ್ವಹಿಸಲಿದೆ.

ಮಾರುಕಟ್ಟೆಯಲ್ಲಿಹೆಚ್ಚಿನ ಬೇಡಿಕೆ ಇರುವ ಹಾಗೂ ಭವಿಷ್ಯದ ಆರ್ಥಿಕತೆಗೆ ಅಗತ್ಯವಿರುವ ಕ್ಷೇತ್ರಗಳಲ್ಲಿಕನಿಷ್ಠ ಶೇ. 40ರಷ್ಟು ತರಬೇತಿ ನೀಡಲಾಗುತ್ತದೆ. ಇದರಿಂದ ತರಬೇತಿ ಸಂಸ್ಥೆಗಳು ಮತ್ತು ಉದ್ಯೋಗದಾತರ ನಡುವೆ ಉತ್ತಮ ಬಾಂಧವ್ಯ ಬೆಳೆಯಲಿದ್ದು, ಉದ್ಯೋಗ ಮಾರುಕಟ್ಟೆಯ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲು ಸಾಧ್ಯವಾಗುತ್ತದೆ. ಈ ಫಲಿತಾಂಶ ಆಧರಿತ ಧನಸಹಾಯ ವ್ಯವಸ್ಥೆಯಿಂದಾಗಿ ಯುವಕರು ಕೇವಲ ಸರ್ಟಿಫಿಕೇಟ್ ಪಡೆಯುವುದಷ್ಟೇ ಅಲ್ಲದೆ, ಉತ್ತಮ ವೇತನ ನೀಡುವ ಸ್ಥಿರವಾದ ವೃತ್ತಿಜೀವನವನ್ನು ಕಂಡುಕೊಳ್ಳಲು ಸಹಾಯವಾಗಲಿದೆ.

ಹೊಸ ವ್ಯವಸ್ಥೆಯು ಉದ್ಯೋಗದಾತರು ಮತ್ತು ತರಬೇತಿ ನೀಡುವ ಸಂಸ್ಥೆಗಳ ನಡುವೆ ನಿಕಟ ಸಹಕಾರವನ್ನು ಉತ್ತೇಜಿಸುತ್ತದೆ. ಇದರಿಂದಾಗಿ ಪ್ರಸ್ತುತ ಕಾರ್ಮಿಕ ಮಾರುಕಟ್ಟೆಗೆ ಅಗತ್ಯವಿರುವ ಕೌಶಲಗಳಿಗೆ ತಕ್ಕಂತೆ ತರಬೇತಿ ನೀಡುವುದು ಸಾಧ್ಯವಾಗಲಿದ್ದು, ಯುವಜನರಿಗೆ ಸುಸ್ಥಿರ ವೃತ್ತಿಜೀವನದ ಜೊತೆಗೆ ನಿರಂತರ ಆದಾಯದ ಬೆಳವಣಿಗೆಗೂ ಹೊಸ ಹಾದಿ ತೆರೆದುಕೊಳ್ಳಲಿದೆ.