ಬೇಡಡ್ಕ: ಇಲ್ಲಿನ ಗಾಂಧಿನಗರದಲ್ಲಿರುವ ಮೈದಾನವನ್ನು ನವಸಾರಥಿ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ನವರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಕ್ಲಬ್ ನ ಮಹಾಸಭೆಯು ನಿರ್ಣಯದ ಮೂಲಕ ವಿನಂತಿಸಿತು.
ಕಲೆ, ಕ್ರೀಡೆ, ಸಂಸ್ಕೃತಿ ಮತ್ತು ಸೇವಾ ಕ್ಷೇತ್ರದಲ್ಲಿಪ್ರಮುಖ ಕ್ಲಬ್ ಆಗಿರುವ ನವಸಾರಥಿ ಕ್ಲಬ್ ಎಸ್ಸೆಸ್ಸೆಲ್ಸಿ, ಪ್ಲಸ್ ಟು, ಎಲ್ ಎಸ್ ಎಸ್ ಮತ್ತು ಯುಎಸ್ ಎಸ್ ಪರೀಕ್ಷೆಗಳನ್ನು ಉತ್ತೀರ್ಣರಾದ ಮಕ್ಕಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿತು. ಕಾರ್ಯಕ್ರಮವನ್ನು ಬೇಡಡ್ಕ ಗ್ರಾಮ ಪಂ. 15 ನೇ ವಾರ್ಡ್ ಸದಸ್ಯೆ ಎಂ. ಶೋಭನ ಉದ್ಘಾಟಿಸಿದರು. ವಿ. ಮೋಹನನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಎಂ. ತಂಬಾನ್ , ಕೆ. ಸುಕುಮಾರನ್ , ಟಿ. ಕೆ. ಗಂಗಾಧರನ್ , ಕೆ. ಮುಹಮ್ಮದ್ ಕುಂಞಿ, ಶ್ರೀಜಿತ್ ಕಾಕ್ಕೋಟಮ್ಮ, ವಿಜಯನ್ ತೆರುವತ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಣಿ ಕೋಟ್ಟಪ್ಪಾರ ಸ್ವಾಗತಿಸಿದರು. ಕೆ. ಸಿ. ಮಧುಸೂದನನ್ ವಂದಿಸಿದರು.ನೂತನ ಪದಾಧಿಕಾರಿಗಳು- ಅಧ್ಯಕ್ಷ: ಪ್ರಸಾದ್ ತೇರುವತ್ , ಉಪಾಧ್ಯಕ್ಷ: ಪ್ರಸಾದ್ ತೇರ್ಕೆಕ್ಕರ, ಕಾರ್ಯದರ್ಶಿ: ಕೆ. ಸಿ. ಮಧುಸೂದನನ್ , ಜೊತೆ ಕಾರ್ಯದರ್ಶಿ: ನಿಶಾಂತ್ ಸ್ವರಲಯ ಕೋಶಾಧಿಕಾರಿ: ಮಣಿ ಕೋಟಪಾರ.