ದುಶ್ಚಟಗಳಿಂದ ದೂರವಿರಲು ಕರೆ

Contributed byraju.manjunath67@gmail.com|Vijaya Karnataka
health management staying away from addictions is essential
ವಿಕ ಸುದ್ದಿಲೋಕ ರಾಮನಗರ

ಆರೋಗ್ಯ ಸಂಪತ್ತನ್ನು ಕಳೆದುಕೊಂಡರೆ ಮತ್ತೆ ಅದನ್ನು ಗಳಿಸಲು ಸಾಧ್ಯವಿಲ್ಲ. ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಯ್ದುಕೊಳ್ಳಬೇಕು. ನಿರ್ಲಕ್ಷತ್ರ್ಯ ಅಪಾಯಕ್ಕೆ ಕಾರಣವಾಗಲಿದೆ ಎಂದು ರೋಟರಿ ರಾಮಗಡ್ ರಾಕರ್ಸ್ ಅಧ್ಯಕ್ಷ ಎಂ.ಎಚ್ ತಿಳಿಸಿದರು.
ನಗರದಲ್ಲಿರೋಟರಿ ರಾಮಗಡ್ ರಾಕರ್ಸ್ ಹಾಗೂ ಆತ್ಮ ಸ್ಪಂದನ ಫೌಂಡೇಷನ್ ಸಹಯೋಗದಲ್ಲಿಆರೋಗ್ಯ ಶಿಬಿರ ಹಾಗೂ ದುಶ್ಚಟಗಳ ಜಾಗೃತಿ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಉತ್ತಮ ಆರೋಗ್ಯಕ್ಕಾಗಿ ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ರೋಟರಿ ಸಮಾಜದಲ್ಲಿಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಸೇವಾ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ದುಶ್ಚಟಗಳಿಂದ ದೂರವಿದ್ದು ಆರೋಗ್ಯಕರ ಬದುಕಿನತ್ತ ಹೆಜ್ಜೆ ಇಡುವಂತೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಶಿಬಿರದಲ್ಲಿಭಾಗವಹಿಸಿದ್ದ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸುವುದರ ಜತೆಗೆ ಮದ್ಯಪಾನ, ಧೂಮಪಾನ ಹಾಗೂ ಇತರೆ ದುಶ್ಚಟಗಳಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ದುಷ್ಪರಿಣಾಮಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಮತ್ತು ಸಮಯೋಚಿತ ವೈದ್ಯಕೀಯ ತಪಾಸಣೆಯ ಮಹತ್ವವನ್ನು ವೈದ್ಯಕೀಯ ಸಿಬ್ಬಂದಿ ಮನವರಿಕೆ ಮಾಡಿಕೊಟ್ಟರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಶಿಬಿರದಲ್ಲಿಭಾಗವಹಿಸಿ ಆರೋಗ್ಯ ತಪಾಸಣೆ ನಡೆಸಿ, ಸಾರ್ವಜನಿಕರಿಗೆ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿರೊಟೇರಿಯನ್ ಗಳಾದ ತಿಮ್ಮೆಗೌಡ, ಕೃಷ್ಣ ಜಿ., ಅನಿತಾ ಲಕ್ಷ್ಮೀ, ಶಿವರಾಜಮ್ಮ, ಉಮಾ ಎಸ್ .ಎಂ., ಆರೋಗ್ಯ ಇಲಾಖೆಯ ಪ್ರಭಾಕರ್ , ಲ್ಯಾಬ್ ಟೆಕ್ನಿಷಿಯನ್ ಪುಟ್ಟರಾಜು, ಶುಶ್ರೂಷÜಕಿ ಶ್ರುತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫೋಟೊ:

31ಆರ್ ಎನ್ ಆರ್ ಎಂ3:

ರಾಮನಗರದಲ್ಲಿರೋಟರಿ ರಾಮಗಡ್ ರಾಕರ್ಸ್ ಹಾಗೂ ಆತ್ಮ ಸ್ಪಂದನ ಫೌಂಡೇಷನ್ ಸಹಯೋಗದಲ್ಲಿಆರೋಗ್ಯ ಶಿಬಿರ ನಡೆಯಿತು.