ಕರಾಟೆಯಲ್ಲಿಸಾಧನೆ, ಸನ್ಮಾನ

Contributed bybhadra.md@gmail.com|Vijaya Karnataka
shashank achieves second place at international open karate championship in gangavathi
ಕರಾಟೆಯಲ್ಲಿಸಾಧನೆ, ಸನ್ಮಾನ

ವಿಕ ಸುದ್ದಿಲೋಕ ಕುರುಗೋಡು
ಇತ್ತೀಚೆಗೆ ಗಂಗಾವತಿಯಲ್ಲಿಡ್ರೀಮ್ ವರ್ಡ್ ಮಾರ್ಷಲ್ ಆರ್ಟ್ ಸಂಸ್ಥೆಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿದ್ವಿತೀಯ ಸ್ಥಾನ ಪಡೆದ ಪಟ್ಟಣದ ನಂದಿ ಕರಾಟೆ ಸೆಂಟರ್ ನ ವಿದ್ಯಾರ್ಥಿ ಶಶಾಂಕಗೆ ನಂದಿ ಕರಾಟೆ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ನಂದಿ ಕರಾಟೆ ಸೆಂಟರ್ ನ ಮಾಸ್ಟರ್ ವಿ.ಸತೀಶ್ ಮಾತನಾಡಿ, ‘‘ಸ್ಫರ್ಧೆಯಲ್ಲಿಸೋಲು-ಗೆಲುವು ಮುಖ್ಯವಲ್ಲ. ಸ್ಪರ್ಧೆಗಳಲ್ಲಿಮಕ್ಕಳು ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಪಠ್ಯೆದ ಜತೆ ಪಠ್ಯೇತರ ಚಟುವಟಿಕೆಯಲ್ಲಿಭಾಗವಹಿಸುವುದರಿಂದ ಮಕ್ಕಳು ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಾರೆ,’’ ಎಂದರು.

ನಂದಿ ಕರಾಟೆ ಸೆಂಟರ್ ನ ಮಾಸ್ಟರ್ ಜಿ.ಸುರೇಶ್ , ಡ್ರೀಮ್ ವರ್ಡ್ ಮಾರ್ಷಲ್ ಆರ್ಟ್ ಸಂಸ್ಥೆಯ ಮಾಸ್ಟರ್ ಶಿಹಾನ್ ಜಬಿವುಲ್ಲಾಸೇರಿ ಮತ್ತಿತರರು ಇದ್ದರು.

ಫೋಟೋ ಕ್ಯಾಪ್ಷನ್ : 27ಕೆಜಿಡಿ02

ಕುರುಗೋಡು ಪಟ್ಟಣದ ನಂದಿ ಕರಾಟೆ ಸೆಂಟರ್ ವಿದ್ಯಾರ್ಥಿ ಶಶಾಂಕ್ ಕರಾಟೆ ಸ್ಫರ್ಧೆಯಲ್ಲಿದ್ವಿತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿಸನ್ಮಾನಿಸಲಾಯಿತು.