ತನಿಖೆ ವಿಳಂಬ ಖಂಡಿಸಿ ಪ್ರತಿಭಟನೆ ಆ.3ಕ್ಕೆ

Contributed byBASAVARAJU KG|Vijaya Karnataka
condemnation of state governments negligence protest against investigation delay
ತನಿಖೆ ವಿಳಂಬ ಖಂಡಿಸಿ ಪ್ರತಿಭಟನೆ ಆ.3ಕ್ಕೆ

ದಾವಣಗೆರೆ: ಮೆಕ್ಕೆಜೋಳ ಖರೀದಿಸಿ ರೈತರಿಗೆ ಹಣ ನೀಡಿದೇ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧ ಆರೋಪಿಗಳಿಂದ ರಿಕವರಿ ಮಾಡಿದ್ದ ಹಣವನ್ನು ಪೊಲೀಸರೇ ದುರ್ಬಳಿಕೆ ಮಾಡಿಕೊಂಡ ಪ್ರಕರಣದ ಸಂಬಂಧ ಸೂಕ್ತ ತನಿಖೆಗೆ ಆಗ್ರಹಿಸಿ ಆಗಸ್ಟ್ 3ರಂದು ಜಿಲ್ಲಾಪೊಲೀಸ್ ಕಚೇರಿ ಎದುರು ಧರಣಿ ನಡೆಸುವುದಾಗಿ ಮೆಕ್ಕೆಜೋಳ ವ್ಯಾಪಾರಿ ಶಿವಲಿಂಗಯ್ಯ ಎಂ.ಗಡಿಗುಡಾಳ್ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಅಂದು ಜಯದೇವ ವೃತ್ತದಿಂದ ಕಾಲ್ನಡಿಗೆಯಲ್ಲಿತೆರಳಿ ಎಸ್ ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಪ್ರಕರಣ ಸಂಬಂಧ ಈಗಾಗಲೇ ಡಿಜಿ ಕಚೇರಿ, ಸಿಎಂ ಕಚೇರಿ, ಗೃಹ ಸಚಿವರು, ಉಪ ಮುಖ್ಯಮಂತ್ರಿ ಹಾಗೂ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಹಿರಿಯ ಅಧಿಕಾರಿಗಳು ಪ್ರಕರಣದ ಆಡಿಯೋ ರೆಕಾರ್ಡ್ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ತನಿಖೆಗೆ ನಿರ್ದೇಶನ ನೀಡಿದ್ದರು. ಆದರೆ, ಸ್ಥಳೀಯ ಪೊಲೀಸರು ಕೋರ್ಟ್ ಆದೇಶವಿದ್ದರೂ ತನಿಖೆ ನಡೆಸದೆ ವಿಳಂಬ ಧೋರಣೆ ಅನುಸರಿಸಿದ್ದಾರೆ. ಇತ್ತೀಚೆಗೆ ಎಸ್ ಪಿ ಶೇಖರ್ ಅವರನ್ನು ಭೇಟಿ ಮಾಡಿದಾಗ, ಪ್ರಕರಣವನ್ನು ಸಿಐಡಿಗೆ ವಹಿಸಿರುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ತನಿಖೆ ಮತ್ತಷ್ಟು ತಡವಾಗುವುದರಿಂದ ಉನ್ನತ ಅಧಿಕಾರಿಗಳೇ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಪತ್ನಿ ಶ್ವೇತಾ, ಅಕ್ಕ ಯಶೋಧ, ಬೊಮ್ಮಲಿಂಗಪ್ಪ, ಅಲ್ಲಾಭಕ್ಷಿ, ಗುರುಪಾದಯ್ಯ ಇದ್ದರು.
----