ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

Contributed bytirupati8886@gmail.com|Vijaya Karnataka
Vijay Karnataka
ಕಟ್ಟಡ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

ವಿಕ ಸುದ್ದಿಲೋಕ ಮುದೇನೂರು
ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ನಿಮಾರ್ಣಕ್ಕೆ ಅಧ್ಯಕ್ಷ ಹಾಗೂ ಸದಸ್ಯರು ಸ್ಥಳ ಪರಿಶೀಲನೆ ಗುರುವಾರ ನಡೆಸಿದರು.

ಕೃಷಿ ಪತ್ತಿನ ಸಹಕಾರ ಸಂಘ ಸರಕಾರಿ ಶಾಲೆಯ ಹಳೆ ಶಿಥಿಲ ಕಟ್ಟಡದಲ್ಲಿನಡೆಯುತ್ತಿದೆ. ಹೊಸ ಕಟ್ಟಡ ನಿರ್ಮಿಸುವಂತೆ ಸದಸ್ಯರು ಒತ್ತಾಯಿಸುತ್ತು ಬಂದಿದ್ದಾರೆ.

ಸಂಘದ ಸಭೆ ಸಮಾರಂಭ ನಡೆಸಲು ಸ್ಥಳದ ಅಭಾವ ಎದುರಿಸುತ್ತಿದೆ. ಹೊಸ ಕಟ್ಟಡದ ಅವಶ್ಯಕತೆ ಇದೆ.

ಸಂಘದ ಅಧ್ಯಕ್ಷ ಚೇತನಕುಮಾರ ಹಿರೇಮಠ ಹಾಗೂ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡ ನಿರ್ಮಾಣದ ಖರ್ಚು, ವೆಚ್ಚ ಮತ್ತು ಕಟ್ಟಡ ನೀಲನಕ್ಷೆ ಬಗ್ಗೆ ಚರ್ಚಿಸಿದರು.

ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಹುಸೇನಪ್ಪ ಹಿರೇಮನಿ, ನಿರ್ದೇಶಕರಾದ ಚಂದ್ರಶೇಖರ ಗೊರೆಬಾಳ, ರುದ್ರಪ್ಪ ಉಳ್ಳಾಗಡ್ಡಿ, ಮುಖಂಡ ನಿಭೀಸಾಬ್ ಲಾಠಿ ಇದ್ದರು.

ಪೋಟೊ ಶಿರ್ಷಿಕೆ

ಕೆಪಿಎಲ್ 17ಎಮಡಿಆರ್ 2-ಮುದೇನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಹೊಸ ಕಟ್ಟಡ ನಿರ್ಮಾಣಕ್ಕೆ ಅಧ್ಯಕ್ಷ, ಸದಸ್ಯರು ಗುರುವಾರ ಸ್ಥಳ ಪರಿಶೀಲಿಸಿದರು.