ಮಡಿಕೇರಿಯಲ್ಲಿಬೈಕ್ ಜಾಥಾಕ್ಕೆ ಚಾಲನೆ

Contributed bynasirmnkodagu@gmail.com|Vijaya Karnataka
bike rally in madikeri a call for environmental conservation
ವಿಕ ಸುದ್ದಿಲೋಕ ಮಡಿಕೇರಿ

ನಗರದ ರೋಟರಿ ವುಡ್ಸ್ ವತಿಯಿಂದ ಪ್ರಕೃತ್ತಿಗೆ ಧಕ್ಕೆ ತಾರದಿರಿ ಎಂಬ ಸಂದೇಶದ ಬೈಕ್ ಜಾಥಾ ಆಯೋಜಿತವಾಗಿತ್ತು.
ಮಡಿಕೇರಿಯಿಂದ ಭಾಗಮಂಡಲ - ಕರಿಕೆ- ಪೆರಾಜೆ- ಸಂಪಾಜೆ ಮಾರ್ಗವಾಗಿ 150 ಕಿ.ಮೀ. ಸಾಗಿದ ರೋಟರಿ ವುಡ್ಸ್ ಬೈಕ್ ಸವಾರರು ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ರೋಟರಿ ಬೈಕ್ ರಾರ ಯಲಿ - ರೋಬಿ ಹೆಸರಿನ ಜಾಥಾದಲ್ಲಿಅನೇಕ ಗ್ರಾಮಗಳಲ್ಲಿಪರಿಸರ ಮಾಲಿನ್ಯ ಮಾಡದಿರಿ ಎಂಬ ಜಾಗ್ರತಿಯನ್ನು ಮೂಡಿಸಲಾಯಿತು.

ಮಡಿಕೇರಿಯಲ್ಲಿಬೈಕ್ ಜಾಥಾಕ್ಕೆ ರೋಟರಿ ಜಿಲ್ಲಾನಿರ್ದೇಶಕ ಅನಿಲ್ .ಎಚ್ .ಟಿ ಚಾಲನೆ ನೀಡಿ ಮಾತನಾಡಿ, ‘‘ರೋಟರಿ ವುಡ್ಸ್ ನ ಉತ್ಸಾಹಿ ಬೈಕ್ ಸವಾರರು, ಎರಡನೇ ವರ್ಷವೂ ಬೈಕ್ ಜಾಥಾದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕಾರ್ಯ ಕೈಗೊಂಡಿದ್ದಾರೆ ಎಂದು ಶ್ಲಾಘಿಘಿಸಿದರು. ಮುಂದಿನ ದಿನಗಳಲ್ಲೂಇನ್ನಷ್ಟು ಸಂದೇಶಗಳೊಡನೆ ಬೈಕ್ ರಾರ ಯಲಿ ನಡೆಸುಂತಾಗಲಿ,’’ ಎಂದು ಹಾರೈಸಿದರು.

ಬೈಕ್ ಸವಾರಿಯಲ್ಲಿಹರೀಶ್ ಕಿಗ್ಗಾಲು, ರಂಜಿತ್ ಕಿಗ್ಗಾಲು, ಹಂಚೆಟ್ಟಿರ ಮನುಮುದ್ದಪ್ಪ, ಚೇಂದ್ರಿಮಾಡ ವಿನು ಈರಪ್ಪ, ಚಂದ್ರಶೇಖರ್ , ಕಶ್ಯಪ್ , ರಾಜೇಶ್ ಚೌಧರಿ, ಚೇತನ್ , ರವಿಕುಮಾರ್ , ಸೇರಿದಂತೆ 9 ಮಂದಿ ಪಾಲ್ಗೊಂಡಿದ್ದರು.

ಫೋಟೊ: ಎಂಡಿಕೆ20ಎನ್ - ರೊಟರಿ ಬೈಕ್ ಜಾಥ

ಕ್ಯಾಪ್ಷನ್ : ಮಡಿಕೇರಿಯಲ್ಲಿಬೈಕ್ ಜಾಥಾಕ್ಕೆ ರೋಟರಿ ಜಿಲ್ಲೆಯ ನಿರ್ದೇಶಕ ಅನಿಲ್ ಎಚ್ .ಟಿ. ಚಾಲನೆ ನೀಡಿದರು.