* ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿತ್ಯಾಗರಾಜು ಸೆಂಟ್ರಲ್ ಶಾಲೆಗೆ ದ್ವಿತೀಯ ಸ್ಥಾನ
ವಿಕ ಸುದ್ದಿಲೋಕ ಬಿಡದಿಬಿಡದಿಯ ತ್ಯಾಗರಾಜು ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ಬಾಗಲಕೋಟೆ ಜಿಲ್ಲೆತೆರದಾಳದಲ್ಲಿನಡೆದ ಸಿಬಿಎಸ್ ಇ ಶಾಲೆಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿಬಿಡದಿಯ ತ್ಯಾಗರಾಜು ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿರುವ ಡಾ.ಸಿದ್ರಾಮಪ್ಪ ದಾನಿಗೊಂಡ ಶಾಲೆಯಲ್ಲಿಜುಲೈ 24, 25 ಮತ್ತು 26ರಂದು ಮೂರು ದಿನಗಳ ಕಾಲ ನಡೆದ 2026-27ನೇ ಸಾಲಿನ ಸಿಬಿಎಸ್ ಇ ಶಾಲೆಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿರಾಜ್ಯದ ನಾನಾ ಭಾಗಗಳಿಂದ ಅನೇಕ ತಂಡಗಳು ಆಗಮಿಸಿ ಭಾಗವಹಿಸಿದ್ದವು.
14 ವರ್ಷದೊಳಗಿವ ಬಾಲಕರ ವಿಭಾಗದ ವಾಲಿಬಾಲ್ ಫೈನಲ್ ಪಂದ್ಯದಲ್ಲಿಬಳ್ಳಾರಿಯ ರಾಷ್ಟೊ್ರೕತ್ಥಾನ ಶಾಲೆ ಹಾಗೂ ಬಿಡದಿಯ ತ್ಯಾಗರಾಜು ಸೆಂಟ್ರಲ್ ಸ್ಕೂಲ್ ತಂಡಗಳು ಮುಖಾಮುಕಿಯಾಗಿದ್ದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಅಂತಿಮ ಪಂದ್ಯದಲ್ಲಿರಾಷ್ಟೊ್ರೕತ್ಥಾನ ಶಾಲೆಯ ವಿದ್ಯಾರ್ಥಿಗಳು ಗೆಲುವಿನ ನಗೆ ಬೀರಿದರು. ತ್ಯಾಗರಾಜ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ರನ್ನರ್ ಆಫ್ ಪ್ರಶಸ್ತಿಗೆ ಭಾಜನರಾದರು.
ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಶಾಲಾ ತಂಡಗಳು ಕ್ರೀಡಾಸ್ಫೂರ್ತಿ, ಶಿಸ್ತು ಮತ್ತು ಕೌಶಲ್ಯಯುಕ್ತ ಆಟದ ಮೂಲಕ ಗಮನ ಸೆಳೆದರು. ಬಲಿಷ್ಠ ಸಿಬಿಎಸ್ ಇ ಶಾಲಾ ತಂಡಗಳಿದ್ದ ಈ ಪಂದ್ಯಾವಳಿಯಲ್ಲಿತ್ಯಾಗರಾಜು ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಶಿಸ್ತಿನ ಆಟದ ಮೂಲಕ ಗಮನಾರ್ಹ ಪ್ರದರ್ಶನ ನೀಡಿ ಫೈನಲ್ ಹಂತ ತಲುಪಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಸಿಇಒ ಸಂದೀಪ್ ಅವರು, ಪ್ರಾಂಶುಪಾಲರಾದ ವಿದ್ಯಾಲಕ್ಷ್ಮೀ, ದೈಹಿಕ ಶಿಕ್ಷಣ ಶಿಕ್ಷಕರು, ಬೋಧಕ ವೃಂದ ಹಾಗೂ ಪೋಷಕರು ಹರ್ಷವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿವಿದ್ಯಾರ್ಥಿಗಳ ಪ್ರತಿಭೆಯನ್ನು ಉತ್ತೇಜಿಸುವಲ್ಲಿತ್ಯಾಗರಾಜು ಸೆಂಟ್ರಲ್ ಶಾಲೆ ಸದಾ ಮುಂದಿದ್ದು, ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಕ್ರೀಡಾಸಕ್ತಿ ಹಾಗೂ ಪ್ರೇರಣೆ ಬೆಳೆಸಲಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
28ಬಿಡಿಆರ್ ಫೋಟೋ-4-ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿದ್ವೀತೀಯ ಸ್ಥಾನ ಪಡೆದ ಬಿಡದಿಯ ತ್ಯಾಗರಾಜು ಸೆಂಟ್ರಲ್ ಸ್ಕೂಲ್ ತಂಡ.