ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಕದ್ರಿ ವತಿಯಿಂದ ‘ಕುಡ್ಲಉದ್ಯೋಗ ಮೇಳ-2026’ ನಗರದ ಕದ್ರಿ ಪಾರ್ಕ್ ಸಮೀಪದ ಗೋರಕ್ಷನಾಥ ಜ್ಞಾನ ಮಂದಿರದಲ್ಲಿಭಾನುವಾರ ನಡೆಯಿತು.ರಾಜಾ ಯೋಗಿ ನಿರ್ಮಲನಾಥ್ ಮಹಾರಾಜ್ ಉದ್ಘಾಟಿಸಿದರು. ಸಂಘ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ ಅಧ್ಯಕ್ಷತೆ ವಹಿಸಿದ್ದರು. ಉದ್ಯೋಗ ಮೇಳದಲ್ಲಿ40ಕ್ಕೂ ಅಧಿಕ ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು. ಸಾಫ್ಟ್ ವೇರ್ , ಆಟೋಮೊಬೈಲ್ , ಬ್ಯಾಂಕಿಂಗ್ , ವಿಮೆ, ಶಿಕ್ಷಣ, ರಿಟೇಲ್ , ಹೆಲ್ತ್ ಕೇರ್ , ರಿಯಲ್ ಎಸ್ಟೇಟ್ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿಒಟ್ಟು 1,240ಕ್ಕೂ ಅಧಿಕ ಉದ್ಯೋಗಾವಕಾಶಗಳು ಲಭ್ಯವಿದ್ದವು. ಮೇಳದಲ್ಲಿ1,000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಕೊಂಡು ಸಂದರ್ಶನದಲ್ಲಿಭಾಗವಹಿಸಿದರು.
ಕಾರ್ಯಕ್ರಮದ ಸಂಯೋಜಕ ಎಚ್ .ಕೆ. ಪುರುಷೋತ್ತಮ್ ಪ್ರಾಸ್ತಾವಿಕವಾಗಿ ಮಾತನಾಡಿ, ಉದ್ಯೋಗ ಮೇಳದ ಉದ್ದೇಶ ಹಾಗೂ ಸಂಘದ ಸಮಾಜಮುಖಿ ಚಟುವಟಿಕೆಗಳ ಕುರಿತು ವಿವರಿಸಿದರು.
ಸಂಘ ಕಾರ್ಯದರ್ಶಿ ಹಾಗೂ ಸಂಯೋಜಕ ಯೋಗಿ ವರದರಾಜ್ , ಖಜಾಂಚಿ ಹಾಗೂ ಸಂಯೋಜಕ ಎಲ್ . ಯಶವಂತ್ ಕುಮಾರ್ , ಹರೀಶ್ ಕುಮಾರ್ ಕೆ., ಆಂತರಿಕ ಲೆಕ್ಕ ಪರಿಶೋಧಕ ಹಾಗೂ ಸಂಯೋಜಕ ಕೆ. ಚಂದ್ರಶೇಖರ್ , ಸುನಂದಾ ಕೆ., ಸೌಮ್ಯ ರಾಣಿ, ಯುವ ಘಟಕದ ಅಧ್ಯಕ್ಷ ಹಾಗೂ ಸಂಯೋಜಕ ಸನತ್ , ಸದಸ್ಯರು ಹಾಗೂ ಸಂಯೋಜಕರಾದ ರಾಜೇಶ್ ಕದ್ರಿ, ಚಂದ್ರಕಲಾ ಡಿ. ರಾವ್ , ರಾಕೇಶ್ ಜೋಗಿ, ಸಂಯೋಜಕರಾದ ಸಚ್ಚಿದಾನಂದ ಕೆ. ಹಾಗೂ ವಿನೋದ್ ಉಪಸ್ಥಿತರಿದ್ದರು.