ಅಂತರ್ಜಲಮಟ್ಟ ವೃದ್ಧಿಗೆ 2025-26ನೇ ಸಾಲಿನಲ್ಲಿಕೆಎಂಇಆರ್ ಸಿ ಯೋಜನೆಯಡಿ ಅಂದಾಜು 17 ಕೋಟಿ ರೂ. ವೆಚ್ಚದಲ್ಲಿಜಿನುಗು (ಇಂಗು) ಕೆರೆಗಳನ್ನು ತಾಲೂಕಿನ ನಾನಾ ಕಡೆಗಳಲ್ಲಿನಿರ್ಮಿಸಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ
ಜಿನುಗು ಕೆರೆಗಳಲ್ಲಿಮಳೆ ನೀರನ್ನು ಸಂಗ್ರಹಿಸಿ ಗ್ರಾಮದ ಸುತ್ತಲಿನ ಬಾವಿಗಳು, ಹಳ್ಳ-ಕೊಳ್ಳ, ಬೋರ್ ವೆಲ್ ಸೇರಿ ಇತರೆ ಅಂತರ್ಜಲ ಮೂಲಗಳು ಮರುಜೀವ ಪಡೆಯಲು ಸಹಕಾರಿಯಾಗಿದೆ. ಹೊನ್ನಳ್ಳಿ ಸೇರಿ ನಾನಾ ಕಡೆಯಿರುವ ಕೆರೆಗಳಲ್ಲಿಆಗಾಗ್ಗೆ ಮಳೆಯಾಗಿ ನೀರು ಸಂಗ್ರಹವಾಗಿದೆ. ಹೀಗಾಗಿ, ರೈತರ ಜಮೀನಿನ ಬೋರ್ ವೆಲ್ ನಲ್ಲಿಹೆಚ್ಚುವರಿ ನೀರು ದೊರೆಯುವ ಜತೆಗೆ ಜಾನುವಾರುಗಳು ಸೇರಿ ಪಕ್ಷಿಗಳ ದಾಹ ತೀರಿಸಲು ಸಹಕಾರಿಯಾಗಲಿದೆ. ತಾಲೂಕಾದ್ಯಂತ 11 ಕಡೆ ಇಂಗು ಕೆರೆ ನಿರ್ಮಿಸಲು ಯೋಜನೆ ರೂಪಿಸಿದ್ದು ಅಂತರ್ಜಲ ವೃದ್ಧಿ , ಬಾವಿ, ಹಳ್ಳ ಕೊಳ್ಳಗಳಿಗೆ ಮರುಜೀವ ಸರಾಸರಿ 0.75 ರಿಂದ 1 ಮಿಲಿಯನ್ ಕ್ಯುಬಿಕ್ ಫೀಟ್ ಸಾಮರ್ಥ್ಯದವರೆಗೆ ಜಿನುಗು ಕೆರೆಗಳನ್ನು ನಿರ್ಮಿಸಲಾಗುತ್ತದೆ.
ಯಾವ್ಯಾವ ಗ್ರಾಮ?:
ತಾಲೂಕಿನ ಹೊನ್ನಳ್ಳಿ-3, ಸಂಜೀವರಾಯನ ಕೋಟೆ-2, ಹರಿಗಿನದೋಣಿ-1, ಜಾನೇಕುಂಟೆ-2, ಹಲಕುಂದಿ-1, ಬೆಳಗಲ್ಲು-1, ಆಲದಳ್ಳಿ-1 ಸೇರಿ ಒಟ್ಟು 11 ಕಡೆ ಜಿನುಗು ಕೆರೆ ನಿರ್ಮಿಸಲಾಗುತ್ತಿದೆ.
ಬಾಕ್ಸ್ -
ಯಾವ ಕೆರೆಯಲ್ಲಿಎಷ್ಟು ನೀರು ಸಂಗ್ರಹ(ಮಿ.ಕ್ಯೂ. ಫೀಟ್ )
ಕೆರೆಗಳ ಹೆಸರು ನೀರಿನ ಸಂಗ್ರಹ
ಹೊನ್ನಳ್ಳಿ 0.535
ಜಾನೇಕುಂಟೆ 0.98
ಆಲದಳ್ಳಿ 0.349
ಹಲಕುಂದಿ 0.32
ಹರಗಿನಡೋಣಿ 0.35
ಸಂಜೀವರಾಯನ ಕೋಟೆ 0.5
ಬೆಳಗಲ್ಲು 0.392
ಕೋಟ್ -
ಜಿನುಗು ಕೆರೆಗಳಲ್ಲಿಮಳೆಯ ನೀರು ಸಂಗ್ರಹಗೊಂಡು ಬಾವಿ, ಹಳ್ಳ-ಕೊಳ್ಳ, ಬೋರ್ ವೆಲ್ ಸೇರಿ ಇತರೆ ಜಲಮೂಲಗಳಲ್ಲಿಅಂತರ್ಜಲ ವೃದ್ಧಿಗೆ ಸಹಾಯಕವಾಗುತ್ತದೆ. ಶೀಘ್ರವೇ ಜಿನುಗು ಕೆರೆಗಳ ನಿರ್ಮಾಣ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. - ಮಂಜುನಾಥ, ಪ್ರಭಾರ ಎಇಇ, ಸಣ್ಣ ನೀರಾವರಿ ಇಲಾಖೆ, ಬಳ್ಳಾರಿ.
---
26 ಬಿಎಲ್ ವೈ ಅಜಯ್ 03
ಬಳ್ಳಾರಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿಸಣ್ಣ ನೀರಾವರಿ ಇಲಾಖೆಯ ಜಿನುಗು ಕೆರೆಯಲ್ಲಿಮಳೆಯ ನೀರು ಸಂಗ್ರವಾಗಿರುವುದು.