ಶೌಚಾಲಯ ನಿರ್ಮಿಸಲು ಆಗ್ರಹ

Contributed bybeerappapujar93@gmail.com|Vijaya Karnataka
demand to construct womens toilet in town
ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಮನವಿ

ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಸಮೀಪ ಖಾಲಿ ಇರುವ ಜಾಗೆಯಲ್ಲಿಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂದು ಆಗ್ರಹಿಸಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನಿತ್ಯ ನೂರಾರು ಸಂಖ್ಯೆಯಲ್ಲಿಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಶಾಲೆ, ಕಾಲೇಜು, ಸರಕಾರಿ ಕಚೇರಿ ಹಾಗೂ ವಿವಿಧ ವ್ಯಾಪಾರ-ವಹಿವಾಟು ಕೆಲಸಕ್ಕೆ ನಿತ್ಯ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ಇಂದಿರಾ ಕ್ಯಾಂಟೀನ್ ಸುತ್ತಮುತ್ತ ಮಹಿಳೆಯರಿಗೆ ಸೂಕ್ತ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಅವರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿಮಹಿಳೆಯರಿಗಾಗಿ ಸುಸಜ್ಜಿತ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಸಂಘದ ಪದಾಧಿಕಾರಿಗಳು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿಸಿರಾಜ್ ಡಾಲಾಯತ್ , ಸೋಮು ಉಪ್ಪಾರ, ಹನಮಂತಪ್ಪ ಜಗದಮನಿ, ಮಂಜುನಾಥ ಬಸ್ಸಾಪೂರ, ಮಾಬುಸಾಭ್ ಅಂಜನವರ, ರಾಜೇಸಾಭ್ ಮುಲ್ಲಾನವರ, ಪ್ರಶಾಂತ ಹುರಕನವರ, ಬಸವರಾಜ ನಡವಳಕೇರಿ, ಚಂದ್ರಣ್ಣ ಗುಡಸಲಮನಿ, ಮಹಾಂತೇಶ ಹಾದಿಮನಿ, ಕಿರಣ ಗುಡಸಲಮನಿ, ಈರಣ್ಣ ಮೆಣಸಿನಕಾಯಿ, ಜಮಾಲ ನಧಾಪ್ , ನಿಸಾರ ಜಂಗಾಪೂರಿ, ಮಲ್ಲೇಶ ಅಂಕಲಿ, ನಿಸಾರ ಚನ್ನಪಟ್ಟಣ, ಮುರ್ತಜಾ ಧಾರವಾಡ, ದಾವಲ ಹತ್ತಿಮತ್ತೂರ, ಜಲಾನಿ ತಲಿನ, ಇಬ್ರಾಹಿಂ ಪಟೇಗಾರ, ಶಾಹಿದ ಊಳಟ್ಟಿ, ನಿಂಗಪ್ಪ ಮುಳಗುಂದ, ದಾದಾಪೀರ ಸೂರಣಗಿ, ಸುಲೇಮಾನ ಆಡೂರ, ಮೊಹಮ್ಮದ್ ಬಿಜಾಪುರ ಸೇರಿದಂತೆ ಅನೇಕರು ಇದ್ದರು.

ಪೋಟೋ ಕ್ಯಾಪ್ಸನ್ :

ಇಂದಿರಾ ಕ್ಯಾಂಟೀನ್ ಸಮೀಪ ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಬೇಕೆಂದು ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು.