ವಿಕ ಸುದ್ದಿಲೋಕ ಕೂಡ್ಲಿಗಿ‘‘ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಮಳೆಯಿಲ್ಲದೆ ಬರ ಆವರಿಸಿದ್ದು, ಸರಕಾರ ಈ ಕುರಿತು ಕ್ರಮಕೈಗೊಂಡು ರೈತರ ನೆರವಿಗೆ ಧಾವಿಸಬೇಕಿದೆ ಎಂದು ಪ್ರತಿಪಕ್ಷದ ನಾಯಕ ಆರ್ .ಅಶೋಕ್ ಹೇಳಿದರು.
ತಾಲೂಕಿನ ಕಾನಹೊಸಹಳ್ಳಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಭೇಟಿ ಸಂದರ್ಭದಲ್ಲಿಪತ್ರಕರ್ತರೊಂದಿಗೆ ಮಾತನಾಡಿದರು.
ಬಿಜೆಪಿ ಜಿಲ್ಲಾಮುಖಂಡ ರಾಮದುರ್ಗ ಸೂರ್ಯಪಾಪಣ್ಣ ಅವರು ಬಿಜೆಪಿ ಅವಧಿಯಲ್ಲಿಮಂಜೂರಾಗಿದ್ದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದ್ದರೂ ಕೆರೆಗಳಿಗೆ ನೀರು ತುಂಬಿಸಲಾಗಿಲ್ಲ. ಈ ಕುರಿತು ಮುಂಬರುವ ಅಧಿವೇಶನದಲ್ಲಿಸರಕಾರಕ್ಕೆ ಒತ್ತಾಯಿಸಬೇಕು ಎಂದು ಕೋರಿದರು.
ಆಗ, ಆರ್ .ಅಶೋಕ್ ಅವರು ಮಾತನಾಡಿ, ‘‘ಬಿ.ಎಸ್ .ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದ್ದು, ಕಾಂಗ್ರೆಸ್ ಸರಕಾರ ಯೋಜನೆ ಉದ್ಘಾಟಿಸಿದರೂ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ಪಡೆದು ಸರಕಾರಕ್ಕೆ ಕೂಡ್ಲಿಗಿ ತಾಲೂಕಿನ ರೈತರ ಪರವಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ವಿಜಯನಗರ ಜಿಲ್ಲೆಯಲ್ಲಿಎರಡು ದಿನಗಳ ಕಾಲ ಬರ ವೀಕ್ಷಣೆ ಮಾಡಿದ್ದು, ರೈತರಿಗೆ ತೀವ್ರ ತೊಂದರೆಯಾಗಿದೆ ಎಂದು ತಿಳಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಬಣವಿಕಲ್ಲುಕೆ.ನಾಗರಾಜ, ಜಿಲ್ಲಾಉಪಾಧ್ಯಕ್ಷ ಸೂರ್ಯಪಾಪಣ್ಣ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಹುರುಳಿಹಾಳು ಎಚ್ .ರೇವಣ್ಣ, ಮುಖಂಡರಾದ ಕುಲುಮೆಹಟ್ಟಿ ವೆಂಕಟೇಶ್ , ಹನುಮಜ್ಜರು ನಾಗರಾಜ್ , ಕುರಿಹಟ್ಟಿ ಕೋದಂಡರಾಮ, ಮಹಿಳಾ ಮೋರ್ಚಾ ಜಿಲ್ಲಾಕಾರ್ಯದರ್ಶಿ ಹುಲಿಕೆರೆ ಗೀತಾ, ಮಂಡಲ ಅಧ್ಯಕ್ಷೆ ಶಾರದಾ ಕುಂಬಾರ, ಕೇಣೇರ ಮಂಜುನಾಥ, ಮಾಡ್ಲಾಕನಹಳ್ಳಿ, ಧನಂಜಯ, ಆರ್ .ವೀರಣ್ಣ, ಪ್ರಕಾಶ, ಸಿದ್ದೇಶ್ ಗಜ, ಅವಿನಾಶ್ , ರಾಕೇಶ್ , ಗುರು, ಇಮಡಾಪುರ ಹರೀಶ್ ಗೌಡ, ಜಗದೀಶ್ ಇದ್ದರು.
ಫೋಟೋ
೩೦ ಕೂಡ್ಲಿಗಿ ೦೩
ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಗೆ ಭೇಟಿ ನೀಡಿದ್ದ ಪ್ರತಿ ಪಕ್ಷದ ನಾಯಕ ಆರ್ .ಅಶೋಕ್ ಅವರನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರು ಸನ್ಮಾನಿಸಿದರು.