ಪಕ್ಷದ ಬಲವರ್ಧನೆಗೆ ಶ್ರಮಿಸಿವಿಕ ಸುದ್ದಿಲೋಕ ದೇವರಹಿಪ್ಪರಗಿ
‘‘ಕಾಂಗ್ರೆಸ್ ನಲ್ಲಿಪಕ್ಷ ನಿಷ್ಠರಿಗೆ ಹೆಚ್ಚಿನ ಬೆಲೆಯಿದ್ದು, ಪ್ರತಿಯೊಬ್ಬರೂ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು. 2028ರ ವಿಧಾನಸಭೆ ಚುನಾವಣೆಯಲ್ಲಿದೇವರಹಿಪ್ಪರಗಿ ಹಾಗೂ ವಿಜಯಪುರದಲ್ಲಿಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು,’’ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ದೇವರಹಿಪ್ಪರಗಿ ಮತಕ್ಷೇತ್ರದ ಮುಳಸಾವಳಗಿಯಲ್ಲಿಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಬೃಹತ್ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘‘ಕೆಲವೇ ದಿನಗಳಲ್ಲಿಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷ ಕಟ್ಟಲು ಶ್ರಮಿಸಬೇಕು. ವಿಶೇಷವಾಗಿ ಎಸ್ ಐಆರ್ ಪ್ರಕ್ರಿಯೆಯಲ್ಲಿಪಾಲ್ಗೊಂಡು ನಮ್ಮ ಮತ ಉಳಿಯುವಂತೆ ನೋಡಿಕೊಳ್ಳಬೇಕು,’’ ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾಯದರ್ಶಿ ಆನಂದಗೌಡ ದೊಡಮನಿ ಮಾತನಾಡಿ, ‘‘ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದಾರೆ. ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಮತದಾರರಿಗೆ ತಿಳಿಸಿ ಮುಂಬರುವ ಎಲ್ಲಚುನಾವಣೆಗಳಲ್ಲಿಗೆಲುವು ಸಾಧಿಸಲು ಶ್ರಮಿಸಬೇಕು,’’ ಎಂದು ಹೇಳಿದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಕಾಂಗ್ರೆಸ್ ಮುಖಂಡರಾದ ಸಿದ್ದನಗೌಡ ಬಿರಾದಾರ, ಎಂ.ಎಂ.ಪಾಟೀಲ, ಸದಾಶಿವ ಕರಜಗಿ, ಸೋಮನಗೌಡ ಪಾಟೀಲ ಕಡ್ಲೇವಾಡ, ಪ್ರಕಾಶ ಗುಡಿಮನಿ, ಸರಿತಾ ನಾಯಿಕ, ಸುನಂದಾ ಸೊನಳ್ಳಿ, ತಿಪ್ಪಣ್ಣ ಸಾಹುಕಾರ ಮೂಲಿಮನಿ, ಮಲಕಪ್ಪ ನಾಯ್ಕೋಡಿ, ಬಿ.ಎಸ್ .ನಾಯ್ಕೋಡಿ, ಬಸವರಾಜ ಇಮ್ಮನ, ರಾವುತ್ ತಳಕೇರಿ, ಸುನೀಲ ಕನಮಡಿ ಇತರರಿದ್ದರು.
ಫೈಲನೇಮ್ 26ಡಿಎಚಪಿ2
ದೇವರಹಿಪ್ಪರಗಿ ಮತಕ್ಷೇತ್ರದ ಮುಳಸಾವಳಗಿಯಲ್ಲಿಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರ ಬೃಹತ್ ಸಭೆಯನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು.