ಇಂದೇ ಗ್ರಾಮೀಣ
Contributed by: VIJAYKUMAR P|Vijaya Karnataka•
ಬಾಷಾ ಪೀರಾಂ ದರ್ಗಾದ ಉರುಸು
ವಿಕ ಸುದ್ದಿಲೋಕ ಹುಬ್ಬಳ್ಳಿತಾಲೂಕಿನ ಪಾಳೆಯಲ್ಲಿಹಜರತ್ ಸೈಯದ್ ಮೊಹಮ್ಮದ್ ಬಾದಶಾ ಖಾದ್ರಿ ಉಫ್ ರ್ ಬಾಷಾ ಪೀರಾಂ ದರ್ಗಾದ ಉರುಸಿನ 14ನೇ ಝಂಡಾ ಕಾರ್ಯಕ್ರಮ ಸೆ.19ರಂದು ಬೆಳಗ್ಗೆ 11.30ರಿಂದ ಸಂಜೆ 5.30ರ ವರೆಗೆ ನಡೆಯಲಿದೆ.
ಅಸರ್ ನಮಾಜವರೆಗೆ ಗ್ಯಾರವೀ ಶರೀಫ್ ವ ಜಿಯಾರತೆ ಮೊಹೆ ಮುಬಾರಕ ಸರಕಾರ ಗೌಸ್ -ಏ-ಆಝಂರವರ ಮೂಹೆ ಮುಬಾರಕ ತೋರಿಸಲಾಗುವುದು. ಮಧ್ಯಾಹ್ನ 1ಕ್ಕೆ ಅನ್ನ ಸಂತರ್ಪಣೆ ಜರುಗಲಿದೆ. ಸಂಜೆ ಉರುಸಿನ ಅಂಗವಾಗಿ ಝಂಡಾ ಏರಿಸುವ ಕಾರ್ಯಕ್ರಮ ಇರಲಿದೆ. ಮೊಹಮ್ಮದ್ ತಾಜುದ್ದೀನ್ ಖಾದರಿ ಉಫ್ ರ್ ತಾಜ ಫೀರಾಂ ಅವರು ಸಾನ್ನಿಧ್ಯ ವಹಿಸುವರು.
ಫೋಟೊ: 18ವಿಜಯ-2
ಹುಬ್ಬಳ್ಳಿ ತಾಲೂಕಿನ ಪಾಳೆ ಗ್ರಾಮದ ಹಜರತ್ ಸೈಯದ್ ಮೊಹ್ಮದ್ ಬಾದಶಾ ಖಾದ್ರಿ ದರ್ಗಾ.