ನಡಿಬೆಟ್ಟು ಧೂಮಾವತಿ ದೈವಸ್ಥಾನದಲ್ಲಿಗಣಪ ಹವನ, ಮುಷ್ಟಿ ಕಾಣಿಕೆ ಸಮರ್ಪಣೆ
Contributed by: hkhejmadybs@gmail.com|Vijaya Karnataka•
ವಿಕ ಸುದ್ದಿಲೋಕ ಮೂಲ್ಕಿ
ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗಣಪ ಹವನ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಭಾನುವಾರ ವೇದಮೂರ್ತಿ ಸುಬ್ರಮಣ್ಯ ಭಟ್ ದೇಂದಡ್ಕ ನೇತೃತ್ವದಲ್ಲಿನಡೆಯಿತು.ಬೆಳಗ್ಗೆ ದ್ವಾದಶ ನಾರಿಕೇಳ ಗಣ ಹವನ, ಪೂರ್ಣಾಹುತಿ, ಪ್ರಸಾದ ವಿತರಣೆ, ಮಧ್ಯಾಹ್ನ ಮುಷ್ಟಿ ಕಾಣಿಕೆ ಸಮರ್ಪಣೆ ,ಮಹಾ ಅನ್ನಸಂತರ್ಪಣೆ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ , ಅಡ್ವಕೇಟ್ ಮಹಾಬಲ ಶೆಟ್ಟಿ, ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಪಿ.ವಿ. ಶೆಟ್ಟಿ, ಕ್ಷೇತ್ರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಗುತ್ತಿನಾರ್ ಸುಧಾಕರ ಎಸ್ . ಶೆಟ್ಟಿ ದೆಪ್ಪುಣಿಗುತ್ತು, ಜಗದೀಶ್ ಪ್ರಭು ಪಣಿಕೆರೆ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ಸಮಿತಿಯ ಕಾರ್ಯಾಧ್ಯಕ್ಷ ಜನಾನಂದ ಶೆಟ್ಟಿ ತಿಂಗೊಳೆ ಮನೆ, ಪ್ರಧಾನ ಕಾರ್ಯದರ್ಶಿ ಗಂಗಾಧರ ಶೆಟ್ಟಿ ಬರ್ಕೆ ತೋಟ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ:20ಎಮ್ ಎಲ್ ಕೆ2
ಕ್ಯಾ: ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದಲ್ಲಿಮುಷ್ಟಿ ಕಾಣಿಕೆ ಸಮರ್ಪಣೆ ನಡೆಯಿತು.