ವಿಕ ಸುದ್ದಿಲೋಕ ಕೃಷ್ಣರಾಜನಗರತಾಲೂಕಿನ ಮಧುವನಹಳ್ಳಿಯ ಬಾಬುಜಗಜೀವನರಾಮ್ ಬಡಾವಣೆಯಲ್ಲಿರುವ ವೀರಭದ್ರೇಶ್ವರಸ್ವಾಮಿ ದೇವಾಲಯದ ಕಾಮಗಾರಿಯನ್ನು ಪೂರ್ಣಗೊಳಿಸಿ ವಿಧಾನಸಭೆ ಚುನಾವಣೆ ಪೂರ್ವದಲ್ಲಿನೀಡಿದ ಭರವಸೆಯಂತೆದೇವರ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ 23ನೇ ವಾರ್ಡ್ ನ ಜಗಜೀವನರಾಮ್ ಬಡಾವಣೆಯಲ್ಲಿ40 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ‘‘ಬಡಾವಣೆಯ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧನಾಗಿದ್ದು, ಈ ವರ್ಷ ಬರುವ ಅನುದಾನದಲ್ಲಿಕನಿಷ್ಠ 50 ಲಕ್ಷ ರೂ.ಗಳನ್ನು ಇಲ್ಲಿನ ಅಭಿವೃದ್ಧಿಗೆ ನೀಡಲಾಗುತ್ತದೆ,’’ ಎಂದರು.
‘‘ಹೆಬ್ಬಾಳು ಹೋಬಳಿಯ ಬೀರನಹಳ್ಳಿ ಗ್ರಾಮದ ಗೇಟ್ ಬಳಿಯಿಂದ ಪಟ್ಟಣದ ಪುರಸಭೆ ವೃತ್ತದವರೆಗೆ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಲು ಅಂದಾಜು ಪಟ್ಟಿ ತಯಾರಿಸಿ ಎಸ್ ಜಿಪಿ ಯೋಜನೆಯಡಿ 10 ಕೋಟಿ ರೂ.ಗಳನ್ನು ಮಂಜೂರು ಮಾಡಿಸಲಾಗಿದ್ದು, ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ,’’ ಎಂದು ಮಾಹಿತಿ ನೀಡಿದರು.
‘‘ಮಧುವನಹಳ್ಳಿ ಬಡಾವಣೆಯ ಮುಖ್ಯರಸ್ತೆಯ ಎರಡು ಬದಿಯಲ್ಲಿರುವ ಮನೆಗಳನ್ನು ತೆರವು ಮಾಡಬೇಕಾಗಿದ್ದು ನಿವಾಸಿಗಳಿಗೆ ಪರಿಹಾರ ನೀಡಲು ಲೋಕೋಪಯೋಗಿ ಇಲಾಖೆ ವತಿಯಿಂದ 20 ಕೋಟಿ.ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರು ಒಪ್ಪಿಗೆ ಸೂಚಿಸಿದ್ದಾರೆ,’’ ಎಂದು ತಿಳಿಸಿದರು.
‘‘ಬಡಾವಣೆಯ ಲಕ್ಕಮ್ಮ-ಲಕ್ಷ್ಮೇದೇವಿ ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಐದು ಲಕ್ಷ ಅನುದಾನ ನೀಡಲಾಗಿದ್ದು, ಸ್ಥಳದ ದಾಖಲಾತಿ ಸರಿಯಿಲ್ಲದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ. ಆದ್ದರಿಂದ ಮುಖ್ಯಾಧಿಕಾರಿಗಳು ದಾಖಲಾತಿ ಸರಿಪಡಿಸಿ ದೇವಸ್ಥಾನಕ್ಕೆ ಸೇರಿದ ಸ್ಥಳದ ಬೌಂಡರಿ ನಿಗದಿ ಮಾಡಿಸಿಕೊಡಬೇಕು,’’ ಎಂದು ತಾಕೀತು ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್ . ಮಹದೇವ್ , ಉದಯಶಂಕರ್ , ಎಸ್ ಸಿ ವಿಭಾಗದ ಅಧ್ಯಕ್ಷ ಡಿ.ವಿ. ಗುಡಿ ನಂದೀಶ್ , ವಕ್ತಾರ ಸೈಯದ್ ಜಾಬೀರ್ , ಲೋಕೋಪಯೋಗಿ ಇಲಾಖೆಯ ಎಇಇ ಜಿ.ಕೆ. ಸಿದ್ದೇಶ್ವರ ಪ್ರಸಾದ್ , ಗುತ್ತಿಗೆದಾರ ಶ್ರೀರಾಂಪುರ ಆನಂದ್ , ಪುರಸಭೆ ಮಾಜಿ ಅಧ್ಯಕ್ಷ ಕೋಳಿಪ್ರಕಾಶ್ , ಮಾಜಿ ಸದಸ್ಯರಾದ ನಟರಾಜು, ಸಿ.ಶಂಕರ್ , ಗ್ರಾಮದ ಮುಖಂಡರಾದ ರಾಮಚಂದ್ರ, ನಂಜುಂಡಸ್ವಾಮಿ, ಶಿವಯ್ಯನ ರವಿ, ಆನಂದಮೂರ್ತಿ, ಕುಮಾರ್ , ಎಂ.ಎಸ್ . ರವಿಕುಮಾರ್ , ನವೀದ್ , ಬೆಟ್ಟುಮಹದೇವ್ , ಎಂ.ಎ. ನಾಗೇಂದ್ರ, ಪಾಗು ಮಹದೇವ್ , ಪೂಜಾರಿ ರವಿ, ಎಂ.ಸಿ. ಆದರ್ಶ, ಅನಿಲ್ ರಾಜ್ ಹಾಜರಿದ್ದರು.