ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆ 5ನೇ ಹಂತದ ಕೊಳವೆ ಮಾರ್ಗದಲ್ಲಿನ ಸೋರಿಕೆ ತಡೆಗಟ್ಟಲು ತುರ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿಜು. 31ರಂದು ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ (ಒಟ್ಟು 15 ಗಂಟೆಗಳ ಕಾಲ) ನಗರದ ಹಲವು ಪ್ರದೇಶಗಳಲ್ಲಿನೀರು ಪೂರೈಕೆಯಲ್ಲಿವ್ಯತ್ಯಯವಾಗಲಿದೆ.ಉತ್ತರ ಹಾಗೂ ಈಶಾನ್ಯ ಬೆಂಗಳೂರಿನ ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಹಾರೋಹಳ್ಳಿ, ಕೆಂಚನಹಳ್ಳಿ, ಗೋವಿಂದಪುರ, ಕಟ್ಟಿಗೇನಹಳ್ಳಿ, ಶ್ರೀನಿವಾಸಪುರ, ಬೆಳ್ಳಳ್ಳಿ, ತಿರುಮೇನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ರಾಚೇನಹಳ್ಳಿ, ಥಣಿಸಂದ್ರ, ಚಳ್ಳಕೆರೆ, ಹೊರಮಾವು, ಗೆದ್ದಲಹಳ್ಳಿ, ಕೊತ್ತನೂರು, ಕಲ್ಕೆರೆ, ವಾರಣಾಸಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನೀರು ಪೂರೈಕೆಯಾಗುವುದಿಲ್ಲಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.
ಅಲ್ಲದೆ, ಪೂರ್ವ ಹಾಗೂ ಬೊಮ್ಮನಹಳ್ಳಿ/ಮಹದೇವಪುರ ವಲಯದ ಬೆಳ್ಳಂದೂರು, ಬೆಳತ್ತೂರು, ದೇವರಬೀಸನಹಳ್ಳಿ, ಗುಂಜೂರು, ಕಾಡಬೀಸನಹಳ್ಳಿ, ಕಾಡುಗೋಡಿ, ಪಣತ್ತೂರು, ರಾಮಗೊಂಡನಹಳ್ಳಿ, ವರ್ತೂರು, ಅಂಬಲಿಪುರ, ಕಸವನಹಳ್ಳಿ, ಕೈಕೊಂಡ್ರಹಳ್ಳಿ, ಕೂಡ್ಲು, ಪರಪ್ಪನ ಅಗ್ರಹಾರ, ದೊಡ್ಡಕನ್ನಹಳ್ಳಿ, ಪಶ್ಚಿಮ ಹಾಗೂ ವಾಯುವ್ಯ ಬೆಂಗಳೂರಿನ ಅಬ್ಬಿಗೆರೆ, ಚಿಕ್ಕಸಂದ್ರ, ಶೆಟ್ಟಿಹಳ್ಳಿ, ಕರಿಓಬನಹಳ್ಳಿ, ಅಂದ್ರಹಳ್ಳಿ, ಬ್ಯಾಡರಹಳ್ಳಿ, ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ, ಹೇರೋಹಳ್ಳಿ, ಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಭಾಗಗಳಿಗೆ ನೀರು ಪೂರೈಕೆಯಾಗುವುದಿಲ್ಲ.
ಉತ್ತರಹಳ್ಳಿ ವಲಯದ ವಸಂತಪುರ, ಉಲ್ಲಾಳ, ಗಾಣಕಲ್ಲು, ಹೆಮ್ಮಿಗೆಪುರ, ಸೋಮಪುರ, ಉತ್ತರಹಳ್ಳಿ, ಸುಬ್ರಮಣ್ಯಪುರ, ಗುಬ್ಬಲಾಳ, ತುರಹಳ್ಳಿ, ಆಲಹಳ್ಳಿ, ಅಂಜನಾಪುರ, ಬಸವನಪುರ, ಬೇಗೂರು, ಗೊಟ್ಟಿಗೆರೆ, ತಲಘಟ್ಟಪುರ, ವಾಜರಹಳ್ಳಿ, ರಘುವನಹಳ್ಳಿ ಮುಂತಾದ ಪ್ರದೇಶಗಳಲ್ಲೂವ್ಯತ್ಯಯವಾಗಲಿದೆ. ಸಾರ್ವಜನಿಕರು ತಮಗೆ ಅಗತ್ಯವಿರುವ ನೀರು ಶೇಖರಿಸಿಟ್ಟುಕೊಳ್ಳಬೇಕು ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.