ಇಂದೇ

Contributed bysatyappanavarpm@gmail.com|Vijaya Karnataka
congress party likely to acknowledge the opinions of party workers
27ಎಸ್ .ಜಿ.ಎನ್ .2

ಸಂಘಟನ್ ಸೃಜನ್ ಅಭಿಯಾನ ಉದ್ಘಾಟನೆ (ಪಾಯಿಂಟ್ )
ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ (ಹೆಡ್ )

ವಿಕ ಸುದ್ದಿಲೋಕ ಶಿಗ್ಗಾವಿ

ಬೂತ್ ಮಟ್ಟದ ಸಾಮಾನ್ಯ ಕಾರ್ಯಕರ್ತನ ಅಭಿಪ್ರಾಯಕ್ಕೂ ಕಾಂಗ್ರೆಸ್ ಪಕ್ಷದಲ್ಲಿಮನ್ನಣೆ ಸಿಗಲಿದೆ. ಕಾರ್ಯಕರ್ತರೇ ಪಕ್ಷದ ಅಡಿಪಾಯ. ಪ್ರತಿಯೊಂದು ಹಂತದಲ್ಲಿಅವರ ಸಲಹೆಗಳನ್ನು ಪಕ್ಷ ಪಾಲಿಸುತ್ತದೆ ಎಂದು ಎಐಸಿಸಿ ಉಸ್ತುವಾರಿ , ಆಂಧ್ರ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಶೇಖ್ ಮಸ್ತಾನ್ ವಲಿ ಹೇಳಿದರು.

ಸೋಮವಾರ ಪಟ್ಟಣದಲ್ಲಿಕಾಂಗ್ರೆಸ್ ಪಕ್ಷದ ತಾಲೂಕು ಘಟಕ ಆಯೋಜಿಸಿದ್ದ ಸಂಘಟನ್ ಸೃಜನ್ ಅಭಿಯಾನ ಉದ್ಘಾಟಿಸಿ ಮಾತನಾಡಿದರು. ‘‘ಈ ಅಭಿಯಾನ ಮೂಲಕ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ಸಮರ್ಥ ವ್ಯಕ್ತಿಗೆ ಜಿಲ್ಲಾಕಾಂಗ್ರೆಸ್ ಸಮಿತಿ ಸಾರಥ್ಯ ನೀಡಲಾಗುತ್ತದೆ. ಪ್ರತಿಯೊಬ್ಬರು ತಮ್ಮ ಅಭಿಪ್ರಾಯವನ್ನು ಲಿಖಿತ ವಾಗಿ ತಿಳಿಸಬೇಕು’’ ಎಂದರು.

ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ‘‘ದೇಶದಲ್ಲಿನೂರಾರು ವರ್ಷಗಳ ಇತಿಹಾಸ ಹೊಂದಿದ ಕಾಂಗ್ರೆಸ್ ಪಕ್ಷವನ್ನು ಸಕಲ, ಸಮೃದ್ಧವಾಗಿ ಸಂಘಟನೆಗೊಳ್ಳಬೇಕಿದೆ. ಈ ನಿಟ್ಟಿನಲ್ಲಿಜಿಲ್ಲಾಕಾಂಗ್ರೆಸ್ ಸಮಿತಿಗೆ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಶಕ್ತಿ ಕಾರ್ಯಕರ್ತರಿಗೆ ಇದೆ. ಆಯ್ಕೆ ಅಭಿಪ್ರಾಯ ಲಿಖಿತವಾಗಿ ಸಲ್ಲಿಸಬೇಕು’’ ಎಂದರು.

ಎಂ.ಎಂ.ಪಠಾಣ ಮಾತನಾಡಿ, ‘‘ಜನಪರ ಕಾರ್ಯಕ್ರಮಗಳನ್ನು ನೀಡಿದ ರಾಜ್ಯ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ, ಜಿಲ್ಲೆಯಲ್ಲಿಪ್ರತಿಯೊಂದು ಬೂತ್ ಮಟ್ಟದಲ್ಲಿಪಕ್ಷವನ್ನು ಸದೃಢವಾಗಿ ಸಂಘಟಿಸಲು ಶ್ರಮಿಸಬೇಕು’’ ಎಂದರು.

ತಾಲೂಕು ಅಧ್ಯಕ್ಷ ಗುಡ್ಡಪ್ಪ ಜಲದಿ, ಗ್ಯಾರೆಂಟಿ ಸಮಿತಿ ಅಧ್ಯಕ್ಷ ಎಸ್ .ಎಫ್ .ಮಣಕಟ್ಟಿ, ಅಬ್ದುಲ್ ಕರೀಂಸಾಬ ಮೊಗಲಲ್ಲಿ, ಶಂಕ್ರಣ್ಣ ಗಂಗಣ್ಣವರ ಸೇರಿದಂತೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿಜಿಲ್ಲಾಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷೆಗಳು ಎಐಸಿಸಿ ಉಸ್ತುವಾರಿಗಳಿಗೆ ಅರ್ಜಿ ಸಲ್ಲಿಸಿದರು.

ಪೋಟೋ ಪೈಲ್ ನೇಮ 27ಎಸ್ .ಜಿ.ಎನ್ .2

ಶಿಗ್ಗಾವಿಯಲ್ಲಿನಡೆದ ಸಂಘಟನ್ ಸೃಜನ್ ಅಭಿಯಾನವನ್ನು ಎಐಸಿಸಿ ಉಸ್ತುವಾರಿ ಶೇಖ್ ಮಸ್ತಾನ್ ವಲಿ ಉದ್ಘಾಟಿಸಿದರು.