ಗ್ಲಾಸ್ಗೊ: ಭಾರತದ ತ್ರಿವಳಿ ಬಾಕ್ಸರ್ ಗಳಾದ ಸಚಿನ್ ಸಿವಾಚ್ , ಅಂಕುಶ್ ಮತ್ತು ಸಾಕ್ಷಿ ಚೌಧರಿ ಕಾಮನ್ ವೆಲ್ತ್ ಗೇಮ್ಸ್ ನ ಬಾಕ್ಸಿಂಗ್ ಸ್ಪರ್ಧೆಯ ತಮ್ಮ ವಿಭಾಗಗಳಲ್ಲಿಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದಾರೆ.
ಆದಾಗ್ಯೂ ಸುಮಿತ್ ಪುರುಷರ 70 ಕೆ.ಜಿ ವಿಭಾಗದ 16ನೇ ಸುತ್ತಿನಲ್ಲಿಐರ್ಲೆಂಡ್ ನ ಜಾನ್ ಮೆಕ್ ಕಾನೆಲ್ ವಿರುದ್ಧ 1-4ರಲ್ಲಿಪರಾಭವಗೊಂಡರು. ಇದಕ್ಕೂ ಮುನ್ನ ಸಚಿನ್ ಪುರುಷರ 60 ಕೆ.ಜಿ ವಿಭಾಗದಲ್ಲಿ4-1ರಲ್ಲಿಇಂಗ್ಲೆಂಡ್ ನ ವಿಲಿಯಮ್ ಹೇವಿಟ್ ವಿರುದ್ಧ ಗೆದ್ದರೆ, ಸಾಕ್ಷಿ ಮಹಿಳೆಯರ 51 ಕೆ.ಜಿ ವಿಭಾಗದಲ್ಲಿ5-0 ಅಂತರದಿಂದ ಬೋಟ್ಸಾವಾನಾದ ಲೆಥಾಬೊ ಎದುರು ಜಯ ಗಳಿಸಿದರು. ಉದಯೋನ್ಮುಖ ಬಾಕ್ಸರ್ ಅಂಕುಶ್ ಪುರುಷರ 80 ಕೆ.ಜಿ ವಿಭಾಗದಲ್ಲಿ5-0 ಅಂತರದಲ್ಲಿಆಂಟಿಗುವಾದ ಜನ್ ಜಲಾನ್ ಎದುರು ಗೆದ್ದು ಬೀಗಿದರು.