ರೋಟರಿ ಶಾಲೆಯಲ್ಲಿಕಾರ್ಗಿಲ್ ವಿಜಯೋತ್ಸವ

Contributed byarunraxidi1@gmail.com|Vijaya Karnataka
kargil vijay diwas celebration at rotary school
ವಿಕ ಸುದ್ದಿಲೋಕ ಸಕಲೇಶಪುರ

ಪಟ್ಟಣದ ರೋಟರಿ ಸಂಸ್ಥೆಯ ನರ್ಸರಿ ಶಾಲೆಯ ಆವರಣದಲ್ಲಿಕಾರ್ಗಿಲ್ ವಿಜಯೋತ್ಸವವನ್ನು ಆಚರಣೆ ಮಾಡಲಾಯಿತು.
ಶಾಲೆಯ ಆವರಣದಲ್ಲಿನಡೆದ ಕಾರ ್ಯಕ್ರಮದಲ್ಲಿ ಶಾಲೆಯ ಮಕ್ಕಳು ಸೈನಿಕರ ಸಮವಸ್ತ್ರ ಧರಿಸಿ ಭಾರತ ಮಾತಾಕಿ ಜೈ ಎಂಬ ಘೋಷಣೆ ಕೂಗಿ ಗಮನಸೆಳೆದರು.

ಶಾಲೆಯ ಪ್ರಾಂಶುಪಾಲ ಸುಮಂತ್ ಭಾರ್ಗವ್ ಮಾತನಾಡಿ,‘‘1999 ರ ಕಾರ್ಗಿಲ್ ಯುದ್ಧದಲ್ಲಿಭಾರತೀಯ ಸೈನಿಕರ ಶೌರ್ಯ ಮತ್ತು ತ್ಯಾಗವನ್ನು ಗೌರವಿಸಲಾಗುತ್ತದೆ. ಈ ನಿಟ್ಟಿನಲ್ಲಿರೋಟರಿ ನರ್ಸರಿ ಶಾಲೆಯಲ್ಲಿಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮವನ್ನು ಪ್ರತಿ ವರ್ಷ ಮಕ್ಕಳಿಗೆ ಪರಿಚಯಿಸುವ ದೃಷ್ಟಿಯಿಂದ ಆಯೋಜಿಸುತ್ತಾ ಬರಲಾಗಿದೆ,’’ಎಂದರು.

ಕಾರ ್ಯಕ್ರಮದಲ್ಲಿರೋಟರಿ ಕ್ಲಬ್ ಅಧ್ಯಕ್ಷ ರವಿಕುಮಾರ್ , ನರ್ಸರಿ ಶಾಲೆಯ ಮುಖ್ಯ ಶಿಕ್ಷಕಿ ಪೂಜಾ, ಸಹ ಶಿಕ್ಷಕರು ಹಾಜರಿದ್ದರು.

ಫೋಟೋ(ಊಓ28ಏ1)-ಸಕಲೇಶಪುರದ ರೋಟರಿ ನರ್ಸರಿ ಶಾಲೆಯಲ್ಲಿಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ನಡೆದ ಕಾರ ್ಯಕ್ರಮದಲ್ಲಿಶಾಲಾ ಮಕ್ಕಳು ಯೋಧರ ಸಮವಸ್ತ್ರ ಧರಿಸಿ ಗಮನ ಸೆಳೆದರು.