ಕರಾಟೆಯಲ್ಲಿವಿದ್ಯಾರ್ಥಿಗಳ ಸಾಧನೆ((ಚೂರುಪಾರು...))

Contributed byhai.dhl562110@gmail.com|Vijaya Karnataka
student achievements in karate success at global karate championship
ಕರಾಟೆಯಲ್ಲಿವಿದ್ಯಾರ್ಥಿಗಳ ಸಾಧನೆ

ಕುಂದಾಣ: ಇತ್ತೀಚೆಗೆ ಬೆಂಗಳೂರಿನಲ್ಲಿನಡೆದ 4ನೇ ದಕ್ಷಿಣ ಭಾರತ ಮುಕ್ತ ಕರಾಟೆ ಚಾಂಪಿಯನ್ ಶಿಪ್ -2026ರಲ್ಲಿದೇವನಹಳ್ಳಿ ತಾಲೂಕಿನ ಇಲತೊರೆ ಗ್ರಾಮದ ಮಾತೃ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಚಿ-ಕು-ಕರಾಟೆ-ಡು ಭಾರತ ಒಕ್ಕೂಟ ವತಿಯಿಂದ ಆಯೋಜಿಸಿದ್ದ ಈ ಚಾಂಪಿಯನ್ ಶಿಪ್ ನಲ್ಲಿಗುಂಗುನ್ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಗುಂಜನ್ ದ್ವಿತೀಯ ಸ್ಥಾನ, ಚಂದನ್ ಟಿ., ಪಾಯಲ್ , ಸಾಹಿತ್ಯ, ಸಮಥ್ ರ್ , ಸುಚಿತ್ ಹಾಗೂ ಖುಷಿ ತೃತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿಮಾತೃ ವಿದ್ಯಾನಿಕೇತನ ಶಾಲೆ ವ್ಯವಸ್ಥಾಪಕರಾದ ರಾಮು.ಎ., ಮೋಹನ್ .ಎ., ಮುಖ್ಯಶಿಕ್ಷಕಿ ಸೌಮ್ಯ.ಎಚ್ .ಪಿ., ಕರಾಟೆ ಶಿಕ್ಷಕ ಎಂ.ಎನ್ .ಗೋಪಾಲಕೃಷ್ಣ ಯಾದವ್ ಉಪಸ್ಥಿತರಿದ್ದರು.

ಚಿತ್ರ: 28 ಕುಂದಾಣ 1